Thursday, 15 October 2015

ಹೊಸಕಿರಣ


ಹೊಸತನದ ನಗು ಹಳೆತನದ ನೆಮ್ಮದಿ ನಂಬಿಕೆ ಬೇಕಾಗಿದೆ
ತಾತ್ಕಾಲಿಕ ಸಂಬಂದಗಳಿಗೆ ಜೋತು ಬಿಟ್ಟು ಜೀವನ ಬೆಂಡಾಗಿದೆ
ಯಾವ ಪ್ರಾಣಿಗಳಲ್ಲೂ ಕಾಣದ ಹೊಸತನ ನಮ್ಮಲೆಕಿದೆ
ಹೊಸತನದ ಹುಚ್ಚಿನಲ್ಲಿ ನೆಮ್ಮದಿನ ನಗು ಮಾಯವಾಗಿದೆ
ಹೊಸತನ ಯಾರಿಗೋಸ್ಕರ ಸಮಾಜದ ಬದಲಾವಣೆಗಾ
ಇಲ್ಲಾ ನಮ್ಮನ್ನೇ ಪ್ರತಿಬಿಂಬಿಸಿಕೊಳ್ಳುವುದಕ್ಕೋ ಇದರಿಂದ
ಸಿಗುವುದು ಏಕಪಾತ್ರಬಿನಯ ಹೊರತೆ ಇನ್ನಾವುದೂ ಅಲ್ಲ
ಪರಿಶುದ್ದ ಬದುಕಿಗೆ ನೆಮ್ಮದಿಯೊಂದೇ ಸಾಲದೆ
ಮತ್ತೊಂದು ಬೇಕೆಂದರೆ ನಗುವೊಂದೇ ಉತ್ತರ

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...