ನನ್ನ ಬಾಳ ಕಥೆಯ ಬರೆದವಳು ನೀನು
ನಿನ್ನ ಉಸಿರು ಕೊಟ್ಟು ನನ್ನ ಧರೆಗೆ ತಂದವಳು ನೀನು
ಬಳಪವ ಹಿಡಿಸಿ ಅಕ್ಷರವ ಬರೆಸಿದವಳು ನೀನು
ಸೋತಾಗಲು ಗೆದ್ದಾಗಲೂ ಜೊತೆ ಇದ್ದವಳು ನೀನು
ನನ್ನ ಬದುಕ ಪುಸ್ತಕದ ಮೊದಲ ಮುನ್ನುಡಿಯು ನೀನು
ನಿನ್ನ ಸಹನೆಯ ದೀಪಕ್ಕೆ ನಾನೆಂದು ಬತ್ತಿಯು ಆಗಲಾರೆನಿನ್ನ ಉಸಿರು ಕೊಟ್ಟು ನನ್ನ ಧರೆಗೆ ತಂದವಳು ನೀನು
ಬಳಪವ ಹಿಡಿಸಿ ಅಕ್ಷರವ ಬರೆಸಿದವಳು ನೀನು
ಸೋತಾಗಲು ಗೆದ್ದಾಗಲೂ ಜೊತೆ ಇದ್ದವಳು ನೀನು
ನನ್ನ ಬದುಕ ಪುಸ್ತಕದ ಮೊದಲ ಮುನ್ನುಡಿಯು ನೀನು
ನಿನ್ನ ಪ್ರೀತಿಯ ಕಣಜಕ್ಕೆ ನಾನೆಂದು ಇಲಿ ಆಕಾರದ ಆನೆ
ನಿನ್ನ ವಾತ್ಸಲ್ಯದ ಶಿಖರಕದಲ್ಲಿ ನಾನೊಂದು ಸಣ್ಣ ಕಲ್ಲು
ನಿನ್ನ ಕರುಣೆಯ ಕಡಲಿಗೆ ನಾನೊಂದು ಸಣ್ಣ ಜರಿಯಾದರು ಸಾಕು
ನಿನ್ನ ಸಿಟ್ಟಿನ ಸಿಡಿಮದ್ದಿಗೆ ನನ್ನ ಸಣ್ಣ ನಗುವೊಂದೇ ನಿಷ್ಕ್ರಿಯದಳ
ನನ್ನ ಜೀವನದ ಮೊದಲ ಎರಡಕ್ಷರವು ನೀನು
ನನ್ನ ಬಾಳ ಪಯಣದ ಆರಂಭ ಗೀತೆ ನೀನು
ನನ್ನ ಮೊದಲ ಮಾತು ನಿನ್ನದೇ ಹೆಸರು
ನನ್ನ ನೋವಲ್ಲು ಪ್ರತಿ ಪೆಟ್ಟಿನ ಆಕ್ರಂದನ ದನಿಯಲ್ಲೂ
ನಿನ್ನದೊಂದೇ ಹೆಸರು ಅಮ್ಮ ನನ್ನಮ್ಮ
ಅಮ್ಮಂದಿರ ದಿನದ ಶುಭಾಶಯಗಳು


