Sunday, 22 July 2018

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ
ತರಹ ತರಹದ ಸ್ವಪ್ನಗಳು
ನಂಟಿನ ಬುತ್ತಿಯಲ್ಲಿ ಅಲ್ಲೊಂದು
ಇಲ್ಲೊಂದು  ಸಿಹಿ ನೆನಪುಗಳು

ವ್ಯಾಪಾರ ನಾನಾದೆ 
ವ್ಯವಹಾರ ಮಾಡದೆ
ಕೊಂಡವರು ಕಾಣೆಯಾದರು
ಕಣ್ಮುಚ್ಚಿ ನಾಕುಂತೇ ಏಕಾಂತಕ್ಕೆ ಮೆಚ್ಚಿ

ಖಾಲಿ ಕಡಲ ನೂಕು ನುಗ್ಗಲಲ್ಲಿ
ಮೀನು ಹಿಡಿಯೋಕೆ ಹಗ್ಗ ಜಗ್ಗಾಟ
ಪರದೆಯ ಹಿಂದೆ ನೂರಾರು ಕಳ್ಳರು
ಮುಂದೆ ಬಂದರೆ ನಾನೊಬ್ಬನೇ ನಾಯಕ


Wednesday, 18 July 2018

ಸರಹದ್ದು

ಪಯಣ ನನ್ನ ಯಾನದ ಕಡೆಗೆ
ನನ್ನ ದಿಕ್ಕಿಗೆ ನೂರೆಂಟು ನಂಟು
ನಡೆಯದೆ ಸಾಗಬೇಕು ನನ್ನ ದಾರಿ
ಒಂಚೂರು ದಣಿವಾಗದೆ ಸರಹದ್ದು
ಇನ್ನೆಲ್ಲಿ ಕೊನೆಯೋ ಹುಡುಕುತಲಿರುವೆ


Thursday, 12 July 2018

ಬಾ ಮಳೆಯೇ ಬಾ

ಬಾ ಮಳೆಯೇ ಬಾ ನಿನ್ನ
ಬೊಗರೆವ ಆರ್ಭಟಕ್ಕೆ ಭೂಮಿ
ತಾಯ ಮಡಿಲಿಗೆ ತಂಪಿನ ಸಿಂಚಲನ

ನಿನ್ನ ಆಟಕ್ಕೆ ಕಾದಿಹಳು
ಬೂತಾಯಿ ಕಾವನ್ನು ನುಂಗಿ
ಹೊಯ್ಯೋ ಮಳೆರಾಯ ಹೊಯ್ಯೋ

ಪಸರಿಸು ಹನಿಯ ಅಭಿಷೇಕ
ಕಾದು ಬೆಂಡಾದ ಕಾಡಿನ
ಹಸಿರಿನ ತೋರಣಕ್ಕೆ

ನಿನ್ನ ಹನಿಯ ಸಂಘಕ್ಕೆ
ಕಾದಿಹಳು ಬೂತಾಯಿ
ಅಬ್ಬರಿಸು ಕಣ್ಮುಚ್ಚಿ




Tuesday, 10 July 2018

ಪೂರ್ಣ ಚಂದ್ರ

ಅಮಾವಾಸೆಯಲ್ಲೂ ಪೂರ್ಣ ಚಂದ್ರ
ನಕ್ಕಿದ್ದಾನೆ ಕಾರಣ ಕೇಳಲು ನೀ ಮರೆತೇ
ಹೇಳದೆ ಹೋದರೆ ನಾ ಅದನ್ನ ಮರೆವೆ
ನಿನ್ನ ನಗುವ ನೋಡಲು ಹಾಲ್ಗೆನ್ನೆಯ
ಚಂದ್ರ ಬಾನಿಂದ ಕಲ್ತಿತ್ತು ಓಡೋಡಿ ಬಂದ


Monday, 9 July 2018

ಕಾಲ ಕಳೆಯದೆ ಇದ್ದೀತೆ

ನನ್ನ ಬದುಕಿಗೆ ಬಂದು
ನನ್ನನೆ ನೀ  ಕೊಂಡು
ಇಬ್ಬರ ಬಂಧನ ಶುರು
ಆದ ಮೇಲೆ ಮತ್ತೇನಿದೆ
ಕಾಲ ಕಳೆಯದೆ ಇದ್ದೀತೆ


Friday, 6 July 2018

ಅವಳು

ನನ್ನಲ್ಲಿನ ನಾನಲ್ಲದವನನ್ನು ಸೃಷ್ಟಿಸಿ
ಪ್ರೀತಿಯ ನೈವೈದ್ಯ ಬಡಿಸಿದವಳು
ನನ್ನ ಭಾವನೆಗಳ ಚಿಪ್ಪಿಗೆ
ಮುತ್ತುಗಳನ್ನು ತುಂಬಿಸಿ  ಜೊತೆಯಾದವಳು

ಇವಳೇ ಅವಳು ನನ್ನ ಸಾವಿರ
ದಿನಗಳ  ನಿದ್ದೆ ಗೆಡಿಸಿದವಳು
ಇವಳೇ ಅವಳು ಸಾವಿರ ವರ್ಷಗಳಿಂದ
ಕಾಯುತ್ತಿದ್ದ ಅದ್ಬುತ ಸುಂದರಿ

ಅವಳೆಂದರೆ ಪರಿಪೂರ್ಣ
ಅವಳೆಂದರೆ ಸಂಪೂರ್ಣ
ಅವಳಂದರೆ ಸಂತೋಷ
ಅವಳಂದರೆ ಪ್ರಪಂಚ


Sunday, 1 July 2018

ಅದ್ಬುತ ಸುಂದರಿ

ನಾ ಕಂಡೆ  ಅದ್ಬುತ ಸುಂದರಿಯ ನಿನಲ್ಲಿ
ಸೋಲಲು ಇನ್ನೇನು ಬೇಕು ನಾ ನಿನ್ನ ನೋಡಿದ ಮೇಲೆ
ಹೃದಯವೇ  ಕೈಜಾರಿದೆ ನೀ ನನ್ನ ಉಸಿರಾದಮೇಲೆ
ಓ ನನ್ನ ಬೆಳದಿಂಗಳ ಬಾಲೆ ನೀನಾದೆ ನನ್ನ ಬದುಕಿನ
ನಿತ್ಯ ಹಸಿರಿನ ಬಣ್ಣದ ಬದುಕಿನ ಕಥಾನಾಯಕಿ


ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...