Thursday, 26 April 2018

ಕನಸುಗಳ ತುದಿ

ತುತ್ತ ತುದಿಯಲ್ಲಿವೆ ಕನಸುಗಳು
ತುಂಡು ಮಾಡುವುದು ಏತಕೆ
ಮನಸ  ಕೋಟೆಗೆ  ಭಾವನೆಯ
ಬಣ್ಣಗಳ  ಹಚ್ಚಿ ಕಟ್ಟಿಹೆನು
ಕನಸಲ್ಲೂ ಕೆಡುವುದ ಮರೆತುಬಿಡು

ಜಾರಲು ಬಿಡದಿರು ಇರುವುದುಒಂದೇ
ಹೃದಯ ಅದು ನಿನಗೆ ಕೊಟ್ಟಾಗಿದೆ
ತೀರಕ್ಕೆ ಸೇರಿವೆ ಕನಸುಗಳ ಜಾತ್ರೆ
ಮರಳಿ ಗೂಡಿಗೆ ಸೇರವು ನಿನ್ನ ಬಾವನ
ಲೋಕದಲ್ಲಿ ನಿಷ್ಚಿಂತವಾಗಿ ನಿದ್ರಿಸುತ್ತಿವೆ


ಪ್ರೀತಿ ನಿರಂತರ

ನಿರಂತರ ಈ ಪ್ರೀತಿ ನೆರವೇರಿಸೋ
ಕನಸುಗಳ ಹೊತ್ತ ಪ್ರೀತಿಯ ಪಲ್ಲಕ್ಕಿ
ಕಾಣದ ಹೃದಯದ ಬೆಸುಗೆಯ ಬಿಂಬಿಸೋ
ಆಶಾಕಿರಣಗಳ ಹೊತ್ತ ಭಾವನೆಗಳ ಮುಂಬತ್ತಿ 

ಬಿಟ್ಟೋಗೋ ದಾರೀಲಿ ನದಿಯೊಂದು ಮೂಡಿದೆ

ಬಿಟ್ಟೋಗೋ ದಾರೀಲಿ ನದಿಯೊಂದು 
ಮೂಡಿದೆ ಕಣ್ಣೀರ ಕಥೆಗೆ ಬದುಕಿನ
ಏರಿಳಿತ ನೋವಿನ ಮಳೆಯಲ್ಲಿ
ಮಿಂದೆದ್ದು ಅಂತ್ಯದ ದಿಕ್ಕಿಗೆ ಹೊರಟಿದೆ

ಇಷ್ಟೆಲ್ಲ ಅದ್ಮೇಲೂ ಸುಮ್ನಿರು ಅಂದ್ರೆ
ಮನಸಲ್ಲಿ ಸುನಾಮಿ ಆಗೋದು ಪಕ್ಕನೆ
ಕೊನೆ ತನಕ ಜೊತೆ ಇರ್ತೀನಿ ಅಂದೋರು
ಕಣ್ಣೀರನ್ನೇ ಜೊತೆ ಮಾಡಿ ಹೋಗ್ಬಾರ್ದು

Monday, 23 April 2018

ಒಂಚೂರು ಕೋಪಿಷ್ಠೆ

ಒಂಚೂರು ಕೋಪಿಷ್ಠೆ ನನ್ ಹುಡುಗಿ
ನಗು ನಗ್ತಾನೇ ಅಳ್ತಾಳೆ ರೀಸನ್ ಇಲ್ದೇನೆ
ಸಮಾಧಾನ ಮಾಡೋದ್ರಲ್ಲೇ ಕಳೆದು
ಹೋಯ್ತು ರೀ ನನ್ನ ಈ ಅರ್ಧ ಆಯಸ್ಸು

ಸಡನ್ ಆಗಿ ಚೇಂಜ್ ಆಗ್ತಾಳೆ ಹೇಳ್ದೆ ಕೆಳ್ದೆನೆ
ಬಿಪಿ ರೋಗಾನು  ಶುರು ಆಗಿ ಬಿಟ್ಟಿದೆ
ಇವಳು ಕೊಡೊ ಟೆನ್ಶನ್ ಗೆ ಏನ್ ಮಾಡೋದು
ಹೇಳಿ ಮನಸಲ್ಲಿ ಇವಳೊಬ್ಬಳೇ ಸೆಟ್ಟ್ಲಾಗಿ ಬಿಟೌಳೆ


ಬಾಲ್ಯದ ಬಿಡಾರ

ಬಾಲ್ಯದ ಓಟ ಖುಷಿಯ ಚಪ್ಪರದತ್ತ
ಇಂದಿನ ಓಟ ನೆಮ್ಮದಿಯ ಹಿಂಡುವತ್ತ
ಶೂನ್ಯ ಕನಸಲ್ಲಿ ನೆಮ್ಮದಿಯಿತ್ತು
ನಾಳೆ ಎಂಬುದು  ನಕಾಶೆ ಸೇರಿತ್ತು

ಚಂಚಲ ಮನಸ್ಸಿನ ಪರದೆಯಲ್ಲಿ
ನಾಟಕೀಯ ಬೆಳವಣಿಯದ್ದೇ ಗುಂಗು
ಸಾಮಾಜಿಕ ತಾಣಗಳೇ ಪ್ರಕೃತಿ ತಾಣಗಳಾಗಿವೆ
ವಸ್ತುಗಳೇ ಒಡನಾಡಿಗಳು ವಾಸ್ತವ ವಾಕರಿಕೆಯಾಗಿದೆ

ಬದುಕ ಬಿಡಾರ ಬರವಿಲ್ಲದೆ ಸಾಗಿತ್ತು
ನಗುವಿನ ದೋಣಿ ಅಂಬಿಗನಿಲ್ಲದೆ ಸಾಗಿತ್ತು
ಬದುಕು ಸಣ್ಣ ಹೊಂಡದ ಕಪ್ಪೆಯಂತಿದ್ದರು
ಖುಷಿಯ ಕಣಜವೇ ನಮ್ಮ ಕೈಯಲ್ಲಿತ್ತು

ಸಮುದ್ರವೇ  ಕೈಯಲ್ಲಿದ್ದರು ಖುಷಿಯ
ಹನಿಗಳು ಜೇಬಿನಲ್ಲಿ ಉಳಿಯುತ್ತಿಲ್ಲ
ಯೋಚನೆಗಳು ಸಾವಿರಾರು ಬಂದು
ಉಳಿದವರಿಗಿಂತ ಹೋಗುವವರೇ ಜಾಸ್ತಿ


Friday, 13 April 2018

ಹುಟ್ದಗಿಂದ ನೆಟ್ಟಗಿಲ್ಲ

ನಾನಂತೂ ಹುಟ್ದಗಿಂದ ನೆಟ್ಟಗಿಲ್ಲ
ಸುಮ್ನೆ ಅಂತೂ ಇರೋದೇ ಇಲ್ಲ
ಮಾಡೋದೆಲ್ಲ ತಲೆಕೆಟ್ ಕೆಲಸ
ತರ್ಲೆ ಮಾಡೋ ತಿರಬೋಕಿ ಲೈಫು
ಮೆಚ್ಚಿದೆ  ಮೆಚ್ಕೋಳಿ ಇಲ್ಲ ಅಂದ್ರೆ
ಇರುವೆನಾ ಬಿಟ್ಕೊಳಿ ಬಿಟ್ಕೊಳಿ

ಚಿಕ್ಕದಂತಾ ಫ್ಯಾಷನ್ ಅವಾಗ ಅವಾಗ
ಮಾಡ್ತೀನಿ ಗಡ್ಡ ಮೀಸೆ ಅಂತೂ ತಗಿಯೋಕೆ
ಬೇಜಾರು ವಜ್ರಮುನಿ ಲೂಕ್ಕಿಗೇನು ಕಡಿಮೆ ಇಲ್ಲ
ನೋಡೋರ್ಗೆ ಬೇಜಾರು ನಂಗಂತೂ ನೋ ಟೆನ್ಶನ್
ದೊಡ್ಡ ದೊಡ್ಡ ಕನ್ಸ್ಗಳು ನಂಕೈಯಲ್ಲಿ ನಿಲ್ಲಲ್ಲ
ಒಟ್ನಲ್ಲಿ ಯಾವಾಗೂ ಹ್ಯಾಪಿ ನೇ ಬಿಂದಸ್ಸು ನನ್ ಲೈಫು



Thursday, 12 April 2018

ಮುಗ್ದ ಮನದವಳು

ಒಂಚೂರು ಹುಸಿ ಕೋಪದವಳು
ಇವಳ ಕಂಡರೆ ಎಲ್ಲರಿಗೂ ಇಷ್ಟ
ನಿಭಾಯಿಸುವುದು ಬಲು ಕಷ್ಟ
ಮುಗ್ದ ಮಗುವಿನ ಮನದವಳು

ಹಗಲಲ್ಲೇ ಕಾಡುವ ಮೋಹಿನಿ ಇವಳು
ಇನ್ನ ರಾತ್ರಿಯ ಕಥೆ ಬಿಡಿ ಕಣ್ಣೀರ ವ್ಯಥೆ
ಸರಳ ನಗುವೇ ಇವಳಿಗೆ ಸರಮಾಲೆ
ಹಚ್ಚಿ ಕೊಂಡರಂತೂ ಕಚ್ಚೆ ತಿನ್ನುವಳು

ಬಲು ಬೇಜಾರು ಇವಳಿರದ ದಿನ
ವಟ ವಟ ಕಪ್ಪೆಯು ಸುಮ್ಮನಾಗವುದು
ಇವಳಿಗೆ ಪೈಪೊಟಿ ಕೊಡಲಾಗದೆ ಇನ್ನ
ಜೊತೆ ಇರುವವರ ಕಥೆ ಗೋವಿಂದ ಗೋವಿಂದ

ನಂಬಿದರೆ ನದಿಯನ್ನೇ ಹರಿಸುವಳು
ಕಾರಣವಿಲ್ಲದೆ ಕಣ್ಣೀರು ಹಾಕುವಳು
ಆದರೂ ಸೀದಾ ಸಾದಾ ಹುಡುಗಿ
ಸಿಗುವುದು ಬಲು ಅಪರೂಪ ನೋಡಿ 


ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...