Tuesday, 9 June 2015

ಪಯಣ

ನನ್ನ ಕನಸನ್ನು ಹೊಸ ದಿಕ್ಕಿಗೆ ಸಾಗಿಸುವ ಪಯಣ
ನನ್ನ ಆಸೆಯನ್ನು ಹೊಸ ಶಕ್ತಿಯಾಗಿ ಸಾಗಿಸುವ ಪಯಣ
ಹಳೇ ನೋವನೆಲ್ಲ ಮರೆಸಿ ಹೊಸ ಸ್ಪೂರ್ತಿಯೊಂದಿಗೆ ಸಾಗುವ ಪಯಣ
ಎಂದು ನಿಲ್ಲದ ಪಯಣ ಕೊನೆಯಿಲ್ಲದ  ಪಯಣ ನನ್ನ ಪಯಣ

Sunday, 7 June 2015

ಬಾಳ ಜೊತೆಗಾರ

ನನ್ನ ಸ್ವಪ್ನದಲ್ಲಿ ಕಾಣಸಿಕ್ಕ ಸೈಲೆಂಟ್ ಸುಂದರಿ
ನನ್ನ ಎದೆಯ ತಳದಲ್ಲಿ ನೆಲೆನಿಂತು ತಳಊರಿದ ನಾಜೂಕು ಸುಂದರಿ
ಮೊದಲ.ನೋಟದಲ್ಲೇ ಮನಸ್ಸು ಕದಡಿದ ಕಾನನದ ಜಿಂಕೆಯೇ 
ನಿನಗಾಗಿ ಬಲೆ ಬಿಸಿ ಈ ಮನಸ್ಸು ಕಾಯುತ್ತಿದೆ
ಎಂದು ನೀ ಬಂದು ಬೀಳುವೆಯೋ ಈ ಬಾಳಿನ ಜೋಳಿಗೆಯಲ್ಲಿ

Thursday, 4 June 2015

ಲೈಫ್ ಇಸ್ಟೇನೆ

ನಾವು ಲೈಫ್ ಮೇಲೆ ಸವಾರಿ ಮಾಡೋಕೆ ಹೋಗ್ತೀವಿ ಆದರೆ ಲೈಫ್ ನಮ್ ಮೇಲೆ ಸವಾರಿ ಮಾಡ್ತಿರುತ್ತೆ ಅಂತ ನಮಗೆ ಗೊತ್ತಾಗಲ್ಲ
ಲೈಫ್ ಆವಾಗ ಆವಾಗ ಹೇಳಿ ಕೊಡ್ತಾ ಇರತ್ತೆ ನಾವೇ ದಡ್ಡ ನನ್ ಮಕ್ಳು ಕೇಳ್ತಾ ಇರಲ್ಲ ನಾವೇ ದೊಡ್ಡೋರು ಅನ್ಕೋತಾ ಇರ್ತೀವಿ
ಲೈಫ್ ನಮಗೆ ಇಸ್ಟ ಇರೋರನ್ನ ದೂರ ಮಾಡುತ್ತಾ ವಿಚಿತ್ರ ಖುಷಿ ಕೊಡತ್ತೆ ವಿಚಿತ್ರ ದುಃಖ ಕೊಡ್ತಾ ಇರತ್ತೆ
ನಾವು ಮಣ್ಣು ಮಣ್ಣು ಅಂತ ಹೊಡೆದಾಟ ಮಾಡ್ತ ಇರ್ತೀವಿ ಮಣ್ಣಿನ ಜೊತೆ ಆಟ ಆಡ್ತಾ ಇರ್ತೀವಿ ಒಂದನ್ನ ಮರೆತು ಇರ್ತೀವಿ 
ಮಣ್ಣು ನಮ್ ಜೊತೆ ಆಟ ಇರತ್ತೆ ಯಾವಾಗ್ಲೂ ಅಂತ ಕೊನೆಗೆ ಗೆಲ್ಲೋದೇ ಮಣ್ಣೇ ನಮ್ ಮೇಲೆ ಬಂದು ಮೇಲೆ
ಕೊನೆಗೆ ಒಂದು ದಿನ ಲೈಫ್ ಲೈಟ್ ಆಗಿ ಲೈಟ್ ಆಫ್ ಮಾಡ್ಕೊಂಡು ಹೋಗತ್ತೆ ನಮಗೆ ಹೇಳದೆ ಲೈಟ್ ಆಫ್ ಕ್ಯಾಮರ ಆನ್ ಅನ್ನೋ ತರ
ನಮ್ಮ ಕೊನೆಯ ಪ್ರತಿಬಿಂಬ ನಮಗೆ ಕಾಣೋದಿಲ್ಲ ಬೇರೆಯವರು ನೋಡ್ಕೊಂಡು ಹೋಗ್ತಾರೆ ಅಸ್ಟೇ ಲೈಫ್ ಇಸ್ಟೇನೆ

Wednesday, 3 June 2015

ಮಿಂಚಿನ ಸಂಚಾರ

ಕನಸ್ಸಿನ ಕಾರ್ಮುಗಿಲಿನ ಮನಸ್ಸಿನ ಮಾಯಾಮೃಗದ ಮುಗಿಲಿನ ಮಂಟಪದ ಮಾಯಾಜಿಂಕೆಯೇ
ಯಾರಿಗೂ ಕಾಣದೆ ತೋರದೆ ಮರೆ ಮಾಚಿ ಸದ್ದಿಲ್ಲದೆ ನನ್ ಈ ಹೃದಯದಲ್ಲಿ ಗದ್ದಲ ಎಬ್ಬಿಸಿರುವೆ
ಒದ್ದಾಟದಲ್ಲಿ ಗುದ್ದಾಟದಲ್ಲಿ ಚಿತ್ರ ವಿಚಿತ್ರವಾಗಿ ವಿಚಳಿತಾನಾಗಿರುವೆ
ನನ್ನ ಕನಸ್ಸಿನ ಪರದೆಯ ಸರಿಸಿ ಹೃದಯಕ್ಕೆ ಚುರುಕು ಮುಟ್ಟಿಸಿರುವೆ
ನನ್ನ ಈ ಹೃದಯದ ಅಂಗಡಿಯಲ್ಲಿ ನಿನ್ನ ಆಡಂಬರದ ಪಿಸು ಮಾತು ಪದೇ ಪದೇ ಸದ್ದು ಮಾಡಿ ಸಂಹರಿಸುತ್ತಿದೆ
ಯಾರಿಗೂ ಕಾಣದ ನೋವ ಹುಡುಕಿ ನನ್ ಈ ಹೃದಯದಲ್ಲಿ ಮಿಂಚಿನ ಸಂಚಾರ ಮಾಡು

ಹೃದಯದ ಹವಮಾನ

ನಾಚಿಕೆಯ ಮುಂಭಾಗ ಹೃದಯದ ಹಿಂಭಾಗ
ಮನಸ್ಸಲ್ಲಿ ಅರಳಿದ ಕನಸ್ಸಿನ ಬಳ್ಳಿ
ಹೇಗೆಂದು ಪೋಷಿಸಲಿ ನೀನಿಲ್ಲದ ಹವಮಾನದಲ್ಲಿ...

ಚಿಂತೆಗಳ ಸಂತೆ

ಚಿಂತೆಗಳ ಸಂತೆಯಲ್ಲಿ ನಮ್ಮ ಬಾಳಿನ ಬುಗುರಿ
ಸದ್ದಿಲ್ಲದೆ ಸೊಗ್ಗಿಲ್ಲದೆ ಅಮವಾಸೆಯ ಚಂದ್ರನಂತೆ
ಪರದೆಯ ಹಿಂದೆ ಅಡಗಿ ಕೂತಿದೆ
ತೆರೆಮರೆಯ ಹಿಂದೆ ತೆರೆಕಾನದೆ ಬೋರ್ಗರೆವ
ನೀರಿನಲ್ಲಿ ಆವಿಯಾಗಿ ಆಗಸಸೇರಿ ಕನಸನ್ನು
ಹೊಸ ದಿಕ್ಕಿಗೆ ಸಾಗಿಸಿದೆ ಆ ಕನಸಲ್ಲಿ ನಾವೆಲ್ಲಿದ್ದೇವೆ ಅನ್ನುವುದೇ ಗೊತ್ತಿಲ...
ಆದರೂ ಕನಸು ಕಾಣುವುದ ನಿಲ್ಲಿಸಿಲ್ಲ 

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...