ನಿಸ್ಕಲ್ಮಶ ಈ ಪ್ರೀತಿಯ ಕೂಗು
ಮನದಾಳಕೆ ಇಳಿದಿದೆ ಕಾಣದ ನೋವು
ಎಂದೆಂದೂ ಸಿಗದ ಉತ್ತರದ ಮಾತು
ದೂರಕೆ ಸಾಗಿದೆ ಕನಸಿನ ತೇರು
ಮನದಾಳಕೆ ಇಳಿದಿದೆ ಕಾಣದ ನೋವು
ಎಂದೆಂದೂ ಸಿಗದ ಉತ್ತರದ ಮಾತು
ದೂರಕೆ ಸಾಗಿದೆ ಕನಸಿನ ತೇರು
ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಉತ್ತಮ ಬರಹಗಾರ ನಾನಂತೂ ಅಲ್ಲವೇ ಅಲ್ಲ ಸಮಯ ಸಿಕ್ಕಾಗ ಸಿಕ್ಕಿದ್ದು ಗೀಚುವ ಉಸಾಬರಿ ನನಗೆ, ಬದುಕಿನ ಏರು ಪೇರಿನಲ್ಲಿ ಹಳೆಯ ಬೇರು ಹುಡುಕುತ ನನ್ನ ಬರವಣಿಗೆ ಸಾಲುಗಳು ಸಾಗ್ತಾ ಇವೆ......
ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು ಸಿಹಿ ನೆನಪುಗಳು ವ್ಯಾಪಾರ ನಾನಾದೆ ವ್ಯವಹಾರ ಮಾಡದೆ ಕೊಂಡವರು ...