Friday, 22 January 2016

ಅಡ್ಡ ದಿಡ್ಡಿ ಪಯಣ

ಹೇಳಲು ಹೊರಟಿರುವೆ ಮುಚ್ಚು ಮರೆ ಇಲ್ಲದೆ ಮಡಚ್ಚಿಟ್ಟ ಬಾಳ ಜೋಳಿಗೆಯ ಒಳಗಿಂದ
ಗುಂಪಿಗೆ ಸೇರಿದ ಪದವೋ ಸೇರದ್ದೋ ಹೇಳಹೊರಟಿರುವೆ ಇರುವಿಕೆಗಾಗಿ ಬರಹದೊಲ್ಲೊ೦ದು ಉತ್ತರ
ಸಮೀಪವಿದ್ದರೂ ದೂರ ಕಾಣುವಂತ ಮನಸ್ಸಿನ ನಾಗಾಲೋಟದ ಮನಸ್ತಿತಿ ಏರುಪೇರು ದೋಣಿಯಲ್ಲಿ ಎತ್ತರೆತ್ತರದ
ಅಲೆಗೆ ಹೆದರಿ ಮೊದಲೇ ತಿಣುಕಾಡುತ್ತಿರುವ ಮನಸ್ತಿತಿ ಹಿಂದು ಮುಂದು ಹೋಗದೆ ವಾಯುಬಾರ ಕುಸಿಯ ಕಂಡ ವಾತಾವರಣದ
ಬದಲಾವಣೆಗೆ ನಮ್ಮನ್ನು ಸೇರಿಸಿಕೊಂಡು ಮುನ್ಸೂಚನೆಗಾಗಿ ಕಾಯುತ್ತಿದ್ದೇವೆ
ಫೋಟೋ ಕ್ಲಿಕ್ಕಿಸುವಾಗ ಸೆಲ್ಫಿ ಬೇಕು ಜೀವನ ನಡೆಸುವಾಗಲೂ ತುಂಬಾ ಸೆಲ್ಫಿಯಾಗಿ ಬದಲಾಗಿದ್ದೇವೆ ಹುಟ್ಟಿ ಬೆಳೆದ ವಾತಾವರಣದ ವಿರುದ್ದವಾಗಿ
ಅಡ್ಡಾದಿಡ್ಡಿಯಾಗಿ ಪರಿವರ್ತನೆ ಆಗಿದ್ದೇವೆ. ನಮ್ಮೊಳಗೆ ನಾವೋ ಬೇರೆಯವರೋ ನಡೆಸುತ್ತಿದರೋ ಅಥವಾ ಬದಲಾವಣೆಯ ಹಿಂದೆ ಹೋಗುತ್ತಿದೇವೋ ಒಂದನ್ನು ಗೊತ್ತಿಲ್ಲದೆ ಮುನ್ನುಗ್ಗುತಿದ್ದೇವೆ.
ದೂರದ ದಾರಿಗೆ ಮುನ್ನುಗ್ಗುತ್ತಿದ್ದೇವೆ ಹತ್ತಿರವಿರುವ ಎಲ್ಲವನ್ನೂ ಬಿಟ್ಟು ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತಿಗೆ ನೇರವಾಗಿ ನಮ್ಮನ್ನೇ ಉದಾಹರಣೆ ಕೊಡಬಹುದು .
ಬಿಡುವಿಲ್ಲದ ಕೆಲಸ ಒತ್ತಡದ ಬದುಕು ಕೊನೆಗೊಂದು ದಿನ ಬಿಡುವಿದ್ದರು ಸಂಬಂದಗಳು ಬಿಡಿಸಿಕೊಂಡಿರುತ್ತವೆ
ಬದುಕಲು ಬದಲಾವಣೆ ಮುಖ್ಯ ಬದಲಾವಣೆಯೇ ಬದುಕಲ್ಲ ತಾನೇ ಬೇಕಾಗಿರುವುದಕ್ಕೆ ಬದಲಾವಣೆ ಅಗತ್ಯ ಎಲ್ಲಾದಕ್ಕೂ ಅಲ್ಲಾ.

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...