Saturday, 30 December 2017

ಒಗ್ಗರಣೆ

ಒಗ್ಗರಣೆ ಬೇಕು ಮಾತಿನ ಚಕಮಕಿಗೆ
ಕೆಲವೊಮ್ಮೆ ಹಾಸ್ಯವಾಗಿ ಕೆಲವೊಮ್ಮೆ
ಮಾತಿನ ಗಮ್ಮತಿಗೆ ಎಣ್ಣೆ ಸುರಿಯುವ ಹಾಗೆ
ಸಣ್ಣ ನಗುವಿನ ಗುಳಿಗೆ ಮನಸ್ಸಿಗೆ ತಾತ್ಕಾಲಿಕ ಚಿಕಿತ್ಸೆ

ಕೆಲವರದ್ದು ಮಾತಿನ ಒಗ್ಗರಣೆ ಉತ್ಸಾಹದ ಚೆಲುವೆ
ಕೆಲವರದ್ದು ಗಾಯದ ಮೇಲೆ ಉಪ್ಪು ಸುರಿಯುವ ಹಾಗೆ
ಕೆಲವರದ್ದು ಮುನ್ಸೂಚನೆಯ ಕೇಂದ್ರ  ಬಿಂದು
ಕೆಲವರದ್ದು ಟೊಂಕ ಕಟ್ಟಿ ಜಗಳಕ್ಕೆ ನಿಲ್ಲುವ ಯಮ ನುಡಿ
ಒಗ್ಗರಣೆ ಬೇಕು ಮಿತಿ ಇದ್ದರೆ ಅಮೃತ ಅತಿ ಆದರೆ ಆಪತ್ತು


Friday, 29 December 2017

ಕಣ್ಣ ಸನ್ನೆಯಲ್ಲೇ

ಕಣ್ಣ ಸನ್ನೆಯಲ್ಲೇ ಮಾತಾಡಿದಳು ಮೌನ ಗೌರಿ
ಮನದ ಭಾವನಾ ಲಹರಿಯ ಬಿಚ್ಚಿಟ್ಟಳು ಕಣ್ಣ ರೆಪ್ಪೆಯಲ್ಲಿ
ನಾಚಿಕೆಯ ಕಡಲಿನಲ್ಲಿ ಮುಳುಗಿ ಅವಳ ಮೂಗುತಿಯೊಂದೇ ಮಾತಾಡುತಿತ್ತು
ಕಾಲುಬೆರಳುಗಳು  ಚಕ್ರವ್ಯೂಹವ ರೂಪಿಸಿತ್ತು ಕಾಲ್ಚೈನು
ಒಂದೇ ಸಮನೆ ಮಾತಾಡುತಿತ್ತು ಮೌನ ಮುರಿಯದೆ


Wednesday, 27 December 2017

ಅಹಂಕಾರ

ಹಸಿರಿನ ತೋಟಕ್ಕೆ ಬರೆ ಎಳೆಯುವ
ದುಸ್ಸಾಹಸ ಯಾಕೆ ಎಂಟಾಣೆ ಬದುಕಲ್ಲಿ
ಕಾದಿದೆ ಎಲ್ಲರಿಗೂ ಸಾದಿಸೋ ದಾರಿ
ನಿಮ್ಮ ಜಯದ  ಕೊರಳು ಉರುಳಾಗದಿರಲಿ
ಖುಷಿಯ ಕೊಡೊ ಅಕ್ಷಯ ಪಾತ್ರೇಯಾಗಲಿ

ಅಹಂಕಾರ ಬೇರೆಯವರ ಆಹಾರ
ದೋಚದಿರಲಿ ಮುನ್ನಡೆಸೋ ಗುಣವೊಂದೇ
ದಕ್ಕಿಸುವುದು ನಿಮ್ಮ ಕೈ  ಸೇರೋ ಆಭರಣ
ಅಡ್ಡಿ ಪಡಿಸೋ ಜನರಿಗೆ ಕಾದಿದೆ
ಅಡ್ಡಾದಿಡ್ಡಿ ಏರುಪೇರು ಅಂತ್ಯ 



ಆರಂಭ

ನನ್ನ ಆರಂಭ ಶತ ವೇಗದ ಆರಂಭ ಎಂದೂ
ಹಿಂದೆ ತಿರುಗದೆ ಜಯದ ನಾಗಾಲೋಟ ಮುಟ್ಟುವ ತನಕ
ವೈರಿಯೂ ಕೂಡ ನೆರಳು ಮುಟ್ಟದಂತ ಮುನ್ನುಗ್ಗುವ ವೇಗ
ಇತಿಹಾಸವ ಸೃಷ್ಟಿಯೋ ಹೊಸ ಕನಸಿನ ಆರಂಭ
 
ಆರಂಭ ಹೊಸ ಕನಸಿನ ಬೇಟೆಯ ಕಂಗೆಡಿಯೋ ಆಯುಧವಾಗಲಿ
ಆರಂಭ ಹೊಸ ಅನ್ವೇಷಣೆಗೆ ಅಡಿಪಾಯವಾಗಲಿ 
ಆರಂಭ ಹೊಸ ಸಮಾಜದ ನಾಂದಿಯಾ ಸಂಕೇತವಾಗಲಿ
ಆರಂಭದ ಉತ್ತರವೂ ನೀನೆ  ಕೊನೆ ಮುಟ್ಟೋಸೋ ಅಂಬಿಗನು ನೀನೆ

ಸೋಲನ್ನೇ ಸೋಲಿಸೋ ಸರದಾರನಾಗಿ ಮುನ್ನುಗ್ಗು ಗೆಲುವು ನಿನ್ನದೇ 
ನಿನ್ನದೇ ಅಧಿಪತ್ಯ ನಿನ್ನ ನಾಗಾಲೋಟದ ವೇಗಕ್ಕೆ 
ಜಯವು  ನಿನ್ನದೇ ನಿನ್ನ ಅನನ್ಯ  ಪಥದಲ್ಲಿ  ಸಾಗುತ್ತಿರಲು 
ಹೆಳೆಯ ಸೋಲುಗಳನೆಲ್ಲಾ ಮುಚ್ಚಿ ಹೊಸ ದಿಗಂತಕ್ಕೆ ಮುನ್ನುಗ್ಗುವ ಆರಂಭ



ಕುಸುಮದ ಹಾದಿ

ಸಾಸಿವೆಯ ಹಾದಿ ಹಿಡಿದು ಉತ್ತಮ ಮಾರ್ಗ ಸೇರುವ
ಮೂರಂಕಿಯ ಜೀವನಕ್ಕೆ ಬೇಕು  ಪ್ರಶ್ನಾತೀತ ಪ್ರಾರಂಭ
ಇತಿಹಾಸದ ಪುಟ ಸೇರಲು ದೂರವಾಗಬೇಕು ನಕಾರಾತ್ಮಕ
ಚಿಂತನೆಗಳ ಕಣಜ ಸೇರಿಸುವ ವಿಷ ಜಂತುಗಳ ಸುಳಿಯಿಂದ


Tuesday, 26 December 2017

ತಟಸ್ಥ

ಪ್ರಪಂಚವೇ ಸಾಗರವಾಗಿ ಅಲೆಗಳೇ
ಹುಲಿಗಳಾಗಿ ನಮ್ಮೆನ್ನೆಲ್ಲ ಸೆಳೆದರೆ
ಎಲ್ಲಿಗೆ ಓಡಿ ಹೋಗುವುದು
ಅಲೆಗಳ ನಡುವೆ ನಿಲ್ಲುವ ಊರಾವುದಿದೆ


ಬದುಕಿನ ಅಲೆ

ಬದುಕ ತೇರಿಗೆ ಸುಖ ದುಃಖಗಳೇ  ಅಲೆ
ಮುಖದ ಕನ್ನಡಿಗೆ ನಗುವನ್ನೋ ಅಲೆ
ಕಾಣದ ನೋವಿಗೆ ಕಣ್ಣೀರಿನ ಅಲೆ
ಸಾಧನೆಯ ಹಾದಿಗೆ ಯಶಸ್ಸಿನ ಅಲೆ

ಬಣ್ಣದ ಕಲ್ಪನೆಗೆ ಭಾವನೆಯೇ ಅಲೆ
ಸೂಜಿ ಹಂಬಲದ ಶಕ್ತಿಗೆ ಮನೋಬಲವೇ ಅಲೆ
ಬಂದಿಯಾದ ಮನಸ್ಸಿಗೆ ಪ್ರೀತಿಯೇ ಅಲೆ
ಹೃದಯಗಳ ಬೆಸುಗೆಗೆ ನಂಬಿಕೆಯೇ ಅಲೆ







ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...