Monday, 22 February 2016

ನಿನ್ನ ನೆನಪಲ್ಲಿ ಬಚ್ಚಿಟ್ಟ ಪ್ರೀತಿ ಗರಿರೆಕ್ಕೆ ಬಿಚ್ಚಿ ಹಾಡಿದೆ

ನಿನ್ನ ನೆನಪಲ್ಲಿ ಬಚ್ಚಿಟ್ಟ ಪ್ರೀತಿ ಗರಿರೆಕ್ಕೆ ಬಿಚ್ಚಿ ಹಾಡಿದೆ
ಹೊಸದೊಂದು ಕನಸಿಗೆ ನಾ ಹಣೆದ ಬಳ್ಳಿ ನಿನ್ನನ್ನು ಸೇರಲು ಬಯಸಿದೆ
ನೂರಾರು ದಿನದ ಪ್ರೀತಿಯ ಗೂಡು ನಿನ್ನನ್ನು ಸೇರಲು ಕಾದಿದೆ

Wednesday, 17 February 2016

ಅರಸುತ್ತಿದೆ ಈ ಹೃದಯ ನನ್ನ ಪಯಣದ ಜೊತೆಗಾತಿಗೆ

ಅರಸುತ್ತಿದೆ ಈ ಹೃದಯ ನನ್ನ  ಪಯಣದ ಜೊತೆಗಾತಿಗೆ
ಕಂಗಳಲ್ಲಿ ಸಾಕಸ್ಟು ಕನಸಿದೆ ನೀ ಇಲ್ಲದೆ
ಯಾಕೋ ಈ ಹೃದಯ ಬಾರವೇನಿಸುತ್ತಿದೆ
ಬೇಡವೆಂದರೂ ಕೇಳುತಿಲ್ಲ ಈ ಮನಸ್ಸು ನಿನ್ನ
ನೆನಪನ್ನನಾದರು ಮಾಡಿಕೊ ಎಂದು ಹಟ ಮಾಡುತಿದೆ

Tuesday, 16 February 2016

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ
ನಿತ್ಯವೂ ಅದೇ ಬೆಳಕಿನಿಂದ ಕತ್ತಲೆಯ ತನಕ
ಪ್ರಪಂಚವೇ ನಮ್ಮೆದುರು ನಿಂತಿದೆ
ನಾವು ಅದರೆದುರು ನಿಲ್ಲುವುದು ಕ್ಷಣಿಕ

Friday, 12 February 2016

ನವಿಲುಗರಿ

ನವಿಲುಗರಿ ನಿನ್ನ ಬಣ್ಣಗಳ ಲೋಕಕ್ಕೆ ನನ್ನನ್ನು ಎಂದು ಕರೆದ್ದೋಯ್ಯುವೆ
ನವಿಲುಗರಿ ನಿನ್ನ ಅಂದ ಚಂದಕ್ಕೆ  ಕಾರಣರಾರು ಬಣ್ಣಗಳೇ
ಬಣ್ಣಗಳೇ ಮಾಸದ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವೆಯಾ
ಬಣ್ಣಗಳ ಲೋಕದಲ್ಲಿ ನಿನ್ನದೊಂದೇ ಹೆಸರು ಬಣ್ಣದಲಂಕಾರ
ಸದಾ ಮಿನುಗುವ ನಿನ್ನ ವೈಯ್ಯರಕ್ಕೆ ಯಾರು ಸರಿಸಾಟಿ
ನವಿಲುಗರಿ ನಿನ್ನ ರೆಕ್ಕಿ ಬಿಚ್ಚಿ ಕುಣಿಯಲು ಶುರುಮಾಡು
ನಿನ್ನ ನಾಟ್ಯಕ್ಕೆ ಕಾನನವೇ ಸ್ತಬ್ಡವಾಗಲಿ 

Tuesday, 9 February 2016

ನೀ ಬಿಟ್ಟರೆ ಯಾರಿಲ್ಲ ನನ್ನ ಜೀವನದ ಜೋಕಾಲಿಗೆ

ನೀ ಬಿಟ್ಟರೆ ಯಾರಿಲ್ಲ ನನ್ನ ಜೀವನದ ಜೋಕಾಲಿಗೆ
ಜೋಪಾನವಾಗಿಡುವೆ ಎಂದೆಂದೂ ನಿನ್ನ ನನ್ನ ಬಾಲ ಜೋಳಿಗೆಯಲ್ಲಿ
ಹೊಸ ತನದ ಗಾಳಿಗೂ ಹಳೇ ತನದ ಮೌನಕ್ಕೂ ಸಮ್ಮತಿ ಸೂಚಿಸುವೆ
ಪಯಣದ ಕೊನೆಗೂ ನಿನ್ನೊಟ್ಟಿಗಿರುವೆ ನನ್ನುಸಿರು ನಿಲ್ಲುವ ತನಕ

ಸುಡು ಬಿಸಿಲು

ಸುಡುವ ಬಿಸಿಲಿನ ಜಳಕ್ಕಾದರೂ ಮೈಯೊಡ್ಡಿ ನಿಲ್ಲಬಹುದು
ಸುಡುವ ಮನಸ್ಸುಗಳ ಮದ್ಯ ನಿಲ್ಲಲಾಗುವುದಿಲ್ಲ
ಏಕಾಂತವೇ ತಂಪಾಗಿರುವುದು ಸುಡುವ ಮನುಷ್ಯರಿಗಿಂತ

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...