Thursday, 6 August 2015

ಅಲೆಮಾರಿ ಬದುಕು

ಕ್ರಾಂತಿಕಾರಿ ಜೀವನ ಬೆಳಿಗ್ಗೆ ಆದ್ರೆ ಗಂಟೆ ಸೌಂಡ್ ಸಂಜೆ ಆದ್ರೆ ಬಾಟಲ್ ಸೌಂಡ್
ಯಾರಿಹೇಲೋಣ ನಮ್ ಟೆನ್ಶನ್ ನಿಲ್ಲಾಂಗಿಲ್ಲ ನಾನ್‌ಸೆನ್ಸ್ ಕಮ್ಯೂನಿಕೇಶನ್
ಕಾಲೇಜ್ ಹೋದ್ರು ಕಲಿತಿಲ್ಲ ಇಂಗ್ಲೀಶ್ ಆದ್ರೂ ನಡೀತಿದೆ ನಮ್ ಫ್ಯಾಶನ್
ಯರ್ರ ಬಿರ್ರಿ ಸಬ್ಜೆಕ್ಟ್ಸ್ ಎಸ್ಟು ಓದಿದ್ರೂ ಬ್ಯಾಕ್‌ಲಾಗ್ ಹೇಂಗೆ ಮಾಡೋದು ಅನ್‌ಲಾಕ್
ಕಲಿಯುಗದ ಕರ್ಮಕಾಂಡ ನಾಕಾಣೆನು ನಿಲ್ಲಾಂಗಿಲ್ಲ ನಮ್ ಜೇಬಲ್ಲಿ
ಜೇಬು ತುಂಬಾ ಏ ಟೀ ಎಮ್ ಒಂದ್ರಲ್ಲೂ ಇಲ್ಲ ಗಾಂಧಿ ನೋಟು
ಮಾರ್ಕ್ಸ್‌ಕಾರ್ಡ್ ಅಲ್ಲಿ ಮಾರ್ಕ್ಸ್ ಇಲ್ಲಾ ಇಂಟೆರ್‌ನಲ್ಸ್ ಅಂತೂ ಇಂಟ್ರೆಸ್ಟ್ ಇಲ್ಲವೇ ಇಲ್ಲಾ
ಆದ್ರೂ ಪಾಸ್ ಆಗ್ತವೆ ಮೂರೋ ನಾಲ್ಕೋ ಬಂದು ಕೊಟ್ಟೋನು ಪುಣ್ಯಾತ್ಮ ಎನ್ ನೋಡಿ ಅಂತ ಕೇಳ್ಬೇಡಿ
ಕನಸಿದೆ ಸಾಗರದಾಚೆ ನಂಗೊತ್ತಿರೋದೊಂದೆ ಸಾಗರ ಶಿವಮೊಗ್ಗ ಹತ್ರ ಅಂತ
ನಮ್ ಲೈಫ್ ಅಲ್ಲಿ ಒಂದು ಆಗಿಲ್ಲ ಕ್ರಶ್ ಅದಕ್ಕಾಗೇ ಯಾವಾಗ್ಲೂ ಆಡ್ತೀವಿ ಕ್ಯಾಂಡೀ ಕ್ರಶು
ನಮ್ ಮ್ಯಾತಮ್ಯಾಟಿಕ್ಸ್ ಸಕತ್ ವೀಕ್ ಅದಕ್ಕಾಗೆ ನಮಗೆ ಬರೋದಿಲ್ಲ ಹೆಣ್ಣೂ ಮಕ್ಕಳಿಗೆ ಹೊಡೀಯೊಕೆ ಲೈನ್
ಹೆಂಗೋ ಹೀಂಗೋ ನಡೀತಿದೆ ಲೈಫ್ ನೆಟ್ಟಗಂತೂ ಇಲ್ಲವೇ ಇಲ್ಲಾ.

ಒಂತರಾ ಜೀವನ ಕಪ್ಪು ಬಿಳುಪು ಸ್ವಲ್ಪ ಸ್ವಲ್ಪ ಕಲರ್

 ನನ್ನ ಮನಸ್ಸೆಂಬ ಮಂಟಪದಲ್ಲಿ ಎಲ್ಲೋ ನೋಡಿದ ಎಲ್ಲೋ ಕಂಡ 
ಮಾತಿನ ಬಲೆ ಹೆಣೆದು ಹೊಂಚಾಕುತ್ತಿರುವ ಉಗ್ರಗಾಮಿ ನಾನು
ಸಮಯ ಸರಿದೂಗಿಸುವ ಕಾಲ ಪ್ರಳಯಾನನ್ನು ಸರಿದೂಗಿಸುವುದೇ ನನಗೆ ಯೋಚನೆ
ಮೂರಿಂಚಿನ ಜೀವನದಲ್ಲಿ ನೂರಾರು ಕನಸುಗಳೊಂದಿಗೆ ಓಡಾಡುವ ಜಿಂಕೆಯನ್ನು ಹತ್ತಿ
ಎತ್ತ ಕಡೆ ಎಂದು ಆಲೋಚಿಸುತ್ತಿರುವೆ ಆದರೂ ಹತ್ತಿ ಕೂತಿರುವೆ
ಬಾಳ ಬುಗುರಿಯ ದೂರದ ತುದಿಯು ಎಲ್ಲಿ ಕೊನೆಗಾಣುವುದೋ
ಒಂದು ತಿಳಿಯದ ನನಗೆ ಏಕಾಂತವು ನಾನು ಯಾರೆಂದು ತಿಳಿಸುವುದು
ಆದರೂ ಏನೋ ಗಾಂಬಿರ್ಯದಿಂದ ನನ್ನನ್ನೇ ನೋಡಿ ನಗುತಲಿರುವೆ
ಆದರೂ ಗುದ್ದಾಟದ ಜೀವನದಲ್ಲಿ ಮೂರ್ಕಾಸಿನ ಕುಶಿ ಎಂದೆಂದೂ ಇದೆ.

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...