Wednesday, 7 October 2015

ಓ ಬಾಲ್ಯವೇ ಬಂದು ಬಿಡು ಮಗದೊಮ್ಮೆ ಕಳೆದೊಗುವೆ ನಿನ್ನೊಂದಿಗೆ

ಹಸಿರಿನ ಸಿರಿಯಲ್ಲಿ ನೆನಪಾಗಿದೆ ಬಾಲ್ಯದ ಉಸಿರು
ಕಣ ಕಣವು ಹಾತೊರೆಯುತ್ತಿದೆ ಬಾಲ್ಯವೇ ಬಂದು ಬಿಡು ಮಗದೊಮ್ಮೆ
ಆನಂದಿಸುವೆ ಪ್ರತಿ ಕ್ಷ್ಯಣವು ನಿನ್ನೊಂದಿಗೆ ನನ್ನನ್ನೇ ಮರೆತು
ಸೋತಾಗಲು ಕುಶಿ ಇತ್ತು ಗೆದ್ದಗಲು ನೆಮ್ಮದಿ ಇತ್ತು
ಈ ಶತಮಾನದ ನಾಟಕೀಯ ಬದುಕಿಗೆ ಬೆಂಡಾಗಿದೆ ಈ ಬದುಕು
ಹಳೆಯ ಕುಶಿಗಳು ನನ್ನೊಟ್ಟಿಗಿಲ್ಲ ಹೊಸ ಕನಸುಗಳು ದೂರ ಸರಿಯುತ್ತಿವೆ
ಕಾದ ಬಾಣಲೆಯಲ್ಲಿ ಬಿದ್ದು ಕೃತಕ ಕುಶಿಯಲ್ಲಿ ತೇಲಾಡುತ್ತಿದೆ ಈ ಜೀವನ
ಓ ಬಾಲ್ಯವೇ ಬಂದು ಬಿಡು ಮಗದೊಮ್ಮೆ ಕಳೆದೊಗುವೆ ನಿನ್ನೊಂದಿಗೆ

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...