Tuesday, 16 February 2016

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ
ನಿತ್ಯವೂ ಅದೇ ಬೆಳಕಿನಿಂದ ಕತ್ತಲೆಯ ತನಕ
ಪ್ರಪಂಚವೇ ನಮ್ಮೆದುರು ನಿಂತಿದೆ
ನಾವು ಅದರೆದುರು ನಿಲ್ಲುವುದು ಕ್ಷಣಿಕ

Friday, 12 February 2016

ನವಿಲುಗರಿ

ನವಿಲುಗರಿ ನಿನ್ನ ಬಣ್ಣಗಳ ಲೋಕಕ್ಕೆ ನನ್ನನ್ನು ಎಂದು ಕರೆದ್ದೋಯ್ಯುವೆ
ನವಿಲುಗರಿ ನಿನ್ನ ಅಂದ ಚಂದಕ್ಕೆ  ಕಾರಣರಾರು ಬಣ್ಣಗಳೇ
ಬಣ್ಣಗಳೇ ಮಾಸದ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವೆಯಾ
ಬಣ್ಣಗಳ ಲೋಕದಲ್ಲಿ ನಿನ್ನದೊಂದೇ ಹೆಸರು ಬಣ್ಣದಲಂಕಾರ
ಸದಾ ಮಿನುಗುವ ನಿನ್ನ ವೈಯ್ಯರಕ್ಕೆ ಯಾರು ಸರಿಸಾಟಿ
ನವಿಲುಗರಿ ನಿನ್ನ ರೆಕ್ಕಿ ಬಿಚ್ಚಿ ಕುಣಿಯಲು ಶುರುಮಾಡು
ನಿನ್ನ ನಾಟ್ಯಕ್ಕೆ ಕಾನನವೇ ಸ್ತಬ್ಡವಾಗಲಿ 

Tuesday, 9 February 2016

ನೀ ಬಿಟ್ಟರೆ ಯಾರಿಲ್ಲ ನನ್ನ ಜೀವನದ ಜೋಕಾಲಿಗೆ

ನೀ ಬಿಟ್ಟರೆ ಯಾರಿಲ್ಲ ನನ್ನ ಜೀವನದ ಜೋಕಾಲಿಗೆ
ಜೋಪಾನವಾಗಿಡುವೆ ಎಂದೆಂದೂ ನಿನ್ನ ನನ್ನ ಬಾಲ ಜೋಳಿಗೆಯಲ್ಲಿ
ಹೊಸ ತನದ ಗಾಳಿಗೂ ಹಳೇ ತನದ ಮೌನಕ್ಕೂ ಸಮ್ಮತಿ ಸೂಚಿಸುವೆ
ಪಯಣದ ಕೊನೆಗೂ ನಿನ್ನೊಟ್ಟಿಗಿರುವೆ ನನ್ನುಸಿರು ನಿಲ್ಲುವ ತನಕ

ಸುಡು ಬಿಸಿಲು

ಸುಡುವ ಬಿಸಿಲಿನ ಜಳಕ್ಕಾದರೂ ಮೈಯೊಡ್ಡಿ ನಿಲ್ಲಬಹುದು
ಸುಡುವ ಮನಸ್ಸುಗಳ ಮದ್ಯ ನಿಲ್ಲಲಾಗುವುದಿಲ್ಲ
ಏಕಾಂತವೇ ತಂಪಾಗಿರುವುದು ಸುಡುವ ಮನುಷ್ಯರಿಗಿಂತ

Friday, 22 January 2016

ಸಮಯವೇ ಹೇಳಿಬಿಡು ನೀ ಜೊತೆ ಇರುವೆಯಾ ಎಂದೆಂದಿಗೂ

ಸಮಯವೇ ಹೇಳಿಬಿಡು ನೀ ಜೊತೆ ಇರುವೆಯಾ ಎಂದೆಂದಿಗೂ
ನನ್ನ ಬಾಳಿನ ಪಗಡೆಯಲ್ಲಿ ನಿನ್ನದೇ ಕಾಯ್ನ್ಗಳು
ತಿರುಗಿ ತಿರುಗಿ ತೆರಳಿದರು ನಿನ್ನ ಕಡೆಗೆ ಸಾಗುತಿಲ್ಲ 
ಏರು ಪೆರು ದಾರಿಯಲ್ಲಿ ಸದ್ದು ಮಾಡದೆ ಸೊನ್ನೆ ಸುತ್ತಿದೆ 

ಎದ್ದು ಬಿದ್ದು ಓಡುತ್ತಿರುವ ನಿನ್ನ ಜೊತೆಗೆ ನನ್ನ ಕರೆದೊಯ್ಯದೆ ಮರೆತ್ತಿರುವೆ
ಒಂದೆಡೆ ತಟಸ್ತವಾಗಿ ನಾನಿರುವೆ ನಿನ್ನ ನೆರಳನ್ನಾದ್ರೂ  ಬೀರಬಾರದೆ 
ನಿನ್ನ ಜೊತೆ ಸಾಗಿದರೆ ಬಾಳಿಗೆ ಒಳಿತು ಎಲ್ಲಾದರೆ ನಾವಲ್ಲೇ ಇರುವೆವು
ಬಡಿದ್ದೆಬ್ಬಿಸು ನನ್ನನ್ನು ನೀ ಮುನ್ನುಗ್ಗುವ ಮುನ್ನ ನನ್ನನ್ನು ಮುನ್ನಡೆಸು

ಒಂದೆಡೆ ಪಥದಲ್ಲಿ ಸಾಗಲು ನಿನ್ನ ಶ್ರೀ ರಕ್ಷೆ ಎಂದೆಂದೂ ಇರಲಿ ನನಗೆ
ನನ್ನ ಬಾಳು ಹಸನಾಗುವುದು  ನಿನ್ನ ಪಯಣದ ಜೊತೆಗೆ
ಎತ್ತರೆತ್ತರದ ತುದಿಗೆ ಮುಟ್ಟುವುದು ನೀ ನನ್ನ ಜೊತೆಗೆ ಸಾಗಲು

ಕನಸೇ ನನ್ನ ಕನಸೇ

ಕನಸೇ ನನ್ನ ಕನಸೇ ಇಬ್ಬನಿ ದಾರಿಯಲ್ಲಿ ಮುನ್ನುಗ್ಗುತ್ತಿರುವ ಕನಸೇ
ಬಾಳ  ಬಂಡಿಯಲ್ಲಿ  ಹೊಸದೊಂದು ಪ್ರತಿಬಿಂಬ ಕೊಟ್ಟ ಕನಸೇ
ಹಸಿರೆಲೆಯ ಶೃಂಗಾರದಲ್ಲಿ ಹೊಸನಗೆಯ ಬಣ್ಣ ಕೊಟ್ಟ ಕನಸೇ
ಏರುಪೇರು ತಗ್ಗಿನಲ್ಲಿ ಮುನ್ನುಗ್ಗಲು ಪ್ರೇರೇಪಿಸಿದ ಕನಸೇ

ಕನಸೇ ನನ್ನ ಕನಸೇ ಮರೀಚಿಕೆಯಾಗದೆ ಎಂದೆಂದಿಗೂ ನೀ ನನ್ನ ಜೊತೆ ಇರು
ಸೋತಾಗಲು ಜೊತೆ ಇದ್ದ ಕನಸೇ ಗೆದ್ದಗಳು ಜೊತೆ ಸಾಗಿದ ಕನಸೇ
ಕಣ್ಣಲ್ಲಿ ಎಂದೆಂದೂ ಇರುವ ಕನಸೇ ಮರಳಿ ಮರಳಿ ಬರುತ್ತಿರು
ಕಾರ್ಮೋಡದ ಕರಿಚಾಯೆಯನ್ನು ಸರಿದೂಡಿ ನನ್ನ್ನೊಟ್ಟಿಗೆ ಬರುತ್ತಿರುವ ಕನಸೇ

ಕನಸೇ ನನ್ನ ಕನಸೇ ನೆನಪಾಗುವೆ ನೆನಪಾಗುವೆ ನಿನ್ನ ನೆಪದಲ್ಲೇ  ನಾ ಸಾಗುತ್ತಿರುವೆ
ಆಕಾಶಕ್ಕೆ ಚಪ್ಪರ ಹಾಕುವೆ ನೀ ನನ್ನ ಬೆನ್ನ ಹಿಂದೆ ಬರುತ್ತಿರಲು
ಮರುಬೂಮಿಯಲ್ಲೂ ಮನೆಯ ಮಾಡುವೆ ನೀ ನನ್ನ ಹುರಿದೂಂಬಿಸಲು
ಸಾಗರದ ಅಲೆಗೂ ಮೈ ಚಾಚಿ ನಿಲ್ಲುವೆ ನಿನ್ನಲೆಯು ನನ್ನೊಟ್ಟಿಗಿರಲು

ಕನಸೇ ನನ್ನ ಕನಸೇ ಎಂದೆಂದಿಗೂ ಮರಳಿ ಮರಳಿ ಬರುತ್ತಿರು
ಕನಸೇ ನನ್ನ ಕನಸೇ ಎಂದೆಂದಿಗೂ ನೀ ನನ್ನ ಜೊತೆ ಇರು
ಕನಸೇ ನನ್ನ ಕನಸೇ ಎಂದೆದಿಗು ನನ್ನ ಬಾಳ ಜೋಳಿಗೆಯಲ್ಲಿರು
ಕನಸೇ ನನ್ನ ಕನಸೇ ಎಂದೆಂದಿಗೂ ನಿನ್ನಲೆಯು ನನ್ನೊಂದಿಗಿರಲಿ

ಅಡ್ಡ ದಿಡ್ಡಿ ಪಯಣ

ಹೇಳಲು ಹೊರಟಿರುವೆ ಮುಚ್ಚು ಮರೆ ಇಲ್ಲದೆ ಮಡಚ್ಚಿಟ್ಟ ಬಾಳ ಜೋಳಿಗೆಯ ಒಳಗಿಂದ
ಗುಂಪಿಗೆ ಸೇರಿದ ಪದವೋ ಸೇರದ್ದೋ ಹೇಳಹೊರಟಿರುವೆ ಇರುವಿಕೆಗಾಗಿ ಬರಹದೊಲ್ಲೊ೦ದು ಉತ್ತರ
ಸಮೀಪವಿದ್ದರೂ ದೂರ ಕಾಣುವಂತ ಮನಸ್ಸಿನ ನಾಗಾಲೋಟದ ಮನಸ್ತಿತಿ ಏರುಪೇರು ದೋಣಿಯಲ್ಲಿ ಎತ್ತರೆತ್ತರದ
ಅಲೆಗೆ ಹೆದರಿ ಮೊದಲೇ ತಿಣುಕಾಡುತ್ತಿರುವ ಮನಸ್ತಿತಿ ಹಿಂದು ಮುಂದು ಹೋಗದೆ ವಾಯುಬಾರ ಕುಸಿಯ ಕಂಡ ವಾತಾವರಣದ
ಬದಲಾವಣೆಗೆ ನಮ್ಮನ್ನು ಸೇರಿಸಿಕೊಂಡು ಮುನ್ಸೂಚನೆಗಾಗಿ ಕಾಯುತ್ತಿದ್ದೇವೆ
ಫೋಟೋ ಕ್ಲಿಕ್ಕಿಸುವಾಗ ಸೆಲ್ಫಿ ಬೇಕು ಜೀವನ ನಡೆಸುವಾಗಲೂ ತುಂಬಾ ಸೆಲ್ಫಿಯಾಗಿ ಬದಲಾಗಿದ್ದೇವೆ ಹುಟ್ಟಿ ಬೆಳೆದ ವಾತಾವರಣದ ವಿರುದ್ದವಾಗಿ
ಅಡ್ಡಾದಿಡ್ಡಿಯಾಗಿ ಪರಿವರ್ತನೆ ಆಗಿದ್ದೇವೆ. ನಮ್ಮೊಳಗೆ ನಾವೋ ಬೇರೆಯವರೋ ನಡೆಸುತ್ತಿದರೋ ಅಥವಾ ಬದಲಾವಣೆಯ ಹಿಂದೆ ಹೋಗುತ್ತಿದೇವೋ ಒಂದನ್ನು ಗೊತ್ತಿಲ್ಲದೆ ಮುನ್ನುಗ್ಗುತಿದ್ದೇವೆ.
ದೂರದ ದಾರಿಗೆ ಮುನ್ನುಗ್ಗುತ್ತಿದ್ದೇವೆ ಹತ್ತಿರವಿರುವ ಎಲ್ಲವನ್ನೂ ಬಿಟ್ಟು ದೂರದ ಬೆಟ್ಟ ನುಣ್ಣಗೆ ಅನ್ನೋ ಮಾತಿಗೆ ನೇರವಾಗಿ ನಮ್ಮನ್ನೇ ಉದಾಹರಣೆ ಕೊಡಬಹುದು .
ಬಿಡುವಿಲ್ಲದ ಕೆಲಸ ಒತ್ತಡದ ಬದುಕು ಕೊನೆಗೊಂದು ದಿನ ಬಿಡುವಿದ್ದರು ಸಂಬಂದಗಳು ಬಿಡಿಸಿಕೊಂಡಿರುತ್ತವೆ
ಬದುಕಲು ಬದಲಾವಣೆ ಮುಖ್ಯ ಬದಲಾವಣೆಯೇ ಬದುಕಲ್ಲ ತಾನೇ ಬೇಕಾಗಿರುವುದಕ್ಕೆ ಬದಲಾವಣೆ ಅಗತ್ಯ ಎಲ್ಲಾದಕ್ಕೂ ಅಲ್ಲಾ.

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...