Sunday, 22 July 2018

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ
ತರಹ ತರಹದ ಸ್ವಪ್ನಗಳು
ನಂಟಿನ ಬುತ್ತಿಯಲ್ಲಿ ಅಲ್ಲೊಂದು
ಇಲ್ಲೊಂದು  ಸಿಹಿ ನೆನಪುಗಳು

ವ್ಯಾಪಾರ ನಾನಾದೆ 
ವ್ಯವಹಾರ ಮಾಡದೆ
ಕೊಂಡವರು ಕಾಣೆಯಾದರು
ಕಣ್ಮುಚ್ಚಿ ನಾಕುಂತೇ ಏಕಾಂತಕ್ಕೆ ಮೆಚ್ಚಿ

ಖಾಲಿ ಕಡಲ ನೂಕು ನುಗ್ಗಲಲ್ಲಿ
ಮೀನು ಹಿಡಿಯೋಕೆ ಹಗ್ಗ ಜಗ್ಗಾಟ
ಪರದೆಯ ಹಿಂದೆ ನೂರಾರು ಕಳ್ಳರು
ಮುಂದೆ ಬಂದರೆ ನಾನೊಬ್ಬನೇ ನಾಯಕ


Wednesday, 18 July 2018

ಸರಹದ್ದು

ಪಯಣ ನನ್ನ ಯಾನದ ಕಡೆಗೆ
ನನ್ನ ದಿಕ್ಕಿಗೆ ನೂರೆಂಟು ನಂಟು
ನಡೆಯದೆ ಸಾಗಬೇಕು ನನ್ನ ದಾರಿ
ಒಂಚೂರು ದಣಿವಾಗದೆ ಸರಹದ್ದು
ಇನ್ನೆಲ್ಲಿ ಕೊನೆಯೋ ಹುಡುಕುತಲಿರುವೆ


Thursday, 12 July 2018

ಬಾ ಮಳೆಯೇ ಬಾ

ಬಾ ಮಳೆಯೇ ಬಾ ನಿನ್ನ
ಬೊಗರೆವ ಆರ್ಭಟಕ್ಕೆ ಭೂಮಿ
ತಾಯ ಮಡಿಲಿಗೆ ತಂಪಿನ ಸಿಂಚಲನ

ನಿನ್ನ ಆಟಕ್ಕೆ ಕಾದಿಹಳು
ಬೂತಾಯಿ ಕಾವನ್ನು ನುಂಗಿ
ಹೊಯ್ಯೋ ಮಳೆರಾಯ ಹೊಯ್ಯೋ

ಪಸರಿಸು ಹನಿಯ ಅಭಿಷೇಕ
ಕಾದು ಬೆಂಡಾದ ಕಾಡಿನ
ಹಸಿರಿನ ತೋರಣಕ್ಕೆ

ನಿನ್ನ ಹನಿಯ ಸಂಘಕ್ಕೆ
ಕಾದಿಹಳು ಬೂತಾಯಿ
ಅಬ್ಬರಿಸು ಕಣ್ಮುಚ್ಚಿ




Tuesday, 10 July 2018

ಪೂರ್ಣ ಚಂದ್ರ

ಅಮಾವಾಸೆಯಲ್ಲೂ ಪೂರ್ಣ ಚಂದ್ರ
ನಕ್ಕಿದ್ದಾನೆ ಕಾರಣ ಕೇಳಲು ನೀ ಮರೆತೇ
ಹೇಳದೆ ಹೋದರೆ ನಾ ಅದನ್ನ ಮರೆವೆ
ನಿನ್ನ ನಗುವ ನೋಡಲು ಹಾಲ್ಗೆನ್ನೆಯ
ಚಂದ್ರ ಬಾನಿಂದ ಕಲ್ತಿತ್ತು ಓಡೋಡಿ ಬಂದ


Monday, 9 July 2018

ಕಾಲ ಕಳೆಯದೆ ಇದ್ದೀತೆ

ನನ್ನ ಬದುಕಿಗೆ ಬಂದು
ನನ್ನನೆ ನೀ  ಕೊಂಡು
ಇಬ್ಬರ ಬಂಧನ ಶುರು
ಆದ ಮೇಲೆ ಮತ್ತೇನಿದೆ
ಕಾಲ ಕಳೆಯದೆ ಇದ್ದೀತೆ


Friday, 6 July 2018

ಅವಳು

ನನ್ನಲ್ಲಿನ ನಾನಲ್ಲದವನನ್ನು ಸೃಷ್ಟಿಸಿ
ಪ್ರೀತಿಯ ನೈವೈದ್ಯ ಬಡಿಸಿದವಳು
ನನ್ನ ಭಾವನೆಗಳ ಚಿಪ್ಪಿಗೆ
ಮುತ್ತುಗಳನ್ನು ತುಂಬಿಸಿ  ಜೊತೆಯಾದವಳು

ಇವಳೇ ಅವಳು ನನ್ನ ಸಾವಿರ
ದಿನಗಳ  ನಿದ್ದೆ ಗೆಡಿಸಿದವಳು
ಇವಳೇ ಅವಳು ಸಾವಿರ ವರ್ಷಗಳಿಂದ
ಕಾಯುತ್ತಿದ್ದ ಅದ್ಬುತ ಸುಂದರಿ

ಅವಳೆಂದರೆ ಪರಿಪೂರ್ಣ
ಅವಳೆಂದರೆ ಸಂಪೂರ್ಣ
ಅವಳಂದರೆ ಸಂತೋಷ
ಅವಳಂದರೆ ಪ್ರಪಂಚ


Sunday, 1 July 2018

ಅದ್ಬುತ ಸುಂದರಿ

ನಾ ಕಂಡೆ  ಅದ್ಬುತ ಸುಂದರಿಯ ನಿನಲ್ಲಿ
ಸೋಲಲು ಇನ್ನೇನು ಬೇಕು ನಾ ನಿನ್ನ ನೋಡಿದ ಮೇಲೆ
ಹೃದಯವೇ  ಕೈಜಾರಿದೆ ನೀ ನನ್ನ ಉಸಿರಾದಮೇಲೆ
ಓ ನನ್ನ ಬೆಳದಿಂಗಳ ಬಾಲೆ ನೀನಾದೆ ನನ್ನ ಬದುಕಿನ
ನಿತ್ಯ ಹಸಿರಿನ ಬಣ್ಣದ ಬದುಕಿನ ಕಥಾನಾಯಕಿ


Saturday, 30 June 2018

ಮಣ್ಣಿನ ದೋಣಿ

ಬದಲಾಗೋ ದೂಳಿನ ಕಣದಲ್ಲಿ
ಮೂರಂಕಿ ದಾಟದ ಆಯಸ್ಸು ಹಿಡಿದು
ಕನಸಿನ ಪೊರೆಯ ಜಾಲದಲ್ಲಿ ಸಿಕ್ಕ  ಮೀನಂತೆ
ಕೃತಕ ನೀರಲ್ಲಿ ಗಾಳಿಯ ಹುಡುಕ್ಕುತ್ತಿರುವೆ


Thursday, 28 June 2018

ಏಕಾಂಗಿ

ನಂಗಿನ್ನೂ ಗೊತ್ತಿಲ್ಲ
ಏಕಾಂಗಿ ನಾನಂತ
ನನ್ನವರೇ ನಂಹಿಂದೆ
ಬರುತ್ತಿಲ್ಲ ಎಂದು

ಒಬಂಟಿ ನೋವಲ್ಲು
ಸಾಂತ್ವನ ಹೇಳಿದ್ದು
ನನ್ನನ್ನೇ ಅಣುಕಿಸಿದ
ನನ್ನೊಳಗಿನ ಅಜ್ಞಾತ ವ್ಯಕ್ತಿ


Wednesday, 20 June 2018

ನಿನ್ನ ಕಣ್ಣ ಕಡಲು

ನಿನ್ನ ಕಣ್ಣ ಕಡಲಿನಲ್ಲಿ
ನನ್ನ ಕಥೆ ಬರೆದಿದ್ದರೆ
ಸಾಕು ನನ್ನ ಜನ್ಮ ಸಾರ್ಥಕ
ನಿನ್ನೊಳಗೆ  ಸೇರಿದ ನನ್ನ ಕಥೆಗೆ


ಸಂಪತ್ತು

ನೀ ತಂದೆ ಪ್ರೀತಿಯ ಸಂಪತ್ತು
ಬಿಟ್ಟರೆ ನನ್ನ ಬಾಳಿಗೆ ಆಪತ್ತು
ನಮಗಿಲ್ಲ ಯಾವುದೇ ಷರತ್ತು
ನಂಬಿಕೆಯೊಂದೇ ಸಿಹಿ ಮುತ್ತು
ಬದುಕಿಗೆ ನೀನೊಬ್ಬಳೇ ಸ್ವತ್ತು

Friday, 15 June 2018

ಇಲ್ಲೇ ಎಲ್ಲದೂ ಅಡಗಿದೆ

ಇಲ್ಲೇ  ಎಲ್ಲದೂ ಅಡಗಿದೆ
ಮತ್ತೆಲ್ಲಿ ಹೋಗಲಿ ಹೊಸ
ಕದವ ತಟ್ಟಲು

ನನ್ನ ಕನಸಿನ ಗೂಡಿದು
ಮತ್ತೆಲ್ಲಿ ಹಾರಲಿ ಹೊಸ
ತೀರವ ಸೇರಲು

ಪ್ರೀತಿಯ ಪಾತ್ರೆಯ ಪಥದಲ್ಲಿ
ಪ್ರತಿಫಲಿಸುತ್ತಿರುವೆ ಪಾರದರ್ಶಕನಾಗಿ
ಇಲ್ಲೇ ಇರುವೆ

ನಾಳೆಯ ನೂಕು ನುಗ್ಗಲು
ಬೇಕಿಲ್ಲ ನನಗೆ ಇಂದಿನ
ನೆಮ್ಮದಿಯೇ  ಸಾಕು


Wednesday, 23 May 2018

ಅಳುಬುರುಕಿ

ಸುಮ್ಮನಿರೇ ನನ್ನ ಸುಕುಮಾರಿ
ಸುಖ ಸುಮ್ಮನೆ ಸೊರಗಬೇಡ
ನಿನ್ನ ಕಂಗಳಲಿ ಮಳೆಯೇ
ಸುರಿಯುತ್ತಿದೆ ಸಾಕು ಮಾಡು

ಕಾರಣವಿಲ್ಲದ  ಕಣ್ಣೀರು ನಿನಗೆ
ಸರಿ ಕಾಣುವುದೇ ನಿನ್ನ ಕಣ್ಣೀರು
ಒರೆಸುವಾತ ನಾನಿಲ್ಲವೆ ಸಾಕು
ಮಾಡು ನಿನ್ನ ಕಣ್ಣೀರ ನರ್ತನ

ಪ್ರತಿ ಹನಿಗೂ ಬೆಲೆಯುಂಟು
ಸುಖ ಸುಮ್ಮನೆ ಹಾಕಬೇಡ
ನಿನ್ನ ಕಣ್ಣೀರ ಮುತ್ತ ಹೆಕ್ಕಿ
ಇಡುವವನಿಗೆ ಮೀಸಲಿಡು

ನಿನ್ನ ಕಣ್ಣೀರ ಹನಿಗೆ
ನನ್ನೀ  ಮನಸ್ಸೇ ಹಾನಿ
ನಗು ಹನಿಯ ಸೃಷ್ಟಿಸು
ನಿನ್ನ ಹೃದಯದ ಕಡಲಿಂದ 


Friday, 18 May 2018

ಸುರ ಸುಂದರಿಯ ನೋಟ

ಸುರ ಸುಂದರಿಯ ನೋಟ 
ನನ್ನ ಮನಸ್ಸಿನೊಳಗೊಂದು ಕಾಟ   
ಅವಳ ಹಿಂದೆ ಬಿದ್ದವರಿಗೆಲ್ಲಾ 
ಯಾರಾದರೂ ಮಾಡಿಸಲಿ ಮಾಟ
ನನ್ನ ಹುಡುಗಿಯ ತಂಟೆಗೆ 
ಬಂದರೆ ಬಿಳತ್ತೆ ಬಗನಿ ಗೂಟ 
ಅವಳ ಅಪ್ಪ ಒಪ್ಪಿಕೊಂಡ ದಿನವೇ 
ಹಾಕಿಸುತ್ತೇನೆ ಮದುವೆ ಮನೆ ಊಟ

ಸಂಪ್ರೀತಿ

ಮುಖವ ನೋಡಿ ಮಾಡೋ  ಪ್ರೀತಿ
ಮುಖವಾಡ ಕಳೆದ ಮೇಲೆ  ಪಜೀತಿ
ಮನಸ ನೋಡೋ  ನನ್ನ ಸಂಗಾತಿ
ನಿನ್ನ ಮೇಲೊಂದೆ ನನಗೆ ಸಂಪ್ರೀತಿ


Sunday, 6 May 2018

ಕಥೆಯಾದವಳು

ಹೇಗಾಯಿತು ಶುರುವು
ಎಂದು ತಿಳಿಯೆ ನಾನು
ನನ್ನೆಲ್ಲ ಕನಸುಗಳಿಗೆ ಹೊಸ
ಪಾತ್ರ ತಂದವಳು ನೀನು

ನನ್ನ ಮನಸ್ಸಿನ ಹೊಸ
ಸಂಚಲನಕ್ಕೆ ಸೂಜಿ ದಾರ
ಕೊಟ್ಟು ಪ್ರೇರೇಪಿಸಿದವಳು
ನನಗೆ ಪ್ರಪಂಚವಾದವಳು

ನಿನ್ನ ಗುಂಗಿನ ಸ್ವಪ್ನಗಳೆಲ್ಲ
ನಿನ್ನಷ್ಟೇ ಸುಂದರಿವಾಗಿ
ದಿನದಿಂದ ದಿನಕ್ಕೆ ಹಸಿರಿನ
ಹೆಮ್ಮರವಾಗಿ ಬೆಳೆದು ನಿಂತಿವೆ

ನನ್ನವಳು ನೀನು ನನ್ನ
ಬದುಕಿಗೆ ಚಿನ್ಹೆ ಆದವಳು
ನನ್ನವಳು ನೀನು ನನ್ನ
ಬದುಕಿಗೆ ಕಥೆ ಆದವಳು

Wednesday, 2 May 2018

ನಗು ಚಿಲುಮೆ

ನುಡಿದ ಸಿರಿಗೆ ಸಾಗರ ಶುದ್ದಿ
ಅಂತರಂಗವ ಅರ್ಥೈಸಲು
ಅಂದು ಕೊಂಡಂತೆ ಆಗದು
ಖುಷಿಯ ಕೊಟ್ಟು ಖುಷಿಯ
ಪಡೆದು ಮುಂದಣ ಸಾಗುವುದು ಲೇಸು

ನಗುವ ನಯನ ನೂಕಿದೆ
ಜೀವ ಚಿಲುಮೆ ಅದುವೇ
ಬಾಳ ಪುಟದ ಸೂಕ್ಷ್ಮ ಬಿಂದು
ಕಳೆದು ಹೋಗೋ ನಗುವಲೊಂದು
ಪುಟ್ಟ ಕನಸು ಮರು ಜನ್ಮತಾಳಿದೆ




Monday, 30 April 2018

ಒಲುಮೆ

ಕಥೆಯೊಂದು ಶುರುವಾಗಿದೆ ಮೆಲ್ಲನೆ
ನನ್ನ  ಭಾವನೆಗಳ ಬೀಗ ಒಡೆದು
ಎದೆಯೊಳಗೆ ಮಲಗಿದ್ದ ಕನಸು 
ನಿನ್ನಿಂದ ಬೆಳಗಲು ಅಣಿಯಾಗಿದೆ

ನಿನ್ನಿಂದಲೇ ಈ ರೋಮಾಂಚನ
ನಿನ್ನಿಂದಲೇ ಈ ಪ್ರೇಮಾಯಣ
ನಿನ್ನಿಂದಲೇ ಈ ಬಾವನಲಹರಿ
ನಿನ್ನಿಂದಲೇ ಈ ಬಂದನಾ 

ನೀ ಮೌನವಾದರೆ ನಾ ಮೌನವಾಗುವೆ

ನೀ ಮೌನವಾದರೆ
ನಾ ಮೌನವಾಗುವೆ
ಕಚ್ಚಾಡೋ ಕಾದಾಡೋ
ಪ್ರೀತಿಯ ತೇರು ಹೊತ್ತ
ಬದುಕ ಹಕ್ಕಿಗಳು ನಾವು

ಸುಮ್ಮನಿದ್ದರೆ ಬೇಗ ಸಾವಂತೆ
ಪಟ ಪಟನೆ ಮಾತಾಡೋ ಮಾತಿನ
ಗೊಂಬೆ ಸುಮ್ಮನಿದ್ದರೆ ಏನು ಚೆಂದ
ಮೌನದ ಮರ್ಯಾದೆ ತಗಿಯೋ
ಕೆಲಸ ನಮ್ಮಿಂದ ತಾನೇ ಪೂರ್ಣ


Sunday, 29 April 2018

ಮತದಾನ

ಗೆಲ್ಲಿಸಿ ಬಿಡುವೆವು ಇನ್ನೊಮ್ಮೆ
ಕಾಣಲು ಸಿಗುವಿರಾ ಮತ್ತೊಮ್ಮೆ
ಮಲಗಿದ ಶೂರರು ಎದ್ದಿಹರು ಮಗದೊಮ್ಮೆ
ಓಟು ಕೊಡಿ ಎಂದು ಬೇಡುತಿದ್ದರೆ ಒಂದೊಮ್ಮೆ

ನಿಮ್ಮದೇ ಆಡಳಿತ ಮುಂದಿನ ಐದು ವರ್ಷ
ಪ್ರಜೆಗಳಿಗೆ ತರಲಿ ಒಂಚೂರು ನೆಮ್ಮದಿಯ ಹರ್ಷ
ಮತ್ತೆ ಹುಟ್ಟು ಹಾಕದಿರಿ ಜಾತಿಗಳ ನಡುವೆ ಸಂಘರ್ಷ
ಅಲ್ಪವಾದರೂ ಕೆಲಸ ಮಾಡಿ ಮುಂದಿನ ಐದು ವರ್ಷ

ನಮ್ಮೆಲ್ಲ ಕೆಲಸವ  ಬಿಟ್ಟು ಮಾಡುತ್ತಿದ್ದೇವೆ ಮತದಾನ
ಪ್ರತಿಯೊಬ್ಬರೂ ಮಾಡುತ್ತಿದ್ದರೆ ನಿಮಗೆ ಮಹಾದಾನ
ಸ್ವಲ್ಪವಾದರೂ ಉಳಿಸಿಕೊಳ್ಳಿ ನಿಮ್ಮ ನಂಬಿಕೆಯ ವರದಾನ
ಪ್ರತಿಯೊಬ್ಬರ ಹಕ್ಕು ತಪ್ಪದೆ ಮಾಡಿ ನಿಮ್ಮ ದಾನ ಮತದಾನ


ರೋಮಾಂಚನ

ನಲ್ಲೆಯ ಸಿಹಿ ಮುತ್ತಿಗೆ ಕಾಯೋ ಆ ಸುದಿನ
ತಡೆ ಹಿಡಿದು ಕಾಯುವುದು ಇನ್ನೆಷ್ಟು ದಿನ
ಮೊಡವೆ ಮುತ್ತಿಕ್ಕಿ ಮಳೆ ಸುರಿಸುತ್ತಿದೆ ಈ ದಿನ
ಭಾವನೆಗಳು ನಿನ್ನ ಸ್ಪರ್ಶಿಸುವುದು ಯಾವ ದಿನ

ಬದುಕು ಸಿಹಿ  ಸಕ್ಕರೆಯಂತೆ ಇರಲಿ ಅನುದಿನ
ಮನಸುಗಳು ಪರಸ್ಪರ ಬಯಸುತ್ತಿದೆ ಪ್ರತಿದಿನ
ಖುಷಿಯಲ್ಲಿ ತೇಲುತ್ತಿದೆ  ಹೃದಯ ಅನುದಿನ
ಪ್ರಣಯಿಸೋಣ ರೋಮಾಂಚನ ಹೊತ್ತ ಅಮೂಲ್ಯ ದಿನ


ನೆನಪಿನ ಕನಸುಗಳು

ನಿನ್ನ ಹೆಸರೊಂದೇ ಉಸಿರಾಗಿ
ಮೈಮರೆಸಿ ಮೂಕವಾಗಿಸಿದೆ
ಹೊಸ ಅಲೆಗಳ ಹನಿಗಳು
ಹೊಸ ಹರುಷವ ತಂದು
ಹೊಸ ಚೈತನ್ಯವ ತುಂಬಿದೆ

ನಿನ್ನ ನೆನಪಿನ ಕನಸುಗಳು
ಪದಗಳೇ ಇಲ್ಲದ ಕಾವ್ಯ
ಸೃಷ್ಟಿಗೆ ಪ್ರೇರೇಪಿಸುತ್ತಿವೆ
ಕನಸುಗಳು ದಿನದಿಂದ ದಿನಕ್ಕೆ
ಬಾನುವಿನೆತ್ತರಕ್ಕೆ ಪುಟಿದೇಳುತ್ತಿವೆ 

Thursday, 26 April 2018

ಕನಸುಗಳ ತುದಿ

ತುತ್ತ ತುದಿಯಲ್ಲಿವೆ ಕನಸುಗಳು
ತುಂಡು ಮಾಡುವುದು ಏತಕೆ
ಮನಸ  ಕೋಟೆಗೆ  ಭಾವನೆಯ
ಬಣ್ಣಗಳ  ಹಚ್ಚಿ ಕಟ್ಟಿಹೆನು
ಕನಸಲ್ಲೂ ಕೆಡುವುದ ಮರೆತುಬಿಡು

ಜಾರಲು ಬಿಡದಿರು ಇರುವುದುಒಂದೇ
ಹೃದಯ ಅದು ನಿನಗೆ ಕೊಟ್ಟಾಗಿದೆ
ತೀರಕ್ಕೆ ಸೇರಿವೆ ಕನಸುಗಳ ಜಾತ್ರೆ
ಮರಳಿ ಗೂಡಿಗೆ ಸೇರವು ನಿನ್ನ ಬಾವನ
ಲೋಕದಲ್ಲಿ ನಿಷ್ಚಿಂತವಾಗಿ ನಿದ್ರಿಸುತ್ತಿವೆ


ಪ್ರೀತಿ ನಿರಂತರ

ನಿರಂತರ ಈ ಪ್ರೀತಿ ನೆರವೇರಿಸೋ
ಕನಸುಗಳ ಹೊತ್ತ ಪ್ರೀತಿಯ ಪಲ್ಲಕ್ಕಿ
ಕಾಣದ ಹೃದಯದ ಬೆಸುಗೆಯ ಬಿಂಬಿಸೋ
ಆಶಾಕಿರಣಗಳ ಹೊತ್ತ ಭಾವನೆಗಳ ಮುಂಬತ್ತಿ 

ಬಿಟ್ಟೋಗೋ ದಾರೀಲಿ ನದಿಯೊಂದು ಮೂಡಿದೆ

ಬಿಟ್ಟೋಗೋ ದಾರೀಲಿ ನದಿಯೊಂದು 
ಮೂಡಿದೆ ಕಣ್ಣೀರ ಕಥೆಗೆ ಬದುಕಿನ
ಏರಿಳಿತ ನೋವಿನ ಮಳೆಯಲ್ಲಿ
ಮಿಂದೆದ್ದು ಅಂತ್ಯದ ದಿಕ್ಕಿಗೆ ಹೊರಟಿದೆ

ಇಷ್ಟೆಲ್ಲ ಅದ್ಮೇಲೂ ಸುಮ್ನಿರು ಅಂದ್ರೆ
ಮನಸಲ್ಲಿ ಸುನಾಮಿ ಆಗೋದು ಪಕ್ಕನೆ
ಕೊನೆ ತನಕ ಜೊತೆ ಇರ್ತೀನಿ ಅಂದೋರು
ಕಣ್ಣೀರನ್ನೇ ಜೊತೆ ಮಾಡಿ ಹೋಗ್ಬಾರ್ದು

Monday, 23 April 2018

ಒಂಚೂರು ಕೋಪಿಷ್ಠೆ

ಒಂಚೂರು ಕೋಪಿಷ್ಠೆ ನನ್ ಹುಡುಗಿ
ನಗು ನಗ್ತಾನೇ ಅಳ್ತಾಳೆ ರೀಸನ್ ಇಲ್ದೇನೆ
ಸಮಾಧಾನ ಮಾಡೋದ್ರಲ್ಲೇ ಕಳೆದು
ಹೋಯ್ತು ರೀ ನನ್ನ ಈ ಅರ್ಧ ಆಯಸ್ಸು

ಸಡನ್ ಆಗಿ ಚೇಂಜ್ ಆಗ್ತಾಳೆ ಹೇಳ್ದೆ ಕೆಳ್ದೆನೆ
ಬಿಪಿ ರೋಗಾನು  ಶುರು ಆಗಿ ಬಿಟ್ಟಿದೆ
ಇವಳು ಕೊಡೊ ಟೆನ್ಶನ್ ಗೆ ಏನ್ ಮಾಡೋದು
ಹೇಳಿ ಮನಸಲ್ಲಿ ಇವಳೊಬ್ಬಳೇ ಸೆಟ್ಟ್ಲಾಗಿ ಬಿಟೌಳೆ


ಬಾಲ್ಯದ ಬಿಡಾರ

ಬಾಲ್ಯದ ಓಟ ಖುಷಿಯ ಚಪ್ಪರದತ್ತ
ಇಂದಿನ ಓಟ ನೆಮ್ಮದಿಯ ಹಿಂಡುವತ್ತ
ಶೂನ್ಯ ಕನಸಲ್ಲಿ ನೆಮ್ಮದಿಯಿತ್ತು
ನಾಳೆ ಎಂಬುದು  ನಕಾಶೆ ಸೇರಿತ್ತು

ಚಂಚಲ ಮನಸ್ಸಿನ ಪರದೆಯಲ್ಲಿ
ನಾಟಕೀಯ ಬೆಳವಣಿಯದ್ದೇ ಗುಂಗು
ಸಾಮಾಜಿಕ ತಾಣಗಳೇ ಪ್ರಕೃತಿ ತಾಣಗಳಾಗಿವೆ
ವಸ್ತುಗಳೇ ಒಡನಾಡಿಗಳು ವಾಸ್ತವ ವಾಕರಿಕೆಯಾಗಿದೆ

ಬದುಕ ಬಿಡಾರ ಬರವಿಲ್ಲದೆ ಸಾಗಿತ್ತು
ನಗುವಿನ ದೋಣಿ ಅಂಬಿಗನಿಲ್ಲದೆ ಸಾಗಿತ್ತು
ಬದುಕು ಸಣ್ಣ ಹೊಂಡದ ಕಪ್ಪೆಯಂತಿದ್ದರು
ಖುಷಿಯ ಕಣಜವೇ ನಮ್ಮ ಕೈಯಲ್ಲಿತ್ತು

ಸಮುದ್ರವೇ  ಕೈಯಲ್ಲಿದ್ದರು ಖುಷಿಯ
ಹನಿಗಳು ಜೇಬಿನಲ್ಲಿ ಉಳಿಯುತ್ತಿಲ್ಲ
ಯೋಚನೆಗಳು ಸಾವಿರಾರು ಬಂದು
ಉಳಿದವರಿಗಿಂತ ಹೋಗುವವರೇ ಜಾಸ್ತಿ


Friday, 13 April 2018

ಹುಟ್ದಗಿಂದ ನೆಟ್ಟಗಿಲ್ಲ

ನಾನಂತೂ ಹುಟ್ದಗಿಂದ ನೆಟ್ಟಗಿಲ್ಲ
ಸುಮ್ನೆ ಅಂತೂ ಇರೋದೇ ಇಲ್ಲ
ಮಾಡೋದೆಲ್ಲ ತಲೆಕೆಟ್ ಕೆಲಸ
ತರ್ಲೆ ಮಾಡೋ ತಿರಬೋಕಿ ಲೈಫು
ಮೆಚ್ಚಿದೆ  ಮೆಚ್ಕೋಳಿ ಇಲ್ಲ ಅಂದ್ರೆ
ಇರುವೆನಾ ಬಿಟ್ಕೊಳಿ ಬಿಟ್ಕೊಳಿ

ಚಿಕ್ಕದಂತಾ ಫ್ಯಾಷನ್ ಅವಾಗ ಅವಾಗ
ಮಾಡ್ತೀನಿ ಗಡ್ಡ ಮೀಸೆ ಅಂತೂ ತಗಿಯೋಕೆ
ಬೇಜಾರು ವಜ್ರಮುನಿ ಲೂಕ್ಕಿಗೇನು ಕಡಿಮೆ ಇಲ್ಲ
ನೋಡೋರ್ಗೆ ಬೇಜಾರು ನಂಗಂತೂ ನೋ ಟೆನ್ಶನ್
ದೊಡ್ಡ ದೊಡ್ಡ ಕನ್ಸ್ಗಳು ನಂಕೈಯಲ್ಲಿ ನಿಲ್ಲಲ್ಲ
ಒಟ್ನಲ್ಲಿ ಯಾವಾಗೂ ಹ್ಯಾಪಿ ನೇ ಬಿಂದಸ್ಸು ನನ್ ಲೈಫು



Thursday, 12 April 2018

ಮುಗ್ದ ಮನದವಳು

ಒಂಚೂರು ಹುಸಿ ಕೋಪದವಳು
ಇವಳ ಕಂಡರೆ ಎಲ್ಲರಿಗೂ ಇಷ್ಟ
ನಿಭಾಯಿಸುವುದು ಬಲು ಕಷ್ಟ
ಮುಗ್ದ ಮಗುವಿನ ಮನದವಳು

ಹಗಲಲ್ಲೇ ಕಾಡುವ ಮೋಹಿನಿ ಇವಳು
ಇನ್ನ ರಾತ್ರಿಯ ಕಥೆ ಬಿಡಿ ಕಣ್ಣೀರ ವ್ಯಥೆ
ಸರಳ ನಗುವೇ ಇವಳಿಗೆ ಸರಮಾಲೆ
ಹಚ್ಚಿ ಕೊಂಡರಂತೂ ಕಚ್ಚೆ ತಿನ್ನುವಳು

ಬಲು ಬೇಜಾರು ಇವಳಿರದ ದಿನ
ವಟ ವಟ ಕಪ್ಪೆಯು ಸುಮ್ಮನಾಗವುದು
ಇವಳಿಗೆ ಪೈಪೊಟಿ ಕೊಡಲಾಗದೆ ಇನ್ನ
ಜೊತೆ ಇರುವವರ ಕಥೆ ಗೋವಿಂದ ಗೋವಿಂದ

ನಂಬಿದರೆ ನದಿಯನ್ನೇ ಹರಿಸುವಳು
ಕಾರಣವಿಲ್ಲದೆ ಕಣ್ಣೀರು ಹಾಕುವಳು
ಆದರೂ ಸೀದಾ ಸಾದಾ ಹುಡುಗಿ
ಸಿಗುವುದು ಬಲು ಅಪರೂಪ ನೋಡಿ 


Tuesday, 10 April 2018

ಮಧ್ಯಂತರ

ಖುಷಿಯ ಹೊತ್ತು ನಡುವೆ ನಿಂತು
ನಾಳೆ ಕನಸ ಇಂದೇ ಭಜಿಸಿ
ಊಹೆಯ ನಿಲುಕಿಗೆ  ನಡುಕ ಕಂಡು
ಭಯದ ಬೆನ್ನೇರಿ ಬದಲಿಸೋ ದಾರಿ

ಆಗಿದ್ದು ಆಗಲಿ ಆಗುವುದು ಆಗಲಿ
ನುಗ್ಗಾಟ ನಿನದು ಜಗ್ಗಾಟ ಪರರದು
ತೂಗುತ್ತಿದೆ ತೂಗುಯ್ಯಾಲೆ ತಲೆಮೇಲೆ
ಪರದೆ ನಿನದೆ ಉತ್ತರವೂ ನಿನ್ನಿಂದಲೇ



ಪ್ರೀತಿಯ ಗರಿ

ನನ್ನ ಪ್ರೀತಿಯ ಪ್ರಪಂಚಕ್ಕೆ
ನೀನೊಬ್ಬಳೇ ರಾಣಿ ಎಂದೆಂದಿಗೂ
ನಾಳೆಯ ನೆಮ್ಮದಿಗೆ ಕಟ್ಟೋಣ
ಪುಟ್ಟ ಗೂಡೊಂದನ್ನು ಪ್ರೀತಿಯ ಗರಿಗಳಿಂದ



Sunday, 8 April 2018

ಸಂದೀಮೂಲೆಯೊಲ್ಲೊಂದು ಬರಹ

ಸಂದೀಮೂಲೆಯೊಲ್ಲೊಂದು ಶಬ್ದ
ಗಹಿಸುತಿತ್ತು ತನ್ನ ಮೆರುಗ ಬಣ್ಣಿಸಲು
ಓರೆ ಹಚ್ಚಲು ನಾ ನಿರಾಯುಧನಾದಾಗ
ಬರೆತು ಇಟ್ಟೇ ಅದರ ವಿಸ್ಮಯ ಪದಪುಂಜದಿಂದ


ಕಾರಣವಿಲ್ಲದ ರಣ ಕಹಳೆ

ನಿನ್ನೆಲ್ಲವ ಸಿಟ್ಟು ನನ್ನೊಬ್ಬನ ಮೇಲೆ
ಏತಕೆ ಈ ಕಾರಣವಿಲ್ಲದ ರಣ ಕಹಳೆ
ಯುದ್ಧ ಮಾಡದೆ ಸೋಲೊಪ್ಪಿಕೊಂಡಿಹೆನು
ನಿನ್ನ ಹೆಸರ ಬಾಳ ಜೇಬಲ್ಲಿ ಬಂದಿಸಿಕೊಂಡು

ಮುಸ್ಸಂಜೆ ಹೊತ್ತಲ್ಲಿ

ಮುಳುಗುತಲಿತ್ತು ಆ ರವಿಯ ಕಿರಣ
ತೆರೆಯುತಿತ್ತು ನಕ್ಷತ್ರಗಳ ಆವರಣ
ಬೂಮಿಯೇ ಬೆಂಡಾಗಿ ಆಕಾಶವೇ
ತಿಳಿನೀಲಿಯಾಗಿ ಕಣ್ಣಲ್ಲೇ ಸೇರಿತ್ತು

ಕೊನೆಯುಸಿರ ಆ ಕಿರಣ
ಹೊಸಯುಸಿರ ಆ ಚಂದಿರ
ಮೋಡಕ್ಕೆ ಮುತ್ತಿಕ್ಕುವ
ಅಲೆಯಾಗಿ ನೆಲೆನಿಲ್ಲುವಾಸೆ

ಸಾಧನೆ ಸೂರಿಗೆ ನಿನ್ನದೇ ಹಂಚು

ಜಯಿಸೋ ದಾರಿ ಮುಂದೆ ನಿಂತಿದೆ
ಹಿಂದೆ ನಿಂತರೆ ಹಿಂದೆ ಉಳಿವೆ
ಕಂಡ ಕನಸ್ಸು ಪೂರ್ಣ ಗೊಳಿಸು
ಸಾಧನೆ ಸೂರಿಗೆ ನಿನ್ನದೇ ಹಂಚು


ಮರೆತು ಬಿಡು ಹಳೆಯ ಸೋಲು
ನೋವು ನುಂಗಿ ನಡೆ ಮುಂದೆ
ಸಹನೆಯೊಂದು ಜೊತೆಗೆ ಇರಲಿ
ಮುಂದೆ ಬರುವ ಗೆಲುವು ನಿನದೆ



Wednesday, 4 April 2018

ಬಂದಿಯಾಗೋ ಮನಸ್ಸೇ

ಬಂದಿಯಾಗೋ ಮನಸ್ಸೇ
ಯಾಕೆ ಹೀಗೆ ಮುನಿಸ್ಸು
ಸುಮ್ಮನೆ ಇರಲೂಬಹುದೇ
ಮೌನದ ಮಾತು ನಿಲ್ಲಿಸಿ 

Friday, 30 March 2018

ಮುನಿಸದಿರು ಅವಳ ಮೃದು ಅವಳ ಹೃದಯ

ಮುನಿಸದಿರು ಅವಳ  ಮೃದು ಅವಳ ಹೃದಯ
ತಣಿಸದಿರು ಅವಳ ಕನಸುಗಳ ಗೋಪುರ
ಸಂತೈಸುತ್ತಿರು ಅವಳ ಸೋಲುಗಳ ಜೊತೆಯಾಗಿ
ನಿನ್ನವಳು ಅವಳು ನಿನಗಾಗಿ ಅವಳು

ಹಿಗ್ಗಿನಿಂದ ಸಾಗು ಅವಳು ನಿನ್ನವಳೆಂದು
ಪ್ರೀತಿಯ ಸಾಗರವ ಹೊತ್ತವಳು ಅವಳು
ತವರಿನ ಕೊಂಡಿ ಬಿಟ್ಟು ಬಂದವಳು ಅವಳು
ನಿನ್ನವಳು ಅವಳು ನಿನ್ನೊಬ್ಬನೆ ಅವಳಿಗೆ


Thursday, 29 March 2018

ಮೂಕ ಕಲ್ಪನೆ

ಹಿತವ ಹಿಡೊಯೋ ಮನವೇ
ಮೂಕವಾಗಿ ಕುಂತೆಯಲ್ಲೇ
ಕಣ್ಣು ಮುಚ್ಚಿ ಸುಮ್ಮನೆ ಕಾಣು
ಹೊಸ ಕನಸ ಮೆರವಣಿಗೆ

ಬಂದಿಯಾಗೋ ಮನಸ್ಸೇ
ಬದಿಗೆ ಸರಿದು ಸೊರಗಿದೆ
ಚಿಲುಮೆ ಕೊಟ್ಟು ಜೀವ
ಉಳಿಸು ಮೃತ್ಯು ಪತನಕೆ

Friday, 23 March 2018

ನನ್ನ ಬಾಳ ಚಿಲುಮೆಯ ಪುಸ್ತಕ

ಸುಮ್ಮನೆ  ನಿಂತಿದ್ದ ಹೃದಯ ಹೊಸ
ಕಥೆಯ ಕೆತ್ತನೆಗೆ ಬೆರಳುಗಳ ಸರಿಸುತ್ತಿದೆ
ಕಣ್ಣ ರೆಪ್ಪೆಯ ಮೀಡಿತಗಳೇ ಪದಗುಂಜಗಳು
ಕೈಜಾರದೇ ಮೆಲ್ಲನೆ ಹೃದಯ ಸೇರಲಿ
ನನ್ನ ಬಾಳ ಚಿಲುಮೆಯ ಪುಸ್ತಕ 

Wednesday, 14 March 2018

ಏಕಾಂಗಿತನವೇ ನನ್ನ ಕೈಸೇರಿದೆ ಮೌನಕ್ಕೆ ಗಂಟುಬಿದ್ದು

ಹೊಸ ಕಥೆಯ ಬರೆಯುವೆ ನಿನ್ನ ನೆನಪಲ್ಲಿ
ಹೆಕ್ಕಿ ತರುವೆನು ಪದಗಳನ್ನು ನನ್ನೆದೆಯ ಜೋಪಡಿಯಿಂದ
ಭಾವನೆಗಳ ಗೂಡಿಗೆ ಬೇಲಿ ಹಾಕಿ ಸದಾ ಕಾಯುವೆನು
ಏಕಾಂಗಿತನವೇ ನನ್ನ ಕೈಸೇರಿದೆ ಮೌನಕ್ಕೆ ಗಂಟುಬಿದ್ದು 

Tuesday, 13 March 2018

ಸುಂದರ ಚಂದಿರ ಬರುವನು ತಿಂಗಳಿಗೊಮ್ಮೆ

ಸುಂದರ ಚಂದಿರ ಬರುವನು ತಿಂಗಳಿಗೊಮ್ಮೆ
ನನ್ನ ಚಲುವೆ ಬೆಳಕ ಬೀರುತಿಹಳು ಪ್ರತಿದಿನವೂ
ಕೊನೆಪಕ್ಷ ಚಂದಿರನಾದರೂ ಗಮನಿಸಬಾರದೇ 
ಅವನಿಗಾದರು ಸಿಗುತಿತ್ತು ಒಂದು ದಿನದ  ವಿಶ್ರಾಂತಿ

ಪ್ರತಿ ಕಣ್ಣಿರಿಗೂ ಬರೆಯುವೆ ಕಾದಂಬರಿ

ನಿನ್ನ ಪ್ರತಿ ಕಣ್ಣಿರಿಗೂ ಬರೆಯುವೆ ಕಾದಂಬರಿ
ಕನಸಲ್ಲೂ ಒದ್ದೆ ಆಗದ ಹಾಗೆ ಕಾಪಾಡುವೆನು
ನಿನ್ನ ಬೃಂದಾವನದ ರಾಣಿಯಾಗಿ ರಾರಾಜಿಸದಿದ್ದರು
ಪ್ರೀತಿಯ ಗುಡಿಸಲಿನಲ್ಲಿ ಸದಾ ಜ್ಯೋತಿಯಂತೆ ಬೆಳಗಿಸುವೆನು


Monday, 12 March 2018

ರೈತನ ಮಗ

ನನ್ನೊಬ್ಬ ರೈತನ ಮಗ ಹೆಮ್ಮೆಯಿಂದ
ಮೀಸೆ ತಿರುಗಿಸಿ ಹೇಳೆವೆ  ಅಂಬಲಿ
ಉಂಡರು ಅಂಬಾರಿಗೂ ಮೀಗಿಲಾದ
ಸುಖವುಂಟು ನನಗೆ ನೆಮ್ಮದಿಯುಂಟು

ನನ್ನ ಬೆವರಲ್ಲಿದೆ ಮೂರು ಹೊತ್ತಿನ
ತುತ್ತು ಯಾರಿಗೂ ಅಂಜ ಬೇಕಿಲ್ಲ
ಸ್ವಾಭಿಮಾನದ ಕಣಜವೇ ಹೋತ್ತಿಹೆವು
ಸುಮ್ಮನೆ ಕೂರುವವರಲ್ಲ ಕಾಲಹರಣ ಮಾಡದೇ

ನನ್ನೊಬ್ಬ ರೈತನ ಮಗ ಗತ್ತಿನಿಂದ
ಬದುಕುವೆ ಕಿತ್ತು ತಿನ್ನುವ ಅಹಂಕಾರ
ನಮಗಿಲ್ಲಉಂಡ ಮನೆಗೆ ದ್ರೋಹ ಮಾಡೋ
ಪರದೇಸಿ ಬಾಳ್ವೆ ನಮ್ಮದಲ್ಲ ಬೆವರ ಹನಿಯಲ್ಲಿದೆ ನಮ್ಮ ಬದುಕು

ಭೂಮಿ ತಾಯ ಹಸಿರ ಕಾಯೋ
ಮಣ್ಣಿನ ಮಗ ನೊಗವ ಹೊತ್ತು ನೋವು ಉಂಡು
ಹಸಿರ ಕಣಜದಲ್ಲಿ ಖುಷಿಯ ಕಣೋ ಅಲ್ಪ ತೃಪ್ತ
ಜೀವನ ರಥವು ನಡೆಯುತಿಹುದು ಬಿಡುವು ಇಲ್ಲದೆ



Friday, 9 March 2018

ಮರೆತು ಬಿಡುವೆ ಒಂದೇ ಸಲಿಗೆ

ಮರೆತು ಬಿಡುವೆ ಒಂದೇ ಸಲಿಗೆ
ಇರುವ ತನಕ ಇರದು ನೋವು
ಹೋದ ಗಳಿಗೆ ನೊಂದ  ಹೃದಯ
ಬಾಡಿದೆ ಈ ಬದುಕು ಸಂಚಾರವಿಲ್ಲದೆ

ಹುಚ್ಚಾದ ಪ್ರೀತಿ ಹೆಪ್ಪಾಗಿ ಹೋಗಿದೆ
ಒಡಲೊಳಗಿನ ತೀರ ಮಂಕಾಗಿ ನಿಂತಿದೆ
ತಿಳಿ ಉಸಿರ ಹೆಸರು ಹಬೆಯಾಗಿ ಕಾಡಿದೆ
ಮೌನಕ್ಕೆ ನಸುನಕ್ಕು ಶರಣಾಗಿ ಉಳಿದಿಹೆನು

Tuesday, 6 March 2018

ಪ್ರೀತಿಯ ಗೂಡಿದು ಖುಷಿಯಾಗಿ ಸೇರು

ಕಣ್ಣಲ್ಲೇ ಕನಸೊಂದು
ಮರಿಹಾಕಿ ಮರವಾಗಿದೆ
ನನ್ನೆದೆಯ ತೀರಕ್ಕೆ ಕಾಲಿಟ್ಟು
ಹೊಸ ಅಧ್ಯಾಯ ಬರೆದಿದೆ

ಸುಮ್ಮನೆ ನಾನಿದ್ದೆ ನೀ
ಬಂದೆ ಹೊಸ ಸಡಗರವ
ಶುರುಮಾಡಿದೆ ನೀ ಇಲ್ಲದ
ಈ ಸಂಜೆ ಸದ್ದಿಲ್ಲದೇ ಕರಗಿದೆ

ಕಣ್ಣಲ್ಲೇ ಕನಸೊಂದು
ಮನೆಮಾಡಿ ನಿನ್ನ
ಗೃಹಪ್ರವೇಶಕ್ಕೆ ಕಾದಿಹುದು
ಪ್ರೀತಿಯ ಗೂಡಿದು ಖುಷಿಯಾಗಿ ಸೇರು



Sunday, 4 March 2018

ಭಾವತೀರಯಾನ

ಬಣ್ಣದ ಬದುಕಿಗೆ
ಚಿನ್ನದ ಲೇಪನ ಕೊಟ್ಟು
ಅಮಾವಾಸೆಯಲ್ಲೂ
ಬೆಳಗಬೇಕೆಂದರೆ
ಬೆಳಗೀತೆ ಬದುಕು

ಅಂದದ ಬದುಕಿಗೆ
ಹೊಸ ಗೆಜ್ಜೆಯ
ತೊಡಿಸಿ ಮೂಕ
ನಾದ ಬೇಕೆಂದರೆ
ಯಾವ ದಿಕ್ಕಿನಿಂದಲಿಸುವುದು  

Saturday, 24 February 2018

ಸಾಗರದ ಅಲೆಗಳ ಸರಿಸಿ

ಕನ್ನಡಿ ನಾಚುವ ಸುಂದರಿಗೆ
ಕೋಪವು ಯಾಕೆ ನನ್ನಾಕೆ
ಮುದ್ದಿನ ನಗುವು ತುಂಬಾ ಚೆಂದ
ನಿನ್ನ ಮುಖದ ಕನ್ನಡಿಗೆ

ಬದುಕ ಬೇಕು ನಿನ್ನ ಜೊತೆ
ನನ್ನ ಕನಸುಗಳ ತೇರಿನಲ್ಲಿ
ನಿನ್ನ ಖುಷಿಗೆ ನಾ ಎಂದು ಬದ್ದ
ಬಾಡಿಸದೆ ಇಡುವೆನು ನಿನ್ನ ನಗುವ

ಬರೆದು ಇಡುವೆ ನಿನ್ನ ಹೆಸರ
ನನ್ನ ಬಾಳ  ಮದ್ಯ ಪುಟದಲ್ಲಿ
ಎಂದು ಅಳಿಸದ ಹಾಗೆ
ಸಾಗರದ ಅಲೆಗಳ ಸರಿಸಿ



Monday, 5 February 2018

ಕವಲುದಾರಿ

ನಿಂತಿಹೆನು ನಾನು ಉಸಿರುಗಟ್ಟಿ
ಲೋಕವನ್ನೆಲ್ಲ ಎದುರು ಹಾಕಿ
ಸುಮ್ಮನೆ  ಸೋಲೊಪ್ಪಿಕೊಳ್ಳಲಾಗದು
ನನ್ನ ಮನೋವ್ರತ್ತಿಗೆ  ಭಂಗಮಾಡಿ

ಸ್ವಪ್ನಗಳು ಸುಂದರವಾಗಿದೆ
ನನ್ನ ಗುರಿಗಳಿಗೆ ಗುರುಗಳಿಲ್ಲ
ತಟಸ್ಥವಾಗಿ ತಣ್ಣೀರಿನಲ್ಲಿ
ಹಾಸಿಗೆ ಹೊದ್ದು ಮಲಗಿವೆ

ಎಂಟನೆಗೆ ಏಣಿ ಕೊಂಡು
ಮೂರುಕಾಸಿಗೆ ಅದನ್ನು ಮಾರಿ
ಅಲೆಮಾರಿಯಾಗಿ ಬದುಕೋ
ಮಂದಬುದ್ಧಿಗೆ ನಾವಿಕನಾದೆ

ಸುಮ್ಮನಿದ್ದರೆ ಸಾವಿಗೂ
ನನ್ನ ಮೇಲೆ ಸೇಡು ನಕಾರಾತ್ಮಕಥೆ
ಬದಿಗೊತ್ತಿ ವಿಕಿರಣದಂತೆ
ಹೊರಹೊಮ್ಮೋ ಸಾಧನವಾಗುವಾಸೆ


Wednesday, 31 January 2018

ಇರುವೆ

ಹನಿ ಹನಿಯ ಸಾಲಿನಲ್ಲಿ ಸಾಗುತಲಿತ್ತು
ಸಾಸಿವೆಯ ಆಭರಣಗಳು ಎಂತದೋ
ಆತ್ಮಸ್ತ್ರೈರ್ಯ ಎಂತದೋ ಗೆಳೆತನ
ಒಂದಾನೊಂದು ಬಿಟ್ಟು ಕೊಡದ ಬೆಸುಗೆ
ಕಲಿಯಲೇ ಬೇಕು ಒಡನಾಡಿಗಳ ಭಾಂದೌವ್ಯಕ್ಕೆ 

ಎಂತ ಬಲಶಾಲಿಯೂ ಅಂಜಲೇಬೇಕು
ಮೃತ್ಯು ಕೂಪಕ್ಕೆ ಎಳೆದೊಯ್ಯೋ ತಾಕತ್ತಿಗೆ
ಸಣ್ಣಿದ್ದರೇನು ಹೊತ್ತೊಯ್ಯುವುದು ಮೂರು
ಪಟ್ಟು ಯಮನನ್ನು ಮೀಸೆ ತಿರುಗಿಸಿದರೆ
ಬಿತ್ತೋ ಆಪತ್ತು ನಿಮ್ಮ ಜೇಬಿಗೆ ಪಕ್ಕನೆ



Tuesday, 30 January 2018

ಕಳ್ಳರ ದಿಬ್ಬಣ

ಕಳ್ಳರ ದಿಬ್ಬಣ ಸಾಗುತಲಿತ್ತು ಮುಸುಕಿನ ವೇಷದಲ್ಲಿ
ಎಲ್ಲದ ಚಿತ್ತ ಇವರತ್ತ ಎತ್ತ ಸಾಗುವವರೆಂದು
ಕದ್ದು ಮುಚ್ಚಿ ಓಡಾಡಿ  ಯಾರ ಮೆಚ್ಚಿಸುವರೆಂದು
ಕೊನೆಗುಳಿಯುವುದು ಒಂದೇ ಕಪ್ಪು ಚುಕ್ಕೆ
ಬೃಹದಾಕಾರದ ಬದುಕಿನ ಏರುಪೇರಿಗೆ 

ಅರ್ಥಪೂರ್ಣ

ಮುಂದೆ ಪಯಣಿಸುವ  ಹುಮ್ಮಸ್ಸು ಹೆಮ್ಮರವಾಗಿದೆ
ಆಸೆಗಳಿಗೆ ಆಣೆಕಟ್ಟು ಕಟ್ಟಲಾಗದು ಬರಡಾಗುವ ತನಕ
ಸೂಕ್ಷ್ಮ ಸಂದೇಶಗಳಿಗೆ ಬೆಲೆಕೊಡುವವರಿಗೆ ಬೆಲೆಬಾಳುವುದು
ಜೀವನದ ನಂಟು ಉಸಿರಿರುವ ನಿಲ್ಲುವುದು ಮೂರು ಗಂಟು




Tuesday, 23 January 2018

ನಂಟುಂಟು ನನಗೆ ಒಂಟಿತನದಲ್ಲಿ

ನಂಟುಂಟು ನನಗೆ ಒಂಟಿತನದಲ್ಲಿ
ಪ್ರಶ್ನೆಗಳಿಗೆ  ಉತ್ತರವುಂಟು ನನಗೆ ಒಂಟಿತನದಲ್ಲಿ
ಹೆಮ್ಮರವಾದ ನೆನಪುಗಳುಂಟು ನನಗೆ  ಒಂಟಿತನದಲ್ಲಿ
ಸಿಹಿಯಾದ ನೋವುಗಲುಂಟು ನನಗೆ ಒಂಟಿತನದಲ್ಲಿ
ಒಬ್ಬಂಟಿಗನಲ್ಲ ನಾನು ನಂಟುಗಳೇ ನೆಂಟರಾದಾಗ





Sunday, 21 January 2018

ಮುಗಿಲ ಮೇಲೇರಿ ಕುಳಿತು

ಕನಸೊದ್ದು ಮಲಗಲು ಆಗುತ್ತಿಲ್ಲ
ನಿನ್ನದೊಂದೇ ಕನಸ್ಸು ಕಣ್ತುಂಬಿರಲು
ಪ್ರತಿ ಕ್ಷಣವೂ ನಿನ್ನದೊಂದೇ  ಬಿಂಬ
 ಮನಸಲ್ಲಿ ದೂಳೆಬ್ಬಿಸುತ್ತಿದೆ

ಯಾರ ನಯನಕ್ಕೂ ನಾಚದ ನಾನು
 ನಿನ್ನ ಗಾಂಭೀರ್ಯಕ್ಕೆ  ಜೋತುಬಿದ್ದೆ
ಮನಸೋ ಇಚ್ಛೆ ಪ್ರತಿ ದಿನವೂ ಕಳೆದೋಗುತ್ತಿದೆ
ಮುಗಿಲ ಮೇಲೇರಿ ಕುಳಿತು


Friday, 19 January 2018

ಉಳಿಗಾಲ

ಉಳಿಗಾಲ ನಂಗಿಲ್ಲ ಮುನ್ನುಗ್ಗೋ ಮಾರಾಮಾರಿಯಲ್ಲಿ
ಸೊಲೊದೆ ಕೊನೆಯಲ್ಲ ಜಯದ ಋಣವಿಲ್ಲದಿದ್ದಾಗ
ಮೈ ಕೊಡವಿ ಮೇಲೆದ್ದು ಓಡಿದರೆ ಬೆಲೆಯುಂಟು ಬದುಕಿಗೆ
ಛಲಗಾರ ನಿನಲ್ಲೇ ಅಡವಿಹನು ಎದ್ದೇಳೋ ಬಹು ಬೇಗ




ತೂಕ

ಚತುರತೆಯ ಸರದಾರನಿಗೆ ತೂಕದ ಮಾತೆ ಮುತ್ತಿನ ಉಂಗುರ
ಹೃದಯದಲ್ಲಿರುವ ಬಾವನಲಹರಿ ಅನುಪಾತಕ್ಕೆ  ಪ್ರೀತಿಯೇ ತೂಕ
ಉತಮ್ಮ ಬದುಕಿನ ಚಲಾವಣೆಗಾರನಿಗೆ ಗೌರವವೇ ತೂಕ
ಬಾಳ ಪುಸ್ತಕದ ಮಗ್ಗಿಗೆ ಸಜ್ಜನರ ಸಹಬಾಳ್ವೆವೆ ತೂಕ
ಪ್ರಪಂಚದ ಜ್ಞಾನ ಬಂಡಾರ ಅರಿಯಲು  ಪುಸ್ತಕ ಬಲವೇ ತೂಕ 



Thursday, 18 January 2018

ಬಂಗಾರದ ಬೇಟೆ

ಬಂಗಾರದ ಬೇಟೆಗೆ  ಕಾದಿರುವ ಹುಚ್ಚು ಹೋರಾಟಗಾರನಿಗೆ
ಕಾರ್ಯ ಸಿದ್ದಿ ಆಗುವ ಆಲೋಚನೆಯೊಂದೇ ಸಾಲದು
ಬೇಟೆಯ ಬೆಲೆಯೂ ಮುಂದಿನ ಗುರಿಯು ಗೊತ್ತಿರಬೇಕು
ಮೋಹಕ್ಕೆ ಸಿಲುಕಿ ಗುರಿ ಇಟ್ಟ ಬಾಣ ತಪ್ಪದಿರಬೇಕು


ನಿರೀಕ್ಷಣೆ

ಅರಳಿದ ಹೂವು ಬಾಡಲೇ ಬೇಕು ಈ ಬಡಕಲು ಜೀವನದಲ್ಲಿ
ಎಲ್ಲದೂ ಶಾಶ್ವತವಲ್ಲ ಉಸಿರೋದೇ ಶಾಶ್ವತ ನಿಲ್ಲುವ ತನಲ
ಖುಷಿಯ ಹೊದ್ದು ಮಲಗುವುದು ಕಷ್ಟ ಮರೀಚೆಯಾಗುವುದು ಕ್ಷಣದಲ್ಲೇ
ಕೊನೆಯಲ್ಲಿ ತೇಲುವುದು ದೋಣಿ  ಕಣ್ಣೀರಿನ ಜನಸಾಗರದಲ್ಲಿ ಸಿಲುಕಿ
ಆಲೋಚನೆಯ ಆಗು ಹೋಗುಗಳು ಆಹಾರ ವಾಗದು ಉದರ ನಿಮಿತಕ್ಕೆ
ನಿರೀಕ್ಷಣೆ ಬಿಟ್ಟು ಬಿಡುವುದೇ ಲೇಸು ಭಾವನೆಗಾದರು ಬೆಲೆ ಉಳಿಯುವುದು


Monday, 15 January 2018

ಆಸರೆ

ಸಣ್ಣ ಬಳ್ಳಿಗೂ ಬೇಕು ಸೂಜಿ ಮರದ ಆಸರೆ
ಯಾರ ಸಾಧನೆಗೆ ಯಾರು ಅಡ್ಡಿಯಲ್ಲ
ನಿಮ್ಮ ಮೇಲೆ ನಿಮಗೆ ನಂಬಿಕೆಯಿರಬೇಕು
ನನ್ನದೊಂದೇ ಎನ್ನುವ ಲೋಭ ತರದು ಲಾಭ

ಸಾಧನೆಯ ಹಾದಿಗೆ ಸಾಸಿವೆಯೂ ಶೃಂಗರಿಸುವುದು
ಕೊಡೆಹಿಡಿಯಲು ಬೇಕು ಆಪ್ತರು ಹುಡುಕಲೇಬೇಕು
ನಾಳೆಯ ಸಮೃದ್ಧ ಕನಸಿನ ಬೇಟೆಗಾಗಿ
ವಿಯಯೋತ್ಸವ ನಿಮ್ಮದೇ ಎಲ್ಲರ ಜೊತೆ ಇರಲು




Sunday, 14 January 2018

ಹೂ ಅಂದರೆ ಅಷ್ಟೇ ಸಾಕು

ಹೂ ಅಂದರೆ ಅಷ್ಟೇ ಸಾಕು ಬಿಟ್ಟು
ಬಿಡುವೆನು ಶೂನ್ಯ ಸುಖದ ಅಂತಸ್ತನ್ನು
ಅಲೆಮಾರಿಗಳಾಗಿ ಬದುಕಿ  ಬಿಡೋಣ
ಕೇಳುವವರುಗೂ ತಾಪತ್ರಯವಿಲ್ಲ
ಜೀವನವೇ ಜೋಕಾಲಿ ಹಗ್ಗ ಜಗ್ಗಾಟವಿಲ್ಲ
ಯಾರದ್ದು ಮೂರು ಕಾಸಿಗಾಗಿ 

ಗೊತ್ತಿಲ್ಲ ಗೊತ್ತಿಲ್ಲ

ಅತ್ಯಭೂತ ವಾಕ್ಯದ ಅಂತರಾತ್ಮವ ಸಂದಿಮೂಲೆಗೆ ಸರಿಯೋ ಆಯಾಮ
ವರ್ತಮಾನದಲ್ಲೇ ಗತಕಾಲ ಸೇರಿಸಿ ಗತಿಗೆಡಿಸಿ ಗಡಿಪಾರು ಮಾಡೋ ಉತ್ಸುಕತೆ
ಅಲ್ಪ ಅಂತರದೆಲ್ಲೆ ಬಚಾವಾಗೋ ಜಾಣ್ಮೆಯ ನಾಜೂಕು ಕೌಶಲ್ಯ
ತೆರೆಸೋ ಕಣ್ಣಿಗೆ ಪೊರೆಯ ಎಳೆದು ಸುಚಂಕದಲ್ಲೇ ನಿಲ್ಲೊಸೊ ಕಲ ಚಾತುರ್ಯತೆ 


Wednesday, 10 January 2018

ಮಲಗೆ ನನ್ನ ರಾಜಕುಮಾರಿ

ಮಲಗೆ ನನ್ನ ರಾಜಕುಮಾರಿ ಇರುಳು ಕವಿದಿಹುದು
ಹೊಸ ಸ್ವಪ್ನಗಳು ಕಾದಿವೆ ನಿನಗಾಗಿ ನಿದ್ರಿಸು ನೀದಾನವಾಗಿ
ನಿನ್ನ ಮೊಗದ ಬೆಳಕ ನೋಡಿ  ಚಂದಿರನು ಆಚೆ ಬಂದ
ಅಮಾವಾಸೆಯಲ್ಲೂ ಬೆಳಕ ಚೆಲ್ಲೋ ಚಲುವೆ ಯಾರು ಎಂದ 

Thursday, 4 January 2018

ಕೊಂದುಬಿಡು ಒಮ್ಮೆಲೆ

ಕೊಂದುಬಿಡು ಒಮ್ಮೆಲೆ ಕಾಡಬೇಡ ಹೀಗೆಲ್ಲಾ
ಭಾವನೆಗಳಿಗೂ ಬೇರುಗಳಿವೆ ಕೀಳಲಾಗದು ಒಂದೇಸಲಿಗೆ
ಮೌನವೇ ನಿರುತ್ತರವಾದರೆ ನಿಸ್ವಾರ್ಥ ನಿವೇದನೆಗೆ ಬೆಲೆ ಎಲ್ಲಿ
ಆಡಿಸೋ ಜಾಣ ನಿನ್ನದೇ ಆಟ  ಈ ಭಾವನಾಲಹರಿ ಬದುಕಲ್ಲಿ 

Wednesday, 3 January 2018

ನಾಜೂಕು ನಾರಿ

ಪರಿಶುದ್ಧ ನಗುಮೊಗದ ನಾಜೂಕು ಕನ್ಯೆ
ಮಾತಲ್ಲಿ ಪಾರಾಗೋ ಪರಿಪೂರ್ಣ ಜಾಣೆ
ಜಂಭದಲ್ಲಿ ಜಂಬೂಸವಾರಿಯನ್ನೇ ಮೀರಿಸೋ ನಾರಿ
ಮುನಿಸೋ ಮುಖವಾಡ ಮಂಕಾಗುವುದು ನಿನ್ನ ಮೊಗದ  ಛಂದಸ್ಸಿಗೆ

Monday, 1 January 2018

ಮೊದಲ ಸವಾಲು

ಹೊಸ ಸವಾಲಿಗಾಗಿ ಕಾದಿದೆ ಹೊಸ ತನವ ಹೊತ್ತ
365 ದಿನಗಳೆಂಬ ಐಷಾರಾಮಿ ಅದ್ಭುತಗಳು
ಕವಲೊಡೆಯೋ ಯಶೋಗಾದೆ ಸಮೀಪದಲ್ಲಿದೆ
ಸಾದಿಸೋ ಚಲಗಾರ  ಹೊಸ ಛಂದಸ್ಸಿನಿಂದ ಮುನ್ನಡೆಯಬೇಕಿದೆ
ಅದ್ಭುತಗಳು ನೆರವೇರುವುದು ನಿಮ್ಮ ಏಕಾಗ್ರತಾ ನಡೆಯಿಂದಾಗಿ


ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...