Friday, 22 January 2016

ಸಮಯವೇ ಹೇಳಿಬಿಡು ನೀ ಜೊತೆ ಇರುವೆಯಾ ಎಂದೆಂದಿಗೂ

ಸಮಯವೇ ಹೇಳಿಬಿಡು ನೀ ಜೊತೆ ಇರುವೆಯಾ ಎಂದೆಂದಿಗೂ
ನನ್ನ ಬಾಳಿನ ಪಗಡೆಯಲ್ಲಿ ನಿನ್ನದೇ ಕಾಯ್ನ್ಗಳು
ತಿರುಗಿ ತಿರುಗಿ ತೆರಳಿದರು ನಿನ್ನ ಕಡೆಗೆ ಸಾಗುತಿಲ್ಲ 
ಏರು ಪೆರು ದಾರಿಯಲ್ಲಿ ಸದ್ದು ಮಾಡದೆ ಸೊನ್ನೆ ಸುತ್ತಿದೆ 

ಎದ್ದು ಬಿದ್ದು ಓಡುತ್ತಿರುವ ನಿನ್ನ ಜೊತೆಗೆ ನನ್ನ ಕರೆದೊಯ್ಯದೆ ಮರೆತ್ತಿರುವೆ
ಒಂದೆಡೆ ತಟಸ್ತವಾಗಿ ನಾನಿರುವೆ ನಿನ್ನ ನೆರಳನ್ನಾದ್ರೂ  ಬೀರಬಾರದೆ 
ನಿನ್ನ ಜೊತೆ ಸಾಗಿದರೆ ಬಾಳಿಗೆ ಒಳಿತು ಎಲ್ಲಾದರೆ ನಾವಲ್ಲೇ ಇರುವೆವು
ಬಡಿದ್ದೆಬ್ಬಿಸು ನನ್ನನ್ನು ನೀ ಮುನ್ನುಗ್ಗುವ ಮುನ್ನ ನನ್ನನ್ನು ಮುನ್ನಡೆಸು

ಒಂದೆಡೆ ಪಥದಲ್ಲಿ ಸಾಗಲು ನಿನ್ನ ಶ್ರೀ ರಕ್ಷೆ ಎಂದೆಂದೂ ಇರಲಿ ನನಗೆ
ನನ್ನ ಬಾಳು ಹಸನಾಗುವುದು  ನಿನ್ನ ಪಯಣದ ಜೊತೆಗೆ
ಎತ್ತರೆತ್ತರದ ತುದಿಗೆ ಮುಟ್ಟುವುದು ನೀ ನನ್ನ ಜೊತೆಗೆ ಸಾಗಲು

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...