Wednesday, 26 October 2016

ಬ್ರಮ್ಮ ಬರೆದ ನನ್ನ ಹಣೆ ಬರಹ

ಬ್ರಮ್ಮ ಬರೆದ ನನ್ನ ಹಣೆ ಬರಹ
ಹೆಣ ವಾಗುವ ಮೊದಲೇ ಹಣ ಸಂಪಾದಿಸು ಎಂದು
ಅವನಿಗೇನು ಗೊತ್ತು ನಮ್ಮ ಟೇಲರ್ 
ಜೇಬು ಇಡುವುದ ಮರೆತನೆಂದು

ಖಾಲಿ ಪಿಲಿ ಜೀವನ ಕಳೆದು ಹೋಗ್ತಿರೋ ಯೌವ್ವನ

ಖಾಲಿ ಪಿಲಿ ಜೀವನ ಕಳೆದು ಹೋಗ್ತಿರೋ ಯೌವ್ವನ
ಸುಮ್ಮನೆ ಕೂತಿರೊ ಯುವಜನ ಏನಾಗಿದೆ ನಿಮಗೆ ಸಜಾ
ಕೈಯಲಿ ಮೊಬೈಲ್ ಮೊಬೈಲ್ ಅಲ್ಲಿ ಡಾಟಾ 
ಡಾಟಾ ಖಾಲಿಯಾಗೋವರೆಗೂ ನಾವು ಅಲ್ಲೇ ಬಗನೀ ಗೂಟ........

ಪರಿಸರದಲ್ಲಿನ ಪ್ರಪಂಚ ಹಾಳಾಗಿದೆ

ಪರಿಸರದಲ್ಲಿನ ಪ್ರಪಂಚ ಹಾಳಾಗಿದೆ
ಪ್ರಪಂಚದಲ್ಲಿನ ಪರಿಸರ ಸೊಗಸಾಗಿದೆ
ಎರಡು ವಾಕ್ಯಗಳು ಸರಿಯಾಗಿದೆ ನೋಡುವ ದೃಸ್ಟಿಕೋನಕ್ಕೆ ಸಮನಾಗಿ

ದಿಕ್ಕಿರದ ತಿರುಗಾಟಕ್ಕೆ ಹುಣ್ಣಿಮೆಯೂ ನಾಪತ್ತೆ

ದಿಕ್ಕಿರದ ತಿರುಗಾಟಕ್ಕೆ ಹುಣ್ಣಿಮೆಯೂ ನಾಪತ್ತೆ
ಬೆಳಗಾದ ಅವದಿಯಲ್ಲಿ ತಿಳಿದಿತ್ತು ಅದು ಸಾವಿರ ಮೈಲುಗಳ ದೂರವೆಂದು 
ಗುರಿ ಇರದ ದಾರಿಗೆ ಬೆಳಕು ಕತ್ತಲಾಗುವುದು.

ಪ್ರೀತಿ ಶುರುವಾಗಿದೆ ಇಂದು

ಪ್ರೀತಿ ಶುರುವಾಗಿದೆ  ಇಂದು
ಹೊಸ ಮೊಗ್ಗು ಅರೂಳುವ ಮುನ್ನ
ಕೊಡೆ ಹಿಡಿಯಲು ಕಾದಿರುವೆ
ನೀ ತರುವ ಮಳೆಯ ಜಪಿಸಿ

ತಾಳ್ಮೆಗೂ ಕುತ್ತು ತಂದಿದೆ
ನಿನ್ನ ನೋಟಕೆ ಸೆಳೆತು
ಪಾರಾಗುವ ಪರಿವಿಲ್ಲದ್ದೆ
ಹೃದಯ ಉತ್ತುಂಗಕ್ಕೇರಿದೆ



Monday, 30 May 2016

ಸೋಲಿಗೆ ಸವಾಲಾಗಿ

ಸೋಲನ್ನೇ ಕಾಣದವರೂ ಯಾರು ಇಲ್ಲಾ
ಪ್ರತಿ ಸೋಲಲ್ಲೂ ಹೊಸತನದ ಪ್ರಯತ್ನವಿದೆ
ಸೋಲೇ ಹೊಸ ತಿರುವಿನ ಮೊದಲ ಮುನ್ನುಡಿ
ಖುಷಿಯಾಗಿ ಸೋಲೀ  ಸೋಲೇ ನಿಮಗೆ ಹೆದರುವ ಹಾಗೆ
ಸೋಲಿಗೆ ಸವಾಲಾಗಿ ಗೆಲುವು ನಿಮ್ಮದೇ

Sunday, 15 May 2016

ಗಗನಕ್ಕೆ ಹಾರಲು

ಪುಟ್ಟ ಮರಿಯೊಂದು ಗಗನಕ್ಕೆ ಹಾರಲು ಕಾದಿದೆ
ನನಗಿದು ಸಾದ್ಯವೆಂದು ಜಗತ್ತಿಗೆ ತೋರಲು
ಬಾಲ್ಯದಿಂದ ಮೀಸೆತಿರುಗಿಸುವವರೆಗೆ ಬಂದಿದ್ದೇವೆ
ನಮಗಿನ್ನೂ ತಿಳಿದಿಲ್ಲ ನನ್ನಲ್ಲಿ ಏನು ಸಾದ್ಯವೆಂದು

ತೂಗುಯ್ಯಾಲೆ

ನನ್ನ ಬಾಳ ಬಳಿಗೆ ಬಂದ ನಿಗೋಚರ ಶಕ್ತಿಗೆ
ಗೊತ್ತಿಲ್ಲದೆ ಪ್ರೇರೇಪಿತನಾದೆ ಗೊತ್ತಿಲ್ಲದೆ ಪುಳಕಿತನಾದೆ
ಅರಿವಿನ ಗೋಜಿಗೆ ಹೋಗದೆ ಅವಸರದಲ್ಲಿ ಜಾರಿ ಬಿದ್ದೆ
ತೂಗುಯ್ಯಾಲೆಯ ತೀರದಲ್ಲಿ ತೇಲುತ್ತಿದೆ ಈ ಹೃದಯ 

Wednesday, 6 April 2016

ಸುಂದರ ಬದುಕಿನ ಅನಾವರಣ

ಸುಂದರ ಬದುಕಿನ ಅನಾವರಣಕ್ಕೆ
ಮುಖದಲ್ಲಿನ ಕಾಂತಿಯೊಂದೇ ಉತ್ತರ
ಸ್ವಪ್ನ ಲೋಕಗಳನ್ನು ದಾಟುವ ಶಕ್ತಿಯು
ನಿಮ್ಮ ಮನಸ್ಸಿನಲ್ಲಿ ಅಡಗಿದೆ 

ಬಾರದೆ ಹೋದ ಮನಸ್ಸು

ಬಾರದೆ ಹೋದ ಮನಸ್ಸಿನ ಹಿಂದೆ ಹೋದರೆ 
ಭಾರ ವಾಗುವುದು ನಿಮ್ಮದೇ ಹೃದಯ
ನಡೆದಾಡುವ ವಸ್ತುಗಳಿಗಿಂತ 
ನಡೆಯದೆ ಇರುವ ವಸ್ತುಗಳ ಬೆಲೆಯೇ ಜಾಸ್ತಿ

ವಿದ್ಯೆ

ಕಲಿಯುವ ವಿದ್ಯೆಯು ನಾಲ್ಕು ಗೋಡೆಗಳ ಮದ್ಯ ನಡುಯುವಂತಹದ್ದು
ಕಲಿತ ವಿದ್ಯೆಯು ನಾಲ್ಕು ಜನಗಳ ಮದ್ಯ ತೋರಿಸುವಂತಹದ್ದು
ಉತ್ತಮ ಕಲಿಕೆಯೇ ಉತ್ತಮ ಬದುಕಿನ ಸಾದನ 
ಉತ್ತಮ ಯೋಚನೆ ಉತ್ತಮ ನಡುವಳಿಕೆ ಹೊರಗಡೆ ತೋರಿಸುವ 
ಆಯುದವಾಗಲಿ ಬದುಕಿನ ಯಶಸ್ಸಿನ ಗುರಿ ಮುಟ್ಟಲು 

Monday, 4 April 2016

ಕಾಲದ ಚಕ್ರ ತಿರುಗುತಲಿದೆ ಪಯಣದ ದಾರಿ ಸೇವೆಯುತಲಿದೆ

 ಕಾಲದ ಚಕ್ರ ತಿರುಗುತಲಿದೆ ಪಯಣದ ದಾರಿ ಸೇವೆಯುತಲಿದೆ
ಹೋದ ದಾರಿ ಮರಳಿ ಬರದು ನೆರಳು ಒಂದೇ ಬೆನ್ನ ಹಿಂದೆ
ಉಸಿರು ಬಿಗಿ ಹಿಡಿದು ಹೊರಡು ನಿನ್ನ ಬದುಕಿನ ಪ್ರಶ್ನೆಗಾಗಿ
ಸುಮ್ಮನೆ ಸಿಗದು ಸಾದನೆ ಸಿಕ್ಕ ಅವಕಾಶವ ಬಿಟ್ಟು ಕುಳಿತರೆ
ಗುರಿ ಇದ್ದರೆ ಸಾಲದು ಗಮನ ಗುರಿಮುಟ್ಟುವ ತನಕ ನಿಲ್ಲದಿರಬೇಕು

ಕಾಲದ ಚಕ್ರ ತಿರುಗುತಲಿದೆ ಪಯಣದ ದಾರಿ ಸೇವೆಯುತಲಿದೆ
ನಂಬಿ ಕೂತರೆ ಆಗದು ಇಲ್ಲಿ ನಡೆದು ಸಾಗಿದರೆ ಸಿಗುವುದು ದಾರಿ
ತಪ್ಪು ಆಗುವುದು ಸಹಜ ತಪ್ಪಿನ ಆಚೆ ಇದೆ ಕನಸಿನ ಕೋಟೆ
ಕನಸಿನ ಕೋಟೆಗೆ ನೂರಾರು ಕೈಗಳು ಕೊನೆಗುಳಿಯುವುದು ಕೆಲವು ಕೈಗಳು
ನಿಮ್ಮ ಆತ್ಮವಿಶ್ವಾಸವೊಂದೇ ಬಾಗಿಲು ತೆರೆಯುವ ಕೈಚಳಕ ನಿನ್ನ ನಂಬಿ ಮುನ್ನಡೆ

ಕಾಲದ ಚಕ್ರ ತಿರುಗುತಲಿದೆ ಪಯಣದ ದಾರಿ ಸೇವೆಯುತಲಿದೆ
ನಿನ್ನೆ ಮೊನ್ನೆಗಳ ನೆನಪುಗಳ ಮೂಟೆಯಲ್ಲಿ ಒಳ್ಳೆಯ ನೆನಪೊಂದೇ ಉಳಿಯಲಿ
ಕೆಲವೊಮ್ಮೆ ಸ್ವಾರ್ತಿಯಲಿ ಕೆಲವೊಮ್ಮೆ ದಾನಿಯಾಗಿ ಬದುಕು
ಸಾದನೆಯೊಂದೇ ಸಾಕ್ಷಿಯಾಗಲಿ ನಿನ್ನ ಬದುಕಿನ ಇರುವಿಕೆಯ ತೋರಿಸಲು
ಬರುವವರನ್ನು ಕೈ ಬಿಸಿ ಕರೆ ಬರದವರನ್ನ ಅವರ ಪಾಡಿಗೆ ಬಿಟ್ಟು ನೀ ಮುನ್ನಡೆಯುವ ಕಡೆ ಗಮನ ಕೊಡು

ಕಾಲದ ಚಕ್ರ ತಿರುಗುತಲಿದೆ ಪಯಣದ ದಾರಿ ಸೇವೆಯುತಲಿದೆ
ಸುಮ್ಮನೆ ವ್ಯಕ್ತಿಯಾಗಬೇಡ ವ್ಯಕ್ತಿತ್ವದ ವ್ಯಕ್ತಿಯಾಗು
ನಗಿಸುವ ಡೋಂಗಿಗಳಿಗಿಂತ ಕಣ್ಣೊರೆಸುವ ಕೈಗಳ ಮದ್ಯಸಾಗು
ನೂರಾರು ಜನಗಳ ಗೆಳೆತನ ಬೇಡ ಕತ್ತಲೆಯಲಿ ಸಾಗುವ ನಾಲ್ಕು ಜನರಿದ್ದರೆ ಸಾಕು
ಸದಾ ಸಮಯದ ಜೊತೆ ಸಾಗು ನಿನ್ನ ಗುರಿ ಮುಟ್ಟುವ ತನಕ

ಕಾಲದ ಚಕ್ರ ತಿರುಗುತಲಿದೆ ಪಯಣದ ದಾರಿ ಸೇವೆಯುತಲಿದೆ
ಹೋದ ದಾರಿ ಮರಳಿ ಬರದು ನೆರಳು ಒಂದೇ ಬೆನ್ನ ಹಿಂದೆ
ಉಸಿರು ಬಿಗಿ ಹಿಡಿದು ಹೊರಡು ನಿನ್ನ ಬದುಕಿನ ಪ್ರಶ್ನೆಗಾಗಿ
ಸುಮ್ಮನೆ ಸಿಗದು ಸಾದನೆ ಸಿಕ್ಕ ಅವಕಾಶವ ಬಿಟ್ಟು ಕುಳಿತರೆ
ಗುರಿ ಇದ್ದರೆ ಸಾಲದು ಗಮನ ಗುರಿಮುಟ್ಟುವ ತನಕ ನಿಲ್ಲದಿರಬೇಕು


Monday, 22 February 2016

ನಿನ್ನ ನೆನಪಲ್ಲಿ ಬಚ್ಚಿಟ್ಟ ಪ್ರೀತಿ ಗರಿರೆಕ್ಕೆ ಬಿಚ್ಚಿ ಹಾಡಿದೆ

ನಿನ್ನ ನೆನಪಲ್ಲಿ ಬಚ್ಚಿಟ್ಟ ಪ್ರೀತಿ ಗರಿರೆಕ್ಕೆ ಬಿಚ್ಚಿ ಹಾಡಿದೆ
ಹೊಸದೊಂದು ಕನಸಿಗೆ ನಾ ಹಣೆದ ಬಳ್ಳಿ ನಿನ್ನನ್ನು ಸೇರಲು ಬಯಸಿದೆ
ನೂರಾರು ದಿನದ ಪ್ರೀತಿಯ ಗೂಡು ನಿನ್ನನ್ನು ಸೇರಲು ಕಾದಿದೆ

Wednesday, 17 February 2016

ಅರಸುತ್ತಿದೆ ಈ ಹೃದಯ ನನ್ನ ಪಯಣದ ಜೊತೆಗಾತಿಗೆ

ಅರಸುತ್ತಿದೆ ಈ ಹೃದಯ ನನ್ನ  ಪಯಣದ ಜೊತೆಗಾತಿಗೆ
ಕಂಗಳಲ್ಲಿ ಸಾಕಸ್ಟು ಕನಸಿದೆ ನೀ ಇಲ್ಲದೆ
ಯಾಕೋ ಈ ಹೃದಯ ಬಾರವೇನಿಸುತ್ತಿದೆ
ಬೇಡವೆಂದರೂ ಕೇಳುತಿಲ್ಲ ಈ ಮನಸ್ಸು ನಿನ್ನ
ನೆನಪನ್ನನಾದರು ಮಾಡಿಕೊ ಎಂದು ಹಟ ಮಾಡುತಿದೆ

Tuesday, 16 February 2016

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ
ನಿತ್ಯವೂ ಅದೇ ಬೆಳಕಿನಿಂದ ಕತ್ತಲೆಯ ತನಕ
ಪ್ರಪಂಚವೇ ನಮ್ಮೆದುರು ನಿಂತಿದೆ
ನಾವು ಅದರೆದುರು ನಿಲ್ಲುವುದು ಕ್ಷಣಿಕ

Friday, 12 February 2016

ನವಿಲುಗರಿ

ನವಿಲುಗರಿ ನಿನ್ನ ಬಣ್ಣಗಳ ಲೋಕಕ್ಕೆ ನನ್ನನ್ನು ಎಂದು ಕರೆದ್ದೋಯ್ಯುವೆ
ನವಿಲುಗರಿ ನಿನ್ನ ಅಂದ ಚಂದಕ್ಕೆ  ಕಾರಣರಾರು ಬಣ್ಣಗಳೇ
ಬಣ್ಣಗಳೇ ಮಾಸದ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವೆಯಾ
ಬಣ್ಣಗಳ ಲೋಕದಲ್ಲಿ ನಿನ್ನದೊಂದೇ ಹೆಸರು ಬಣ್ಣದಲಂಕಾರ
ಸದಾ ಮಿನುಗುವ ನಿನ್ನ ವೈಯ್ಯರಕ್ಕೆ ಯಾರು ಸರಿಸಾಟಿ
ನವಿಲುಗರಿ ನಿನ್ನ ರೆಕ್ಕಿ ಬಿಚ್ಚಿ ಕುಣಿಯಲು ಶುರುಮಾಡು
ನಿನ್ನ ನಾಟ್ಯಕ್ಕೆ ಕಾನನವೇ ಸ್ತಬ್ಡವಾಗಲಿ 

Tuesday, 9 February 2016

ನೀ ಬಿಟ್ಟರೆ ಯಾರಿಲ್ಲ ನನ್ನ ಜೀವನದ ಜೋಕಾಲಿಗೆ

ನೀ ಬಿಟ್ಟರೆ ಯಾರಿಲ್ಲ ನನ್ನ ಜೀವನದ ಜೋಕಾಲಿಗೆ
ಜೋಪಾನವಾಗಿಡುವೆ ಎಂದೆಂದೂ ನಿನ್ನ ನನ್ನ ಬಾಲ ಜೋಳಿಗೆಯಲ್ಲಿ
ಹೊಸ ತನದ ಗಾಳಿಗೂ ಹಳೇ ತನದ ಮೌನಕ್ಕೂ ಸಮ್ಮತಿ ಸೂಚಿಸುವೆ
ಪಯಣದ ಕೊನೆಗೂ ನಿನ್ನೊಟ್ಟಿಗಿರುವೆ ನನ್ನುಸಿರು ನಿಲ್ಲುವ ತನಕ

ಸುಡು ಬಿಸಿಲು

ಸುಡುವ ಬಿಸಿಲಿನ ಜಳಕ್ಕಾದರೂ ಮೈಯೊಡ್ಡಿ ನಿಲ್ಲಬಹುದು
ಸುಡುವ ಮನಸ್ಸುಗಳ ಮದ್ಯ ನಿಲ್ಲಲಾಗುವುದಿಲ್ಲ
ಏಕಾಂತವೇ ತಂಪಾಗಿರುವುದು ಸುಡುವ ಮನುಷ್ಯರಿಗಿಂತ

Friday, 22 January 2016

ಸಮಯವೇ ಹೇಳಿಬಿಡು ನೀ ಜೊತೆ ಇರುವೆಯಾ ಎಂದೆಂದಿಗೂ

ಸಮಯವೇ ಹೇಳಿಬಿಡು ನೀ ಜೊತೆ ಇರುವೆಯಾ ಎಂದೆಂದಿಗೂ
ನನ್ನ ಬಾಳಿನ ಪಗಡೆಯಲ್ಲಿ ನಿನ್ನದೇ ಕಾಯ್ನ್ಗಳು
ತಿರುಗಿ ತಿರುಗಿ ತೆರಳಿದರು ನಿನ್ನ ಕಡೆಗೆ ಸಾಗುತಿಲ್ಲ 
ಏರು ಪೆರು ದಾರಿಯಲ್ಲಿ ಸದ್ದು ಮಾಡದೆ ಸೊನ್ನೆ ಸುತ್ತಿದೆ 

ಎದ್ದು ಬಿದ್ದು ಓಡುತ್ತಿರುವ ನಿನ್ನ ಜೊತೆಗೆ ನನ್ನ ಕರೆದೊಯ್ಯದೆ ಮರೆತ್ತಿರುವೆ
ಒಂದೆಡೆ ತಟಸ್ತವಾಗಿ ನಾನಿರುವೆ ನಿನ್ನ ನೆರಳನ್ನಾದ್ರೂ  ಬೀರಬಾರದೆ 
ನಿನ್ನ ಜೊತೆ ಸಾಗಿದರೆ ಬಾಳಿಗೆ ಒಳಿತು ಎಲ್ಲಾದರೆ ನಾವಲ್ಲೇ ಇರುವೆವು
ಬಡಿದ್ದೆಬ್ಬಿಸು ನನ್ನನ್ನು ನೀ ಮುನ್ನುಗ್ಗುವ ಮುನ್ನ ನನ್ನನ್ನು ಮುನ್ನಡೆಸು

ಒಂದೆಡೆ ಪಥದಲ್ಲಿ ಸಾಗಲು ನಿನ್ನ ಶ್ರೀ ರಕ್ಷೆ ಎಂದೆಂದೂ ಇರಲಿ ನನಗೆ
ನನ್ನ ಬಾಳು ಹಸನಾಗುವುದು  ನಿನ್ನ ಪಯಣದ ಜೊತೆಗೆ
ಎತ್ತರೆತ್ತರದ ತುದಿಗೆ ಮುಟ್ಟುವುದು ನೀ ನನ್ನ ಜೊತೆಗೆ ಸಾಗಲು

ಕನಸೇ ನನ್ನ ಕನಸೇ

ಕನಸೇ ನನ್ನ ಕನಸೇ ಇಬ್ಬನಿ ದಾರಿಯಲ್ಲಿ ಮುನ್ನುಗ್ಗುತ್ತಿರುವ ಕನಸೇ
ಬಾಳ  ಬಂಡಿಯಲ್ಲಿ  ಹೊಸದೊಂದು ಪ್ರತಿಬಿಂಬ ಕೊಟ್ಟ ಕನಸೇ
ಹಸಿರೆಲೆಯ ಶೃಂಗಾರದಲ್ಲಿ ಹೊಸನಗೆಯ ಬಣ್ಣ ಕೊಟ್ಟ ಕನಸೇ
ಏರುಪೇರು ತಗ್ಗಿನಲ್ಲಿ ಮುನ್ನುಗ್ಗಲು ಪ್ರೇರೇಪಿಸಿದ ಕನಸೇ

ಕನಸೇ ನನ್ನ ಕನಸೇ ಮರೀಚಿಕೆಯಾಗದೆ ಎಂದೆಂದಿಗೂ ನೀ ನನ್ನ ಜೊತೆ ಇರು
ಸೋತಾಗಲು ಜೊತೆ ಇದ್ದ ಕನಸೇ ಗೆದ್ದಗಳು ಜೊತೆ ಸಾಗಿದ ಕನಸೇ
ಕಣ್ಣಲ್ಲಿ ಎಂದೆಂದೂ ಇರುವ ಕನಸೇ ಮರಳಿ ಮರಳಿ ಬರುತ್ತಿರು
ಕಾರ್ಮೋಡದ ಕರಿಚಾಯೆಯನ್ನು ಸರಿದೂಡಿ ನನ್ನ್ನೊಟ್ಟಿಗೆ ಬರುತ್ತಿರುವ ಕನಸೇ

ಕನಸೇ ನನ್ನ ಕನಸೇ ನೆನಪಾಗುವೆ ನೆನಪಾಗುವೆ ನಿನ್ನ ನೆಪದಲ್ಲೇ  ನಾ ಸಾಗುತ್ತಿರುವೆ
ಆಕಾಶಕ್ಕೆ ಚಪ್ಪರ ಹಾಕುವೆ ನೀ ನನ್ನ ಬೆನ್ನ ಹಿಂದೆ ಬರುತ್ತಿರಲು
ಮರುಬೂಮಿಯಲ್ಲೂ ಮನೆಯ ಮಾಡುವೆ ನೀ ನನ್ನ ಹುರಿದೂಂಬಿಸಲು
ಸಾಗರದ ಅಲೆಗೂ ಮೈ ಚಾಚಿ ನಿಲ್ಲುವೆ ನಿನ್ನಲೆಯು ನನ್ನೊಟ್ಟಿಗಿರಲು

ಕನಸೇ ನನ್ನ ಕನಸೇ ಎಂದೆಂದಿಗೂ ಮರಳಿ ಮರಳಿ ಬರುತ್ತಿರು
ಕನಸೇ ನನ್ನ ಕನಸೇ ಎಂದೆಂದಿಗೂ ನೀ ನನ್ನ ಜೊತೆ ಇರು
ಕನಸೇ ನನ್ನ ಕನಸೇ ಎಂದೆದಿಗು ನನ್ನ ಬಾಳ ಜೋಳಿಗೆಯಲ್ಲಿರು
ಕನಸೇ ನನ್ನ ಕನಸೇ ಎಂದೆಂದಿಗೂ ನಿನ್ನಲೆಯು ನನ್ನೊಂದಿಗಿರಲಿ

ಅಡ್ಡ ದಿಡ್ಡಿ ಪಯಣ

ಹೇಳಲು ಹೊರಟಿರುವೆ ಮುಚ್ಚು ಮರೆ ಇಲ್ಲದೆ ಮಡಚ್ಚಿಟ್ಟ ಬಾಳ ಜೋಳಿಗೆಯ ಒಳಗಿಂದ
ಗುಂಪಿಗೆ ಸೇರಿದ ಪದವೋ ಸೇರದ್ದೋ ಹೇಳಹೊರಟಿರುವೆ ಇರುವಿಕೆಗಾಗಿ ಬರಹದೊಲ್ಲೊ೦ದು ಉತ್ತರ
ಸಮೀಪವಿದ್ದರೂ ದೂರ ಕಾಣುವಂತ ಮನಸ್ಸಿನ ನಾಗಾಲೋಟದ ಮನಸ್ತಿತಿ ಏರುಪೇರು ದೋಣಿಯಲ್ಲಿ ಎತ್ತರೆತ್ತರದ
ಅಲೆಗೆ ಹೆದರಿ ಮೊದಲೇ ತಿಣುಕಾಡುತ್ತಿರುವ ಮನಸ್ತಿತಿ ಹಿಂದು ಮುಂದು ಹೋಗದೆ ವಾಯುಬಾರ ಕುಸಿಯ ಕಂಡ ವಾತಾವರಣದ
ಬದಲಾವಣೆಗೆ ನಮ್ಮನ್ನು ಸೇರಿಸಿಕೊಂಡು ಮುನ್ಸೂಚನೆಗಾಗಿ ಕಾಯುತ್ತಿದ್ದೇವೆ
ಫೋಟೋ ಕ್ಲಿಕ್ಕಿಸುವಾಗ ಸೆಲ್ಫಿ ಬೇಕು ಜೀವನ ನಡೆಸುವಾಗಲೂ ತುಂಬಾ ಸೆಲ್ಫಿಯಾಗಿ ಬದಲಾಗಿದ್ದೇವೆ ಹುಟ್ಟಿ ಬೆಳೆದ ವಾತಾವರಣದ ವಿರುದ್ದವಾಗಿ
ಅಡ್ಡಾದಿಡ್ಡಿಯಾಗಿ ಪರಿವರ್ತನೆ ಆಗಿದ್ದೇವೆ. ನಮ್ಮೊಳಗೆ ನಾವೋ ಬೇರೆಯವರೋ ನಡೆಸುತ್ತಿದರೋ ಅಥವಾ ಬದಲಾವಣೆಯ ಹಿಂದೆ ಹೋಗುತ್ತಿದೇವೋ ಒಂದನ್ನು ಗೊತ್ತಿಲ್ಲದೆ ಮುನ್ನುಗ್ಗುತಿದ್ದೇವೆ.
ದೂರದ ದಾರಿಗೆ ಮುನ್ನುಗ್ಗುತ್ತಿದ್ದೇವೆ ಹತ್ತಿರವಿರುವ ಎಲ್ಲವನ್ನೂ ಬಿಟ್ಟು ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತಿಗೆ ನೇರವಾಗಿ ನಮ್ಮನ್ನೇ ಉದಾಹರಣೆ ಕೊಡಬಹುದು .
ಬಿಡುವಿಲ್ಲದ ಕೆಲಸ ಒತ್ತಡದ ಬದುಕು ಕೊನೆಗೊಂದು ದಿನ ಬಿಡುವಿದ್ದರು ಸಂಬಂದಗಳು ಬಿಡಿಸಿಕೊಂಡಿರುತ್ತವೆ
ಬದುಕಲು ಬದಲಾವಣೆ ಮುಖ್ಯ ಬದಲಾವಣೆಯೇ ಬದುಕಲ್ಲ ತಾನೇ ಬೇಕಾಗಿರುವುದಕ್ಕೆ ಬದಲಾವಣೆ ಅಗತ್ಯ ಎಲ್ಲಾದಕ್ಕೂ ಅಲ್ಲಾ.

Monday, 4 January 2016

ಸಂಬಂದಿಕರೆಲ್ಲಾ ಇರುವುದು ಸಂಶೋದನೆಗಲ್ಲಾ

ಸಂಬಂದಿಕರೆಲ್ಲಾ ಇರುವುದು ಸಂಶೋದನೆಗಲ್ಲಾ ದು:ಖ ಕುಶಿಗೋಸ್ಕರ
ಇರುವುದೇ ನಾಲ್ಕೇ ದಿವಸ ನಿನ್ನ ಇರುವಿಕೆಯನ್ನು ತೋರಿಸು
ಬೇರೆಯವರ ಆಡಂಬರ ನಿನಗೇಕೆ ನಿನ್ನ ಆಡಂಬರ ನಿನಗೆ ಸಾಕಲ್ಲವೇ 
ಆದರೆ ಕರುಣಿಸು ಇಲ್ಲಾದರೆ ಸುಮ್ಮನಿರು ಮೂಗು ತೂರಿಸಬೇಡ 
ಅವರವರ ಸಾದನೆ ಅವರಿಗಿದೆ ನಿನ್ನ ಡೊಂಕು ಸಾಕಸ್ಟಿದೆ
ಬೇರೆಯವರಿಗೆ ದೆಬ್ಬೆ ಕಟ್ಟುವುದೇ ಆಮೇಲಿದೆ
ಸ್ವಚ್ಚಂದದ ಬದುಕಿದೆ ನಿನ್ನದೇ ಸೂತ್ರಗಳು ಸಾಕಲ್ಲವೇ ಜೀವನದ ಪಯಣಕ್ಕೆ

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...