ನನ್ನ ಮನಸ್ಸಿನ ಚಲನಚಿತ್ರದಲ್ಲಿ ಮೂಡಿ ಬಂದ ಪಾತ್ರಗಳಿಗೆ ನಾನೇ ಪ್ರೇಕ್ಷಕ ನಾನೇ ನಿರ್ದೇಶಕ ನಾನೇ ನಿರ್ಮಾಪಕ
ಪರದೆಯ ಸರಿಸಿದರು ಪರದೆಯ ಸರಿಸದಿದ್ದರು ಸದ್ದು ಮಾಡುವುದು ನನ್ನೊಬ್ಬನೇ ಮತ್ತಾರಿಗೂ ಜಾಗವಿಲ್ಲ
ವಿಚಿತ್ರವಾದ ಸನ್ನಿವೇಶಗಳು ಸಂಶೋದನೆಗಳು ತಳಮಳಗಳು ವೇದನೆಗಳು ಕುಶಿಗಳು ಆನಂದಿಸುವವನು ನನ್ನೊಬ್ಬನೇ
ಬಾವನೆಗಳಿಗೆ ಬಾವೋದ್ವೇಗಕ್ಕೆ ಮನಸಿನ ಮಾತುಗಳಿಗೆ ಕನಸಿನ ಕೂಗಿಗೆ ಮಿಡಿತ ತುಡಿತಗಳಿಗೆ ಪಾತ್ರದಾರಿ ನಾನೇ
ಪಾಸ್‌ವರ್ಡ್ ಇಲ್ಲದ ಮನಸ್ಸು ಜೀವನದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಉತ್ತರವಿಲ್ಲದ ಪ್ರಶೆಯ ಸೃಸ್ಟಿಸಿದೆ
ಉತ್ತರ ಹುಡುಕಲು ಉತ್ತರ ದಿಕ್ಕಿಗೆ ಹೊರಟೆ ಹೋಗುವ ರಬಸದಲ್ಲಿ ಪ್ರಶೆಯೆ ಮಿಂಚಿ ಮಾಯವಾಯಿತು
ಕೆಲವೊಮ್ಮೆ ಪಾತ್ರಗಳು ವಿಚಿತ್ರ ದಿಕ್ಕಿನಲ್ಲಿ ಸಾಗಿ ಮೂಕಬಿನಯವು ನನ್ನಲ್ಲೇದು ಕಾಣುತ್ತದೆ
ನಾ ಮಾಡುವ ಪಾತ್ರಗಳಿಗೆ ನಾನೇ ಹೊಣೆ ನಾನೇ ಪ್ರಾರಂಬ ಗೀತೆ ನಾನೇ ಮುಕ್ತಾಯ ಗೀತೆ







.jpg)






