Saturday, 30 December 2017

ಒಗ್ಗರಣೆ

ಒಗ್ಗರಣೆ ಬೇಕು ಮಾತಿನ ಚಕಮಕಿಗೆ
ಕೆಲವೊಮ್ಮೆ ಹಾಸ್ಯವಾಗಿ ಕೆಲವೊಮ್ಮೆ
ಮಾತಿನ ಗಮ್ಮತಿಗೆ ಎಣ್ಣೆ ಸುರಿಯುವ ಹಾಗೆ
ಸಣ್ಣ ನಗುವಿನ ಗುಳಿಗೆ ಮನಸ್ಸಿಗೆ ತಾತ್ಕಾಲಿಕ ಚಿಕಿತ್ಸೆ

ಕೆಲವರದ್ದು ಮಾತಿನ ಒಗ್ಗರಣೆ ಉತ್ಸಾಹದ ಚೆಲುವೆ
ಕೆಲವರದ್ದು ಗಾಯದ ಮೇಲೆ ಉಪ್ಪು ಸುರಿಯುವ ಹಾಗೆ
ಕೆಲವರದ್ದು ಮುನ್ಸೂಚನೆಯ ಕೇಂದ್ರ  ಬಿಂದು
ಕೆಲವರದ್ದು ಟೊಂಕ ಕಟ್ಟಿ ಜಗಳಕ್ಕೆ ನಿಲ್ಲುವ ಯಮ ನುಡಿ
ಒಗ್ಗರಣೆ ಬೇಕು ಮಿತಿ ಇದ್ದರೆ ಅಮೃತ ಅತಿ ಆದರೆ ಆಪತ್ತು


Friday, 29 December 2017

ಕಣ್ಣ ಸನ್ನೆಯಲ್ಲೇ

ಕಣ್ಣ ಸನ್ನೆಯಲ್ಲೇ ಮಾತಾಡಿದಳು ಮೌನ ಗೌರಿ
ಮನದ ಭಾವನಾ ಲಹರಿಯ ಬಿಚ್ಚಿಟ್ಟಳು ಕಣ್ಣ ರೆಪ್ಪೆಯಲ್ಲಿ
ನಾಚಿಕೆಯ ಕಡಲಿನಲ್ಲಿ ಮುಳುಗಿ ಅವಳ ಮೂಗುತಿಯೊಂದೇ ಮಾತಾಡುತಿತ್ತು
ಕಾಲುಬೆರಳುಗಳು  ಚಕ್ರವ್ಯೂಹವ ರೂಪಿಸಿತ್ತು ಕಾಲ್ಚೈನು
ಒಂದೇ ಸಮನೆ ಮಾತಾಡುತಿತ್ತು ಮೌನ ಮುರಿಯದೆ


Wednesday, 27 December 2017

ಅಹಂಕಾರ

ಹಸಿರಿನ ತೋಟಕ್ಕೆ ಬರೆ ಎಳೆಯುವ
ದುಸ್ಸಾಹಸ ಯಾಕೆ ಎಂಟಾಣೆ ಬದುಕಲ್ಲಿ
ಕಾದಿದೆ ಎಲ್ಲರಿಗೂ ಸಾದಿಸೋ ದಾರಿ
ನಿಮ್ಮ ಜಯದ  ಕೊರಳು ಉರುಳಾಗದಿರಲಿ
ಖುಷಿಯ ಕೊಡೊ ಅಕ್ಷಯ ಪಾತ್ರೇಯಾಗಲಿ

ಅಹಂಕಾರ ಬೇರೆಯವರ ಆಹಾರ
ದೋಚದಿರಲಿ ಮುನ್ನಡೆಸೋ ಗುಣವೊಂದೇ
ದಕ್ಕಿಸುವುದು ನಿಮ್ಮ ಕೈ  ಸೇರೋ ಆಭರಣ
ಅಡ್ಡಿ ಪಡಿಸೋ ಜನರಿಗೆ ಕಾದಿದೆ
ಅಡ್ಡಾದಿಡ್ಡಿ ಏರುಪೇರು ಅಂತ್ಯ 



ಆರಂಭ

ನನ್ನ ಆರಂಭ ಶತ ವೇಗದ ಆರಂಭ ಎಂದೂ
ಹಿಂದೆ ತಿರುಗದೆ ಜಯದ ನಾಗಾಲೋಟ ಮುಟ್ಟುವ ತನಕ
ವೈರಿಯೂ ಕೂಡ ನೆರಳು ಮುಟ್ಟದಂತ ಮುನ್ನುಗ್ಗುವ ವೇಗ
ಇತಿಹಾಸವ ಸೃಷ್ಟಿಯೋ ಹೊಸ ಕನಸಿನ ಆರಂಭ
 
ಆರಂಭ ಹೊಸ ಕನಸಿನ ಬೇಟೆಯ ಕಂಗೆಡಿಯೋ ಆಯುಧವಾಗಲಿ
ಆರಂಭ ಹೊಸ ಅನ್ವೇಷಣೆಗೆ ಅಡಿಪಾಯವಾಗಲಿ 
ಆರಂಭ ಹೊಸ ಸಮಾಜದ ನಾಂದಿಯಾ ಸಂಕೇತವಾಗಲಿ
ಆರಂಭದ ಉತ್ತರವೂ ನೀನೆ  ಕೊನೆ ಮುಟ್ಟೋಸೋ ಅಂಬಿಗನು ನೀನೆ

ಸೋಲನ್ನೇ ಸೋಲಿಸೋ ಸರದಾರನಾಗಿ ಮುನ್ನುಗ್ಗು ಗೆಲುವು ನಿನ್ನದೇ 
ನಿನ್ನದೇ ಅಧಿಪತ್ಯ ನಿನ್ನ ನಾಗಾಲೋಟದ ವೇಗಕ್ಕೆ 
ಜಯವು  ನಿನ್ನದೇ ನಿನ್ನ ಅನನ್ಯ  ಪಥದಲ್ಲಿ  ಸಾಗುತ್ತಿರಲು 
ಹೆಳೆಯ ಸೋಲುಗಳನೆಲ್ಲಾ ಮುಚ್ಚಿ ಹೊಸ ದಿಗಂತಕ್ಕೆ ಮುನ್ನುಗ್ಗುವ ಆರಂಭ



ಕುಸುಮದ ಹಾದಿ

ಸಾಸಿವೆಯ ಹಾದಿ ಹಿಡಿದು ಉತ್ತಮ ಮಾರ್ಗ ಸೇರುವ
ಮೂರಂಕಿಯ ಜೀವನಕ್ಕೆ ಬೇಕು  ಪ್ರಶ್ನಾತೀತ ಪ್ರಾರಂಭ
ಇತಿಹಾಸದ ಪುಟ ಸೇರಲು ದೂರವಾಗಬೇಕು ನಕಾರಾತ್ಮಕ
ಚಿಂತನೆಗಳ ಕಣಜ ಸೇರಿಸುವ ವಿಷ ಜಂತುಗಳ ಸುಳಿಯಿಂದ


Tuesday, 26 December 2017

ತಟಸ್ಥ

ಪ್ರಪಂಚವೇ ಸಾಗರವಾಗಿ ಅಲೆಗಳೇ
ಹುಲಿಗಳಾಗಿ ನಮ್ಮೆನ್ನೆಲ್ಲ ಸೆಳೆದರೆ
ಎಲ್ಲಿಗೆ ಓಡಿ ಹೋಗುವುದು
ಅಲೆಗಳ ನಡುವೆ ನಿಲ್ಲುವ ಊರಾವುದಿದೆ


ಬದುಕಿನ ಅಲೆ

ಬದುಕ ತೇರಿಗೆ ಸುಖ ದುಃಖಗಳೇ  ಅಲೆ
ಮುಖದ ಕನ್ನಡಿಗೆ ನಗುವನ್ನೋ ಅಲೆ
ಕಾಣದ ನೋವಿಗೆ ಕಣ್ಣೀರಿನ ಅಲೆ
ಸಾಧನೆಯ ಹಾದಿಗೆ ಯಶಸ್ಸಿನ ಅಲೆ

ಬಣ್ಣದ ಕಲ್ಪನೆಗೆ ಭಾವನೆಯೇ ಅಲೆ
ಸೂಜಿ ಹಂಬಲದ ಶಕ್ತಿಗೆ ಮನೋಬಲವೇ ಅಲೆ
ಬಂದಿಯಾದ ಮನಸ್ಸಿಗೆ ಪ್ರೀತಿಯೇ ಅಲೆ
ಹೃದಯಗಳ ಬೆಸುಗೆಗೆ ನಂಬಿಕೆಯೇ ಅಲೆ







Tuesday, 19 December 2017

ಮೌನ ಮರೆಯಾಗಿ

ಮೌನ ಮರೆಯಾಗಿ
ಕನಸು ದೂರಾಗಿ
ಪಯಣ ಹೊರಟಿದೆ
ಹೊಸ ಪರ್ವವ ಹುಡುಕುತ

ಆರಂಭ ನಂಗಿಲ್ಲ
ಬಿಟ್ಟೋಗೋ ಬದುಕಲ್ಲಿ
ನೂರೆಂಟು ನೋವೊಂದೇ
ನಂದಾಗಿ ಉಳಿದಿದೆ

ಕಣ್ಣೊರೆಸೋ ಕೈಗಳು
ಯಾವದೀನ್ನು ಉಳಿದಿಲ್ಲ
ಕಪ್ಪು ಬಿಳುಪು ಬಣ್ಣವೊಂದೆ
ಕೊನೆಯಲ್ಲಿ ಗುರುತಾಗಿದೆ

ಅತಿ ಆಸೆ ಗತಿಗೆಡಿಸಿ
ಮೂಲೆಗುಂಪು ಮಾಡಿದೆ
ಮನಸ ಮೌಲ್ಯಕ್ಕೆ ಬೆಲೆಕಟ್ಟೋ
ಜನರಲ್ಲಿ ಕಣ್ಣೀರ ಕಂಥೆಗೆ ಬೆಲೆಯುಂಟೆ 

Monday, 11 December 2017

ಕನ್ನಡಿ ತೋರುವ ಮುನ್ನುಡಿ

ಕನ್ನಡಿ ತೋರುವ ಮುನ್ನುಡಿಗೆ
ಹಿನ್ನಡೆ ಆದರೆ ಯಾರು ಹೊಣೆ
ಸೋತರು ಗೆದ್ದರು ಕಾಣುವ ಛಾಯೆ ಒಂದೇ
ಆತ್ಮ ಸಾಕ್ಷಿಯೊಂದೇ ಹೇಳಬೇಕು ನಿಜದ ಬೆಲೆ

ಮೋಸ ಮಾಡಿ ಮಂಟಪ ಕಟ್ಟಿ ಕುಣಿದರೇನು
ಮೇಲೊಬ್ಬ ಕುಳಿತಿಹನು ಗ್ರಹಗತಿಯ ಎಣಿಸುತ್ತ
ಗ್ರಹಚಾರ ಕೆಟ್ಟರೆ ಕೊನೆಗಾಲ ದಂಡೆತ್ತಿಬರುವುದು
ಬೇಗೇಳೋ ಮಹರಾಯ ಶತಮಾನ ಮುನ್ನುಗ್ಗಿ ಹೋಗುತಿಹುದು



Wednesday, 29 November 2017

ಬಕೆಟ್ ಜೀವನ

ಅಳು ಬರದೆ ಅಳುಮುಂಜಿಯಾಗೋದು  ನಗು ಬರದೆ ಹಸನ್ಮುಖಿಯಾಗೋದು
ಬೇರೆಯವರಿಗೆ ಮೆಚ್ಸೋಕೆ ಮಾತಾಡೋದು ಡೋಂಗಿ ಆಗಿ ಬದುಕೋದು
ಕಂಡ ಕಂಡೋರಿಗೆಲ್ಲಾ ಮೇಲೆ ಎತ್ತಿ ಎತ್ತಿ ಕೆಡುವೋದು
ಕಲರ್ ಕಲರ್ ಬಕೆಟ್ ಹಿಡಿಯೋದು ಗುಂಡಿಗೆ ಕೆಡುವೋದು
ಬಕೆಟ್ ಯಾವತಿದ್ರು ಬಕೆಟ್ ಸಣ್ಣ ತೂತು ಆದ್ರೆ ನಿಮ್ ಬಕೆಟ್ ಕಥೆ ಗೋವಿಂದ

Friday, 24 November 2017

ಖಾಲಿ ಹಾಳೆ

ಖಾಲಿ ಹಾಳೆಯಲ್ಲಿ ಮರೆತು ಹೋದ ಹೆಳೆಯ ನೆನಪ ಹೆಕ್ಕುತ್ತಾ
ಮೈಮರೆತು ನಕ್ಕ ದಿನಗಳ ಮೂಟೆಯ ಬಿಚ್ಚಿದಾಗ ಮನಸ್ಸಲ್ಲಿ 
ಬಾನಿನ  ಮೇಲೆ  ತೇಲಾಡುವ ಸಂತೋಷದ ಹಕ್ಕಿ ಮರಿಯು ನಾನಾದೆ
ಮನದಲೊಂದು ಹೃದಯ ಸ್ಪರ್ಶಿ ಗೀತೆಗೆ ಮುನ್ನುಡಿ ಬರೆದೆ

Friday, 17 November 2017

ನಕ್ಕೆ ಬಿಟ್ಟಳು

ನಕ್ಕೆ ಬಿಟ್ಟಳು ಅದ್ಬುತ ಸುಂದರಿ 
ಮತ್ತೆ ತಿರುಗಿ ನೋಡುವ ಹಾಗೆ
ನಕ್ಕೆ ಬಿಟ್ಟಳು ಗುಳಿ ಕೆನ್ನೆಯ ಸ್ವಪ್ನ ಸುಂದರಿ
ನಿಂತಲ್ಲೇ ನನ್ನ ಸವಾಗುವ ಹಾಗೆ

ನಿನ್ನ ನಗುವಿನಲ್ಲೇನೋ ಮಾಟವಿದೇ ಪರವಶನಾದೆ
ನಿನ್ನ ನಗುವಿನ ಲೋಕದಲ್ಲಿ ಕಳೆದೋಗಿ
ನಿನ್ನ ಮನಮೋಹಕ ನಗುವಿನ ಬೇಟೆಗೆ ನಾ ಬಲಿಯಾದೆ
ನಿನ್ನ ಮುಗುಳುನಗೆಯಲ್ಲಿ ಬಂದಿಯಾದೆ


Wednesday, 15 November 2017

ಶೂನ್ಯ

ತಿಳಿ ಸಂತಸದ ಸಂಭ್ರಮಕ್ಕೆ ಶೂನ್ಯ ತನದ ಆಡಂಬರ ಸಾಕಲ್ಲವೇ
ಬಲಾಡ್ಯನನ್ನು ಮಣಿಸಲು ಶೂನ್ಯ  ತನದ ವಿಶ್ವಾಸವೊಂದೇ ಆಯುಧವಲ್ಲವೇ
ಕೋಟಿ ಕೋಟಿ ಕಟ್ಟಿಟ್ಟರೇನು ಶೂನ್ಯ ಸುಖದ ಮುಂದೆ ಹೊತ್ತೊಯ್ಯುವರೇ
ಶೂನ್ಯ ಆಲೋಚನೆಗೆ  ಕೊಡಲೇಬೇಕಿಲ್ಲ ಕಪ್ಪಾ ಕಪ್ಪೆಚಿಪ್ಪಿನಲ್ಲೂ ಸಿಗಬಹುದು ಮುತ್ತಿನ ಹರಳು
ಕತ್ತಲ ಒಳಗಿರುವವರಿಗೆ ಬೆಳಕಿನ ಚಿಂತೆ ಶೂನ್ಯದಿಂದ ಶುರುವಾದ ಪಯಣ ಶೂನ್ಯಕ್ಕೆ ಅಂತ್ಯ  

Tuesday, 31 October 2017

ಖಾಲಿ ಜೇಬಿನ ಪ್ಯಾಂಟು

ನೂರೆಂದು ನಂಟು ಖಾಲಿ ಜೇಬಿನ ಪ್ಯಾಂಟಿನಲ್ಲಿ
ಬಗೆದಷ್ಟೂ ನೋವು ಖಾಲಿ ಜೇಬಿನ ಪ್ಯಾಂಟಿನಲ್ಲಿ
ಹೊಸ ಉತ್ಸಾಹದ ಚಿಲುಮೆ ಖಾಲಿ ಜೇಬಿನ ಪ್ಯಾಂಟು
ಯೋಚನೆಗೆ ಯೋಜನೆಗೆ ರಹದಾರಿ ಖಾಲಿ ಜೇಬಿನ ಪ್ಯಾಂಟು
ಯಶಸ್ವಿ ಕಥೆಯ ಮುಖ್ಯ ತಿರುವು ಖಾಲಿ ಜೇಬಿನ ಪ್ಯಾಂಟು



Monday, 30 October 2017

ಕಣ್ತೆರೆ

ಒಮ್ಮೆ ಕಣ್ತೆರೆದು ಓದು ಜಗದ ಜ್ಞಾನ  ಪುಸ್ತಕದ ಬಂಡಾರದೊಳಡಗಿದೆ
ಒಮ್ಮೆ ಕಣ್ತೆರೆದು ನೋಡು ಪ್ರಪಂಚದ  ಸೊಬಗು ಶೂನ್ಯ ಶಾಂತದ ಪರಿಸರದಲ್ಲಿದೆ
ಒಮ್ಮೆ ಕಣ್ತೆರೆದು ಪಯಣಿಸು ಹೊಸ ತಂತ್ರಜ್ಞಾನದ ಗಾಳಿಯ ಜೊತೆ ಸಾಗಲು
ಒಮ್ಮೆ ಕಣ್ತೆರೆದು ಜೊತೆ ಸಾಗು ಬಲ್ಲವರ ಜೊತೆ ಬದುಕ ಬದಲಾವಣೆಗಾಗಿ
ಕಣ್ತೆರೆ ಒಮ್ಮೆ ಕಣ್ತೆರೆ ನಿನ್ನ ನಿಂಗುವ ಆಗು ಹೋಗುಗಳ ಗುಟ್ಟನು ತಿಳಿಯಲು
ಒಮ್ಮೆ ಕಣ್ತೆರೆದು ನೋಡು ನಿನ್ನಲ್ಲಿದೆ  ಜಗವ ನಿಯಮ ಬದಲಿಸೋ  ನೀತಿ



Sunday, 15 October 2017

ನನ್ನೂರು

ಏರಿ ಮೇಲೊಂದು ಊರು
ಮನೆಯ ಸುತ್ತೆಲ್ಲ ಸೂರು
ಎಳ್ಳಷ್ಟೂ ಬಗೆದರೆ ಸಿಹಿನೀರು
ಕತ್ತಲ ಕಾಡಲ್ಲಿ ನಿಂತಿದೆ ನನ್ನೂರು
ಖುಷಿಯ ಕಡಲಿದು ನನ್ನ ತವರೂರು

Tuesday, 26 September 2017

ಬಣ್ಣದ ಚಿಟ್ಟೆ

ಹಾರುತ್ತಿದೆ ಬಣ್ಣದ ಕಾಮನಬಿಲ್ಲು ತನ್ನ ವೈಯಾರವ ಬಿಚ್ಚಿ
ತನ್ನದೇ ಏಕಾಂತ  ತನ್ನದೇ ಮೂಕ ಲೋಕದ  ಮಾಯಾ ಜಾಲ
ಮಗದೊಮ್ಮೆ ನೋಡಲೇ ಬೇಕೆನಿಸುವ ಸುಂದರ ಬಣ್ಣದ ತೇರು
ಯಾವ ಗಾಳಿಗೂ ಅಂಜದೆ ಹಾರುತ್ತಿರುವೆ ಮನಸೋ ಇಚ್ಛೆ

ಹಾರುತ್ತಿದೆ ಬಣ್ಣದ ಕಾಮನಬಿಲ್ಲು ತನ್ನ ವೈಯಾರವ ಬಿಚ್ಚಿ
ನಿನ್ನ ಬಣ್ಣಕ್ಕೆ ನಾ ಮನಸೋತೆ  ಪ್ರತಿ ದಿನವೂ  ಹಂಬಲಿಸಿದೆ
ನಿನ್ನ ಹಿಡಿಯಲು ನನ್ನ ಬಾಲ್ಯವ  ಪಣಕಿಟ್ಟೆ ಸಿಕ್ಕಿದ್ದು ಮಾತ್ರ
ನಿನ್ನ ಖುಷಿಯ ನೆನಪುಗಳ ಮೂಟೆ  ನನ್ನ ಜೀವನದಂಗಡಿಗೆ



Tuesday, 19 September 2017

ಮುಗಿಲ ಮೇಲೊಂದು ಸುಳ್ಳು ಬಾವುಟ

ಮುಗಿಲ ಮೇಲೊಂದು ಸುಳ್ಳು ಬಾವುಟ 
ಹಾರಿಸಿ ಬಿಟ್ಟೆ ಕಾಮನಬಿಲ್ಲನ್ನು ಬಾಡಿಗೆ ಪಡೆದು 
ದೀರ್ಘಕಾಲದ ಖುಷಿಗೋಸ್ಕರ ಮಗದೊಮ್ಮೆ 
ಕಣ್ಮುಚ್ಚಿ ನಿಂತೇ ಸೂಜಿ ಸುಳ್ಳಿನ ಮರವನು ಏರಿ 

Sunday, 17 September 2017

ಬದುಕ ಭಾರ

ನಡುಕ ತಡೆದು ನುಗ್ಗಿ ನಡೆದು ಜಯದ ಬಾಗಿಲ ತೆರೆಯಲೇ
ಬದುಕ ಭಾರ ಬದಿಗೆ ಒತ್ತಿ ಹೇಡಿಯಾಗಿ ಓಡಿ ಹೋಗಲೇ
ಸುಳ್ಳು ಖುಷಿಯ ಹಿಗ್ಗಿ ಮೆರೆದು ಬದುಕ ದೂರ ಮರೆಯಲೇ
ಕಾಲ ಚಕ್ರದ ದೂಳ ಅರಿಯದೆ ಬಿದ್ದು  ಕೊಚ್ಚಿ ಹೋಗಲೇ

ಮುತ್ತಿನ ಹನಿ

ಆಗದ ಹೋಗದ ಮುಗಿಯದ ಮನಸ್ಸಿನ ಭಾವಕ್ಕೆ
ಹರಿಯದ ಅಂಗಿಯ ತೊಡಿಸಿ ಹೊಸ ಬಟ್ಟೆಯು
ಬೇಕೆಂದರೆ ಮನದ ತಿಕ್ಕಲಾಟಕ್ಕೆ ಹೊಣೆ ಯಾರು
ಅಲೆಗಳ ಹುಡುಕಿ ಅಲೆದಾಡುವ ನಮಗೆ
ಕಣ್ಣಲ್ಲಿ ಬರುವ ಮುತ್ತಿನ ಹನಿಗೆ ಬೆಲೆಯಿಲ್ಲವೇ 

Wednesday, 13 September 2017

ನಿಶಬ್ದ

ಮಳೆಯ ಸೋಗಿಗೂ ಮಳೆಯ ಸೂರಿಗೂ ತನ್ನದೇ ಇಂಪಿದೆ
ಹಳೆಯ ಹಾಡಿಗೂ ಹಳೆಯ  ಸಾಹಿತ್ಯಕ್ಕೂ ತನ್ನದೇ ಕಂಪಿದೆ
ಕೋಗಿಲೆಯು ಕವಿಯಾಗುವುದು  ಅದರಭಿರುಚಿಯ ಮನಗಂಡಾಗ
ನಿಶಬ್ದವೆ ಮಂಟಪವಾಗುವುದು ಮೌನ ಸೆಳೆದಾಗ


Wednesday, 6 September 2017

ಕಗ್ಗತ್ತಲು

ಶೂನ್ಯ ಶೃಂಗಾರದ ನೈಜ ಶಕ್ತಿಯ ಅವಾಸ್ತವಕ್ಕೆ ಕೃತಕ ಅರಿವೇ ಕಾರಣ
ಉತ್ತಮ ಯೋಚನೆಯ ಅಡೆತಡೆಗೆ ಅಪ್ರಬುದ್ದತೆಯೇ  ಅಡ್ಡಿಗಾಲು
ದೃಢ ಕಾರ್ಯದ ಯಶಸ್ಸಿನ ಹಿನ್ನಡೆಗೆ ನಕಾರಾತ್ಮಕತೆಯೇ ಮೂಲ
ಸಾಧನೆಯ ಸಾವಿಗೆ ಮನಸ್ಸಿನ ದುರ್ಬಲತೆಯೇ ಗುರಿಯಿರದ  ಬಾಣ  


Monday, 4 September 2017

ಉತ್ತಮ ನಿರ್ದೇಶಕ

ವರ್ಣರಂಜಿತ ಬಾಳ ಪುಸ್ತಕದ ಮುನ್ನುಡಿಗೆ ಬೇಕು
ಬಣ್ಣದಲಂಕಾರದ   ಹೊಳಪನು ನೀಡುವ ದಿಕ್ಸೂಚಿ
ಬದುಕ ಬಾಣಲೆಯಲ್ಲಿ ತೇಲಾಡಿ ಹೊರಬರಲು ಬೇಕು
ಪರದೆಯ ಸರಿಸಿ ಉತ್ತಮ ನಿರ್ದೇಶನ ನೀಡುವ ನಿರ್ದೇಶಕ



ಹುಚ್ಚು ಕುದುರೆ

ತಿರುಗಿ ತಿರುಗಿ ಹೊರಟೆ ಬದುಕ ಚಿಹ್ನೆಯ ಹುಡುಕುತ
ಉತ್ತರದ ಗುಟ್ಟು ಅರ್ಥೈಸುತ್ತಿಲ್ಲ ನನ್ನ ಶಬ್ದ ಬಂಡಾರದ ಒಳಗೆ 
ಪ್ರತಿ ದಿನದ ನೂಕು ನುಗ್ಗಲಲ್ಲಿ ಗೋಚರಿಸದೆ ಕಣ್ಮರೆಯಾಗಿದೆ
ಭಾವನೆಗಳಿಗೂ ಬೀಗಹಾಕಲಾಗುತ್ತಿಲ್ಲ ಏರು ಪೇರಾದ
ಮನಸ್ಸಿನ ನಾಗಾಲೋಟದಲ್ಲಿ ಬೇರೂರಿ ತಳಕಾಣದಂತೆ ಹುದುಗಿ
ಕಲ್ಪನಾತೀತ ಕಡಲ ಬೆನ್ನೇರಿ ಸಿಡಿದೇಳುತ್ತಿದೆ ಹುಚ್ಚು ಕುದುರೆ

Friday, 21 July 2017

ಅವಲಕ್ಕಿ

ತುಸು ಮೀರಿದ ಸಮಯ ನನ್ನಿಂದಾಗದು
ಬೆಳಗಿನ ಉಪಹಾರದ ತಯಾರಿ
ತುಸು ವೇಗದಲ್ಲೇ ಹೊಳೆಯಿತು
ಮಿಂಚಿನ ಚುರುಕುತನ ಅದರ
ಕಾರ್ಯವೈಖರಿಯಿಂದ ಹೊರಬಂದಿದ್ದೆ
ಅವಲಕ್ಕಿ ಕಲಸೋದು ತಿನ್ನೋದು 😀😀😀😀

Wednesday, 19 July 2017

ಕಟ್ಟುಪಾಡು

ಹಳೆಯ ಕೊಂಡಿಯಲ್ಲಿ ಹಳೆಯ ಕಥೆಯ ಬಗೆದು ಬಗೆದು ತೋಡಿ
ಅಲ್ಪ ತೃಪ್ತಿಗೆ ಖುಷಿಯ ಕಂಡು ಮುಂದಿನ ನಡೆಯ ಮುಚ್ಚಿ
ಬದುಕ ಕಟ್ಟುವ ಕಥೆಯಲ್ಲಿ ಎರವಲು ಸೂತ್ರವ ಸುತ್ತಿಕೊಂಡು
ಜೀವನದ ಗಾಡಿಯ ತಳ್ಳುವ ಕೃತಕ ಕಾರ್ಯಾಗಾರ

ಗಾಳಿಪಟ

ಪಟ ಪಟನೆ ಹಾರುತಿದೆ ಗಾಳಿಪಟ
ಸಣ್ಣ ದಾರದ ಕೈಯ ಸುರುಳಿಯಿಂದ
ಎಂತದೋ ಆತ್ಮಸ್ಥೈರ್ಯ ಮೋಡಮುಟ್ಟುವೆನೆಂದು
ಸ್ಥಿರತೆಯೊಂದೇ ಸವಾಲು ಸಿಕ್ಕ ಅವಕಾಶವ
ಬಿಡದೆ ಮೇಲೇರಿ ಗಗನ ಮುಟ್ಟಲು

Friday, 30 June 2017

ಆಶಾ ದೀಪ

ಮೀನುಗುತ್ತಿದೆ ಆಶಾದೀಪ ಗತಕಾಲದ ವ್ಯಾಕರಣದ
ಹಳೆಯ ಪುಟದ ಸಮಿಕರಣದ ಸಮತೋಲನದಿಂದ
ಚಿಲ್ಮೆಯು ಚಿಮ್ಮುತ್ತಿದೆ ಪ್ರತಿ ಹನಿಯ ಒಡಗುಡಿಕೆಯಿಂದ
ಪ್ರತಿ ದಿನದ ಮೌಲ್ಯಕ್ಕೆ ಹಿಂದಿನದು ಹೆದ್ದಾರಿ
ಮುಂದಿನ ನಡೆಯೊಂದೇ ನಿನ್ನ ಭಂಡಾರದ ಬಾನಾಡಿ

Saturday, 24 June 2017

ಕೃಷಿಕ

ಭೂಮಿ ತಾಯಿಯ ಹಸಿರಿನ ಸೇವಕ
ಎಂದೂ ದಣಿಯದೆ ದುಡಿಯುವ ದೈನಿಕ
ಜೀವ ಉಳಿಸೋ ಬೆಳೆಯ ಬೆಳವ ದನಿಕಾ
ದೀಪ ಬೆಳಗೋ ಹೊಲದ ನಡುವೆ
ಬೆವರ ಸುರಿಸೋ ರೈತನ ಮಗ


ನಾನು ಕೃಷಿಕ ಕೃಷಿಯೇ ನನ್ನ ಖುಷಿ
ಬದುಕ ಬವಣೆ ಬದಿಗೆ ಒತ್ತಿ
ಹಸಿರ ಉಳಿಸೋ ಭರತ ಭೂಮಿ ಹೆಮ್ಮೆಪುತ್ರ
ನಡೆಯುತಿಹುದು ಬಾಳಚಕ್ರ ಸಮಯ ಏಣಿಸದೆ
ಕೈಗೆ ಬರುವ ಫಸಲಿನಲ್ಲಿ ನನ್ನ ಉಸಿರು ಅಡಗಿದೆ


Friday, 16 June 2017

ಕಂದ

ಮತ್ತೆ ಕಂದನಾಗುವ ಆಸೆ ನನಗಿಂದು ಅನಿಸಿದೆ
ಹಿಂದಿನದು ನೆನೆಪಿಲ್ಲಾ ಇಂದಿನದು ಹೊಳಪಿಲ್ಲ
ಎಲ್ಲಾ ಆಟಿಕೆಗಳು ನನಗೆ ಬೇಕು ನನ್ನ ನಗುವು ಎಲ್ಲರಿಗು ಬೇಕು
ಮನಸಲ್ಲಿ ಹುರುಳಿರಲಿಲ್ಲ ತುಂಟಾಟಿಕೆಗೆ ಬರವಿರಲಿಲ್ಲ

ಗಿಡ ಗಂಟೆಗಳು ನಾಚಿದ್ದವು ನನ್ನಯ ಸ್ಪರ್ಶಕ್ಕೆ
ಹಕ್ಕಿಗಳು ಹತ್ತಿರಾಗುತ್ತಿದ್ದವು ನಾ ಕಟುಕನಲ್ಲವೆಂದು
ಆಕಳ ಕರುವು ಮುದ್ದಿಸಿತ್ತು ತನ್ನ ಹಗ್ಗವ ಕೈಜಾರಿಸುವೆನೆಂದು
ಚಂದಮಾಮನು ಜೊತೆಗಾರನಾಗಿದ್ದ ನನ್ನ ಕುಡಿ ನೋಟದ ನಗುವಿನಿಂದ

Wednesday, 14 June 2017

ಸಂವೃದ್ದಿ

ಹಸನಾಗಲಿ ಬಾಳು ಹಸಿರೆಲೆಯ ತೋರಣದಂತೆ
ಮಿನುಗಲಿ  ಬಾಳ ಜ್ಯೋತಿ  ಎಂದೂ ಆರದ ಜಗಜ್ಯೋತಿಯಂತೆ
ಈಡೇರಲಿ ಇರುವೆ ಆಕಾರದ ಇಷ್ಟಗಳು ಆನೆ ಆಕಾರದ ಆಸೆಗಳು
ಮುಗಿಲು ಮುಟ್ಟಲಿ ನಿಮ್ಮ ಗುರಿ ಗುರುತ್ವಾಕರ್ಷಣೆಯ ಮೀರಿ

ಸಾಗಲಿ ಬಾಲ ಪಯಣದ ತೇರು ತೀರವ ಮುಟ್ಟುವ ತನಕ
ಯಾರಿಗೂ ಅಂಜಬೇಕಿಲ್ಲ ನಿನ್ನ ರಥವು ನಿನ್ನ ಕೈಮುಷ್ಟಿಯಲ್ಲಿರಲು
ಮೊಳಗಲಿ ನಿನ್ನದೇ ಆರ್ಭಟ  ನಿನ್ನ ಉತ್ತುಂಗಕ್ಕೇರಿಸುವ ಹಾಗೆ
ಕೈ ಜಾರದು ಎಂದೂ ನಿನ್ನ ಕಾಯಕ ನಿನ್ನ ಕೈಯಲ್ಲಿರಲು

Saturday, 13 May 2017

ಅಮ್ಮ

ನನ್ನ ಬಾಳ ಕಥೆಯ ಬರೆದವಳು ನೀನು
ನಿನ್ನ ಉಸಿರು ಕೊಟ್ಟು ನನ್ನ ಧರೆಗೆ ತಂದವಳು ನೀನು 
ಬಳಪವ ಹಿಡಿಸಿ ಅಕ್ಷರವ ಬರೆಸಿದವಳು ನೀನು
ಸೋತಾಗಲು ಗೆದ್ದಾಗಲೂ ಜೊತೆ ಇದ್ದವಳು ನೀನು
ನನ್ನ ಬದುಕ ಪುಸ್ತಕದ ಮೊದಲ ಮುನ್ನುಡಿಯು ನೀನು


ನಿನ್ನ ಸಹನೆಯ ದೀಪಕ್ಕೆ ನಾನೆಂದು ಬತ್ತಿಯು ಆಗಲಾರೆ
ನಿನ್ನ ಪ್ರೀತಿಯ ಕಣಜಕ್ಕೆ ನಾನೆಂದು ಇಲಿ ಆಕಾರದ ಆನೆ
ನಿನ್ನ ವಾತ್ಸಲ್ಯದ ಶಿಖರಕದಲ್ಲಿ ನಾನೊಂದು ಸಣ್ಣ ಕಲ್ಲು
ನಿನ್ನ ಕರುಣೆಯ ಕಡಲಿಗೆ ನಾನೊಂದು ಸಣ್ಣ ಜರಿಯಾದರು ಸಾಕು
ನಿನ್ನ ಸಿಟ್ಟಿನ ಸಿಡಿಮದ್ದಿಗೆ ನನ್ನ ಸಣ್ಣ ನಗುವೊಂದೇ ನಿಷ್ಕ್ರಿಯದಳ


ನನ್ನ ಜೀವನದ ಮೊದಲ ಎರಡಕ್ಷರವು ನೀನು
ನನ್ನ ಬಾಳ ಪಯಣದ ಆರಂಭ ಗೀತೆ ನೀನು
ನನ್ನ ಮೊದಲ ಮಾತು ನಿನ್ನದೇ ಹೆಸರು
ನನ್ನ ನೋವಲ್ಲು ಪ್ರತಿ ಪೆಟ್ಟಿನ ಆಕ್ರಂದನ ದನಿಯಲ್ಲೂ
ನಿನ್ನದೊಂದೇ ಹೆಸರು ಅಮ್ಮ ನನ್ನಮ್ಮ
ಅಮ್ಮಂದಿರ ದಿನದ ಶುಭಾಶಯಗಳು 🙂

Monday, 1 May 2017

ಬಿಡದೆ ಕಾಡಿದೆ ಬೆಡಗಿಯ ನೋಟ

ಬಿಡದೆ ಕಾಡಿದೆ ಬೆಡಗಿಯ ನೋಟ
ಬಡಗಿಯೂ  ಕೆತ್ತದ ಶಿಲ್ಪವು ನನ್ನಲ್ಲಿ ಅರಳಿದೆ
ಅರಳುವ ಹಿಂದೆ ನನ್ನ ಮನದ ಸೆಳೆತಕೆ ಮುನ್ನುಡಿಯಾದೆ
ನೀ ಕೆಳಬಾರದೇ ವರ್ಣರಂಜಿತ ಸ್ವಪ್ನ ಸುಂದರಿಯೂ ಯಾರೆಂದು
ನಾ ಹೇಳಿದರು ಹೇಳದಿದ್ದರೂ ಉತ್ತರವು ನೀನೊಬ್ಬಳೇ ಎಂದೆಂದೂ.


ಮದರಂಗಿ

ಚಂದದ ಕೈಯ ಮೇಲೊಂದು ಬಣ್ಣದ ಆಭರಣ
ಕೃತಕವಾದರೂ ಅದರ ಕೃಷಿಯಲ್ಲಿ ಏನೋ ಚಳಪಿದೆ
ನೋಡಿದವರೆಗೆಲ್ಲ ಹೊಸ ಸಂಭ್ರಮದ ಸಿಂಚಲನ
ಕಾಮನಬಿಲ್ಲೆ  ಸೋಲುವುದು ನಿನ್ನ ಕೈಬಣ್ಣದ ಛಂದಸ್ಸಿನಿಂದ


Friday, 28 April 2017

ಜನ್ಮದ ನಂಟು

ಪ್ರೀತಿಯ ಮಜಲಿದು ಎತ್ತಲೆತ್ತಲಿಂದಲೋ ಬಂದೆ
ನನ್ನ ಜೀವನದ ಒಂಟಿತನಕ್ಕೆ ಉತ್ತರವ ತಂದೆ
ಅಂಕುಡೊಂಕಾದ ಪಯಣಕೊಂಡು ಕೊಂಡಿಯಾದೆ
ಬೆಸೆದುಕೊಂಡಿದೆ ಜನ್ಮ ಜನ್ಮದ ಅನುಬಂಧದ ನಂಟು 

ಬಾಳೆಗಿಡ

ಕಿತ್ತುತಂದೆನ ಬಾಳೆ ಹಿಳ್ಳಿನ  ಮರಿಯೊಂದನು
ಆನಂದದಿಂದ ಗುಂಡಿಯ ತೋಡಿ ನೆಟ್ಟಿದ್ದೆ ನೆಟ್ಟಿದ್ದು
ಹುಂಕರಿಸಿ ಹುಂಕರಿಸಿ ಗೊಬ್ಬರವ ಹಾಕಿದ್ದೆ ಹಾಕಿದ್ದು
ಮೂಕು ಹೋರಾಡಲು ಶುರುವಾಯಿತು ಮುಗಿಲು ಮುಟ್ಟಿತು ನನ್ನಯ ಆಡಂಬರ
ಫಲವ ತಿನಲು ಹೋಗಿ ಇರುವ ಹಲ್ಲು ಮುರಿದು ಕೊಂಡೆನು
ಅದಕ್ಕೆಲ್ಲ ಕಾರಣ ಒಂದೇ ನಾನು ನೆಟ್ಟಿದ್ದು ಕಲ್ಲು ಬಾಳೆ ಗಿಡ 

ಬುಗುರಿ

ಬಾಲ್ಯದಲ್ಲೊಂದು ಆಟ ಮರದ ಚಕ್ಕೆಯ ಕತ್ತರಿಸಿ
ಅದಕ್ಕೊಂದು ಆಕಾರವ ಕೊಟ್ಟು  ಮೂಗುದಾರವ ತೂರಿಸಿ
ಕೈಯಲ್ಲಿರುವ ಬಾರವನ್ನೆಲ್ಲ ಒತ್ತಿ ಭೂಮೀಯ ಮೇಲೆ ತಿರುಗಿಸಿ
ಅಕ್ಕ ಪಕ್ಕದವರಿಗೆ ಗುನ್ನವ ಹಾಕಿ ನಾ ಪನ್ನ ಎಂದು
ಕೇಕೆ ಹಾಕಿ ನಕ್ಕಂತಹ ಆಟವೇ ನನ್ನಯಾ ಬುಗುರಿಯ ಆಟ 

Monday, 24 April 2017

ತಿರುವು

ಮಧ್ಯರಾತ್ರೀಯಲ್ಲೊಂದು ಚಿಂತೆ
ಇಂದು ಕರಗಿತ ನಾಳೆ ಶುರುವಾಯಿತಾ
ಇಂದು ಮಾಡಿದಾದ್ದರೇನು ನಾಳೆ ಮಾಡುವುದಾದರೇನು
ಎಣಿಸುವ ಮೊದಲೇ  ನಿದ್ದೆಗೆ ಜಾರಿತು ಯಾವ ತಿರುವಿಲ್ಲದೆ.

Sunday, 16 April 2017

ಭಂಡ

ಜಗತ್ತೆಲ್ಲ  ಮುನ್ನುಗಿ ಹಾರಾಡುತ್ತಿದೆ ನಾನಿನ್ನು ಕೂತಲ್ಲೇ
ತಟಸ್ಥನಾಗಿರುವೆ   ಬರವಿಲ್ಲದ ನಿದ್ದೆ ಸುದ್ದಿಯಾದರೇನು ಸಿದ್ದಿ ಸಿಗದಿದ್ದರೇನು
ಸಾವಂತೂ ಖಚಿತ ಮೂರಂಕಿ ಜನಕ್ಕೂ ನಾನಾರು ಎಂದು  ತಿಳಿದು
ಯಾರಿಗೆ ಸಿಗುವುದು ಈ  ಮೂರ್ಖಾಸು ಭಂಡತನದ ಸಾವು

Friday, 17 March 2017

ಗುರುತ್ವಾಕರ್ಷಣೆ

ಜೀವನ ಅನ್ನೋ ಗುರುತ್ವಾಕರ್ಷಣೆಯಲ್ಲಿ
ಪ್ರೀತಿ ಅನ್ನೋದು ಕಲ್ಲು ಇದ್ದ ಹಾಗೆ
ಎಷ್ಟು ಸಲ ಬೇಡ ಅಂತ ಆಕಾಶಕ್ಕೆ ಎಸೆದ್ರು
ಮತ್ತೆ ಮತ್ತೆ ಭೂಮಿ ಕಡೆ ಪಯಣ ಬೆಳೆಸತ್ತೆ
ಪ್ರೀತಿ ಬೆಲೆಯನ್ನ ನಮಗೆ ತಿಳಿಸಿ  ಕಣ್ತೆರೆಸತ್ತೆ
                                                  ಸಂಕೇತ್ ಮಂಚಾಲೆ-ಹಾರೊಗೊಪ್ಪ 

Tuesday, 14 March 2017

ಅ ಆ ಇ ಈ ಪ್ರೀತಿ

ಪ್ರೀತಿಸು ಎಂದು ಹಠ ಹಿಡಿದಿದೆ ಈ ಮನಸ್ಸು
ಕಾಣಿಸುವಂತಹ ಕಾಮನಬಿಲ್ಲಿನ ಆಚೆ ನಿಂತು
ಕೃತಕ ಭಾಷೆಗೆ ತಲೆದೂಗಲ್ಲ ಪರಿಪೂರ್ಣ ಮನಸ್ಸು  
ನಿಬ್ಬೆರೆಗಿಸುವಂತಹ ಹೊಸ ಕಲ್ಪನೆಯ  ಸೃಷ್ಟಿಸೋ ಜಾಡು ನನ್ನದಲ್ಲ
ಅಂತರಂಗದಲ್ಲೇ ಅರಳಿದೆ ನನ್ನ ಪ್ರೀತಿಯ ನಿವೇದೇನೆಗೆಂದು 

Saturday, 11 March 2017

ಹುತಾತ್ಮ ಪ್ರೇಮಿ

ನನ್ನರಸಿ ಬಂದ ನನ್ನಾಕೆಯ ಹೃದಯಕ್ಕೆ ನೀನಿಟ್ಟ ಕೊಳ್ಳಿಗೆ
ಇಂದೆಲ್ಲ ನಾಳೆ ನಾನೆ ಬಲಿಯಾಗುವೆ ಆದರೂ
ಒಂಚೂರು ಆತಂಕವಿಲ್ಲ ಒಂಚೂರು ಅಂತರಾತ್ಮಕ್ಕೆ ಮರ್ಯಾದಿಯಿಲ್ಲ
ಆದರೆ  ನಾನೊಬ್ಬ ಪುಕ್ಸಟ್ಟೆ ನೋವನ್ನು ಅನುಭವಿಸುವ ಹುತಾತ್ಮ ಪ್ರೇಮಿ

ಹುಡುಕಾಟ

ನಿನ್ನೆಯ ಮೊನ್ನೆಯದಲ್ಲಾ ಹುಡುಕುತನಿಹೆನು ನಾನು
ಜನ್ಮ ತಾಳಿದ ದಿನದಿಂದ  ಚೂರು ಬಿಡುವಿಲ್ಲದೆ
ಯಾವ ಹುಡುಕು ಎಂದರಿಯದೆ ಹುಡುಕನಿಹೆನು ನಾನು
ಎಂದು ನಿಲ್ಲುವುದೋ  ಈ ನನ್ನ ಹುಡುಕಾಟ
ಸಿಗಲಾರದ ಬಿಡಿಸಲಾರದ ಹುಡುಕಾಟದ ಕೊಂಡಿಯ ಭೇದಿಸಿ    

Saturday, 4 February 2017

ಪ್ರಥಮ ಪ್ರಯತ್ನದಲ್ಲೇ ಪರಿಚಿತನಾದೆ

ಪ್ರಥಮ ಪ್ರಯತ್ನದಲ್ಲೇ  ಪರಿಚಿತನಾದೆ
ಪಾರದರ್ಶಕನಾಗುವ  ಪರಿಪೂಣತೆಯಲ್ಲಿ
ಪ್ರತಿಫಲನಹೀನವಾಗಿ ಪರಾರಿಯಾದೆ

Friday, 20 January 2017

ಚುಕ್ಕಿ

ಗುರಿ ಇಟ್ಟು ಹೊಡೆದೆ ನಾ ಆ ಚುಕ್ಕಿಗೆ 
ಮೂಡಿತು ಬಣ್ಣದಲಂಕಾರದ ವೈಯ್ಯಾರ 
ಎಣಿಸಲು ಹೊರಟಿದ್ದೆ ಆ ದಿನ
ಗಣಿತದ ಲೆಕ್ಕಾಚಾರವ ಬುಡಮೇಲು ಮಾಡಿ

Monday, 16 January 2017

ಅರಗಿಣಿ

ಅಂದದ ಅರಗಿಣಿಯ  ಅಡಗಿಸಿಟ್ಟಿರುವೆ  ಅರಮನೆಯಲ್ಲಿ
ಚೆಂದದ ಬಟ್ಟೆಯ ತೊಡಿಸಿ ಪಂಜರದಲ್ಲಿ ಕುಣಿಯಲ್ಲಿಟ್ಟಿರುವೆ
ಅಂದದ ಅರಗಿಣಿ ನಸುನಕ್ಕಿತು ನನ್ನಯ ವೈಭವೀಕರಣಕ್ಕೆ ನೊಂದು
ನಾ ಪಡೆದು ತಂದ ಬಟ್ಟೆಯ ಕಿತ್ತು ನಿನ್ನಯ ಅಂತಸ್ತು ಖುಷಿಯ ಕೊಟ್ಟೀತೇ ನನಗೆ

Thursday, 12 January 2017

ಸೀದಾ ಸಾದಾ ಸೃಷ್ಟಿಯಲ್ಲಿ ಸುಮ್ಮನೆ ಸುತ್ತಿ ಸಾಕಾಗಿದೆ

ಮೊದಲ ಸಲ ಸ ಅನ್ನೋ ಒಂದು ಅಕ್ಷರ ಇಟ್ಟುಕೊಂಡು ಕವನ ಕಟ್ಟುವ ಕೆಲಸ
"
ಸೀದಾ ಸಾದಾ ಸೃಷ್ಟಿಯಲ್ಲಿ ಸುಮ್ಮನೆ ಸುತ್ತಿ ಸಾಕಾಗಿದೆ
ಸಾವಿಗೂ ಸಾರ್ಥಕತೆಯಿಲ್ಲ ಸಾಧನೆ ಸುಳ್ಳಾಗಿರಲು
ಸಂಖೆಯ ಸರಿಪಡಿಸಲು ಸಾವಿರಾರು ಸನ್ನಿವೇಶಗಳು
ಸಿರಿತನದ ಸೆರೆಮನೆಯಲ್ಲಿ ಸಾಸುವೆಗೂ ಸೆಣೆಸಾಟ
"

Wednesday, 11 January 2017

ಮನಸ್ಸಿನ ಮಣೆಯ ಬಡಿದು ಕೇಳಿದೆ

ಮನಸ್ಸಿನ ಮಣೆಯ ಬಡಿದು ಕೇಳಿದೆ
ಏತಕೆ ನೀ ಇಂದು ಕಾರ್ಯಹೀನವಾಗಿರುವೆ 
ನನಗುತ್ತರಿಸಿತು ಅದು ಮರುಳ ಕಾಣದ 
ಕತ್ತಲ ಕೋಟೆಯಲ್ಲಿ ನಿನ್ನ ನೀ ಬಂದಿಸಿರುವೆ
ಸುತ್ತಲೂ ಆಗುಂತಕರು ನಿನ್ನ ಬ್ರಹ್ಮಾಂಡದ ಕುರುಹಿನಲಿ ...

Tuesday, 3 January 2017

ಒಂದರಲ್ಲಿ ಕುಶಿ ಇತ್ತು ತುಂಟತನ ಇತ್ತು

ಚಿಕ್ಕಂದಿನ ಚಡ್ಡಿಯಲ್ಲಿದಾಗ ಹಳ್ಳಿಯಲ್ಲಿದೆವು 
ಪ್ಯಾಂಟ್ ಬಂದಾಗ ಪ್ಯಾಟೆ ಸೇರಿದ್ದೆವು
ಒಂದರಲ್ಲಿ ಕುಶಿ ಇತ್ತು ತುಂಟತನ ಇತ್ತು 
ಮತ್ತೊಂದರಲ್ಲಿ ಮೀಸೆ ತಿರುಗಿಸುವ ಗಸ್ತು ಇತ್ತು.

ಕಾದು ಕಾದು ಸಾಕಾಗಿದೆ ಹಳೆಯ ಪುಟದ ಪದಗಳ ಹೆಕ್ಕಿ

ಕಾದು ಕಾದು ಸಾಕಾಗಿದೆ ಹಳೆಯ ಪುಟದ ಪದಗಳ ಹೆಕ್ಕಿ
ಹಳೆಯ ಕಥೆಯ ಕೊರೆಯಲು ಪಾತ್ರಗಳು ಪಾತ್ರೇಸೇರಿವೆ
ಹೊಸ ಕಥೆಯ ಪಾತ್ರಗಳಿಗೆ ವೇಶೆಗಳು ಸಿಗುತ್ತಿಲ್ಲ
ಭೂನಾದಿಯ ಮಟ್ಟದಲ್ಲೇ ಭೂತ ಎದುರಾಗಿದೆ.

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...