ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಉತ್ತಮ ಬರಹಗಾರ ನಾನಂತೂ ಅಲ್ಲವೇ ಅಲ್ಲ ಸಮಯ ಸಿಕ್ಕಾಗ ಸಿಕ್ಕಿದ್ದು ಗೀಚುವ ಉಸಾಬರಿ ನನಗೆ, ಬದುಕಿನ ಏರು ಪೇರಿನಲ್ಲಿ ಹಳೆಯ ಬೇರು ಹುಡುಕುತ ನನ್ನ ಬರವಣಿಗೆ ಸಾಲುಗಳು ಸಾಗ್ತಾ ಇವೆ......
Wednesday, 29 November 2017
Friday, 24 November 2017
ಖಾಲಿ ಹಾಳೆ
ಖಾಲಿ ಹಾಳೆಯಲ್ಲಿ ಮರೆತು ಹೋದ ಹೆಳೆಯ ನೆನಪ ಹೆಕ್ಕುತ್ತಾ
ಮೈಮರೆತು ನಕ್ಕ ದಿನಗಳ ಮೂಟೆಯ ಬಿಚ್ಚಿದಾಗ ಮನಸ್ಸಲ್ಲಿ
ಬಾನಿನ ಮೇಲೆ ತೇಲಾಡುವ ಸಂತೋಷದ ಹಕ್ಕಿ ಮರಿಯು ನಾನಾದೆ
ಮನದಲೊಂದು ಹೃದಯ ಸ್ಪರ್ಶಿ ಗೀತೆಗೆ ಮುನ್ನುಡಿ ಬರೆದೆ
ಮೈಮರೆತು ನಕ್ಕ ದಿನಗಳ ಮೂಟೆಯ ಬಿಚ್ಚಿದಾಗ ಮನಸ್ಸಲ್ಲಿ
ಬಾನಿನ ಮೇಲೆ ತೇಲಾಡುವ ಸಂತೋಷದ ಹಕ್ಕಿ ಮರಿಯು ನಾನಾದೆ
ಮನದಲೊಂದು ಹೃದಯ ಸ್ಪರ್ಶಿ ಗೀತೆಗೆ ಮುನ್ನುಡಿ ಬರೆದೆ
Friday, 17 November 2017
Wednesday, 15 November 2017
ಶೂನ್ಯ
ತಿಳಿ ಸಂತಸದ ಸಂಭ್ರಮಕ್ಕೆ ಶೂನ್ಯ ತನದ ಆಡಂಬರ ಸಾಕಲ್ಲವೇ
ಬಲಾಡ್ಯನನ್ನು ಮಣಿಸಲು ಶೂನ್ಯ ತನದ ವಿಶ್ವಾಸವೊಂದೇ ಆಯುಧವಲ್ಲವೇ
ಕೋಟಿ ಕೋಟಿ ಕಟ್ಟಿಟ್ಟರೇನು ಶೂನ್ಯ ಸುಖದ ಮುಂದೆ ಹೊತ್ತೊಯ್ಯುವರೇ
ಶೂನ್ಯ ಆಲೋಚನೆಗೆ ಕೊಡಲೇಬೇಕಿಲ್ಲ ಕಪ್ಪಾ ಕಪ್ಪೆಚಿಪ್ಪಿನಲ್ಲೂ ಸಿಗಬಹುದು ಮುತ್ತಿನ ಹರಳು
ಕತ್ತಲ ಒಳಗಿರುವವರಿಗೆ ಬೆಳಕಿನ ಚಿಂತೆ ಶೂನ್ಯದಿಂದ ಶುರುವಾದ ಪಯಣ ಶೂನ್ಯಕ್ಕೆ ಅಂತ್ಯ

Subscribe to:
Posts (Atom)
ಸಂತೆ
ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು ಸಿಹಿ ನೆನಪುಗಳು ವ್ಯಾಪಾರ ನಾನಾದೆ ವ್ಯವಹಾರ ಮಾಡದೆ ಕೊಂಡವರು ...
-
ಜಯಿಸೋ ದಾರಿ ಮುಂದೆ ನಿಂತಿದೆ ಹಿಂದೆ ನಿಂತರೆ ಹಿಂದೆ ಉಳಿವೆ ಕಂಡ ಕನಸ್ಸು ಪೂರ್ಣ ಗೊಳಿಸು ಸಾಧನೆ ಸೂರಿಗೆ ನಿನ್ನದೇ ಹಂಚು ಮರೆತು ಬಿಡು ಹಳೆಯ ಸೋಲು ನೋವು ನುಂಗಿ ...
-
ಹಸಿರಿನ ಸಿರಿಯಲ್ಲಿ ನೆನಪಾಗಿದೆ ಬಾಲ್ಯದ ಉಸಿರು ಕಣ ಕಣವು ಹಾತೊರೆಯುತ್ತಿದೆ ಬಾಲ್ಯವೇ ಬಂದು ಬಿಡು ಮಗದೊಮ್ಮೆ ಆನಂದಿಸುವೆ ಪ್ರತಿ ಕ್ಷ್ಯಣವು ನಿನ್ನೊಂದಿಗೆ ನನ್ನನ್ನೇ ಮರೆ...
-
ನೂರೆಂದು ನಂಟು ಖಾಲಿ ಜೇಬಿನ ಪ್ಯಾಂಟಿನಲ್ಲಿ ಬಗೆದಷ್ಟೂ ನೋವು ಖಾಲಿ ಜೇಬಿನ ಪ್ಯಾಂಟಿನಲ್ಲಿ ಹೊಸ ಉತ್ಸಾಹದ ಚಿಲುಮೆ ಖಾಲಿ ಜೇಬಿನ ಪ್ಯಾಂಟು ಯೋಚನೆಗೆ ಯೋಜನೆಗೆ ರಹದಾರಿ ...