Sunday, 22 July 2018

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ
ತರಹ ತರಹದ ಸ್ವಪ್ನಗಳು
ನಂಟಿನ ಬುತ್ತಿಯಲ್ಲಿ ಅಲ್ಲೊಂದು
ಇಲ್ಲೊಂದು  ಸಿಹಿ ನೆನಪುಗಳು

ವ್ಯಾಪಾರ ನಾನಾದೆ 
ವ್ಯವಹಾರ ಮಾಡದೆ
ಕೊಂಡವರು ಕಾಣೆಯಾದರು
ಕಣ್ಮುಚ್ಚಿ ನಾಕುಂತೇ ಏಕಾಂತಕ್ಕೆ ಮೆಚ್ಚಿ

ಖಾಲಿ ಕಡಲ ನೂಕು ನುಗ್ಗಲಲ್ಲಿ
ಮೀನು ಹಿಡಿಯೋಕೆ ಹಗ್ಗ ಜಗ್ಗಾಟ
ಪರದೆಯ ಹಿಂದೆ ನೂರಾರು ಕಳ್ಳರು
ಮುಂದೆ ಬಂದರೆ ನಾನೊಬ್ಬನೇ ನಾಯಕ


Wednesday, 18 July 2018

ಸರಹದ್ದು

ಪಯಣ ನನ್ನ ಯಾನದ ಕಡೆಗೆ
ನನ್ನ ದಿಕ್ಕಿಗೆ ನೂರೆಂಟು ನಂಟು
ನಡೆಯದೆ ಸಾಗಬೇಕು ನನ್ನ ದಾರಿ
ಒಂಚೂರು ದಣಿವಾಗದೆ ಸರಹದ್ದು
ಇನ್ನೆಲ್ಲಿ ಕೊನೆಯೋ ಹುಡುಕುತಲಿರುವೆ


Thursday, 12 July 2018

ಬಾ ಮಳೆಯೇ ಬಾ

ಬಾ ಮಳೆಯೇ ಬಾ ನಿನ್ನ
ಬೊಗರೆವ ಆರ್ಭಟಕ್ಕೆ ಭೂಮಿ
ತಾಯ ಮಡಿಲಿಗೆ ತಂಪಿನ ಸಿಂಚಲನ

ನಿನ್ನ ಆಟಕ್ಕೆ ಕಾದಿಹಳು
ಬೂತಾಯಿ ಕಾವನ್ನು ನುಂಗಿ
ಹೊಯ್ಯೋ ಮಳೆರಾಯ ಹೊಯ್ಯೋ

ಪಸರಿಸು ಹನಿಯ ಅಭಿಷೇಕ
ಕಾದು ಬೆಂಡಾದ ಕಾಡಿನ
ಹಸಿರಿನ ತೋರಣಕ್ಕೆ

ನಿನ್ನ ಹನಿಯ ಸಂಘಕ್ಕೆ
ಕಾದಿಹಳು ಬೂತಾಯಿ
ಅಬ್ಬರಿಸು ಕಣ್ಮುಚ್ಚಿ




Tuesday, 10 July 2018

ಪೂರ್ಣ ಚಂದ್ರ

ಅಮಾವಾಸೆಯಲ್ಲೂ ಪೂರ್ಣ ಚಂದ್ರ
ನಕ್ಕಿದ್ದಾನೆ ಕಾರಣ ಕೇಳಲು ನೀ ಮರೆತೇ
ಹೇಳದೆ ಹೋದರೆ ನಾ ಅದನ್ನ ಮರೆವೆ
ನಿನ್ನ ನಗುವ ನೋಡಲು ಹಾಲ್ಗೆನ್ನೆಯ
ಚಂದ್ರ ಬಾನಿಂದ ಕಲ್ತಿತ್ತು ಓಡೋಡಿ ಬಂದ


Monday, 9 July 2018

ಕಾಲ ಕಳೆಯದೆ ಇದ್ದೀತೆ

ನನ್ನ ಬದುಕಿಗೆ ಬಂದು
ನನ್ನನೆ ನೀ  ಕೊಂಡು
ಇಬ್ಬರ ಬಂಧನ ಶುರು
ಆದ ಮೇಲೆ ಮತ್ತೇನಿದೆ
ಕಾಲ ಕಳೆಯದೆ ಇದ್ದೀತೆ


Friday, 6 July 2018

ಅವಳು

ನನ್ನಲ್ಲಿನ ನಾನಲ್ಲದವನನ್ನು ಸೃಷ್ಟಿಸಿ
ಪ್ರೀತಿಯ ನೈವೈದ್ಯ ಬಡಿಸಿದವಳು
ನನ್ನ ಭಾವನೆಗಳ ಚಿಪ್ಪಿಗೆ
ಮುತ್ತುಗಳನ್ನು ತುಂಬಿಸಿ  ಜೊತೆಯಾದವಳು

ಇವಳೇ ಅವಳು ನನ್ನ ಸಾವಿರ
ದಿನಗಳ  ನಿದ್ದೆ ಗೆಡಿಸಿದವಳು
ಇವಳೇ ಅವಳು ಸಾವಿರ ವರ್ಷಗಳಿಂದ
ಕಾಯುತ್ತಿದ್ದ ಅದ್ಬುತ ಸುಂದರಿ

ಅವಳೆಂದರೆ ಪರಿಪೂರ್ಣ
ಅವಳೆಂದರೆ ಸಂಪೂರ್ಣ
ಅವಳಂದರೆ ಸಂತೋಷ
ಅವಳಂದರೆ ಪ್ರಪಂಚ


Sunday, 1 July 2018

ಅದ್ಬುತ ಸುಂದರಿ

ನಾ ಕಂಡೆ  ಅದ್ಬುತ ಸುಂದರಿಯ ನಿನಲ್ಲಿ
ಸೋಲಲು ಇನ್ನೇನು ಬೇಕು ನಾ ನಿನ್ನ ನೋಡಿದ ಮೇಲೆ
ಹೃದಯವೇ  ಕೈಜಾರಿದೆ ನೀ ನನ್ನ ಉಸಿರಾದಮೇಲೆ
ಓ ನನ್ನ ಬೆಳದಿಂಗಳ ಬಾಲೆ ನೀನಾದೆ ನನ್ನ ಬದುಕಿನ
ನಿತ್ಯ ಹಸಿರಿನ ಬಣ್ಣದ ಬದುಕಿನ ಕಥಾನಾಯಕಿ


Saturday, 30 June 2018

ಮಣ್ಣಿನ ದೋಣಿ

ಬದಲಾಗೋ ದೂಳಿನ ಕಣದಲ್ಲಿ
ಮೂರಂಕಿ ದಾಟದ ಆಯಸ್ಸು ಹಿಡಿದು
ಕನಸಿನ ಪೊರೆಯ ಜಾಲದಲ್ಲಿ ಸಿಕ್ಕ  ಮೀನಂತೆ
ಕೃತಕ ನೀರಲ್ಲಿ ಗಾಳಿಯ ಹುಡುಕ್ಕುತ್ತಿರುವೆ


Thursday, 28 June 2018

ಏಕಾಂಗಿ

ನಂಗಿನ್ನೂ ಗೊತ್ತಿಲ್ಲ
ಏಕಾಂಗಿ ನಾನಂತ
ನನ್ನವರೇ ನಂಹಿಂದೆ
ಬರುತ್ತಿಲ್ಲ ಎಂದು

ಒಬಂಟಿ ನೋವಲ್ಲು
ಸಾಂತ್ವನ ಹೇಳಿದ್ದು
ನನ್ನನ್ನೇ ಅಣುಕಿಸಿದ
ನನ್ನೊಳಗಿನ ಅಜ್ಞಾತ ವ್ಯಕ್ತಿ


Wednesday, 20 June 2018

ನಿನ್ನ ಕಣ್ಣ ಕಡಲು

ನಿನ್ನ ಕಣ್ಣ ಕಡಲಿನಲ್ಲಿ
ನನ್ನ ಕಥೆ ಬರೆದಿದ್ದರೆ
ಸಾಕು ನನ್ನ ಜನ್ಮ ಸಾರ್ಥಕ
ನಿನ್ನೊಳಗೆ  ಸೇರಿದ ನನ್ನ ಕಥೆಗೆ


ಸಂಪತ್ತು

ನೀ ತಂದೆ ಪ್ರೀತಿಯ ಸಂಪತ್ತು
ಬಿಟ್ಟರೆ ನನ್ನ ಬಾಳಿಗೆ ಆಪತ್ತು
ನಮಗಿಲ್ಲ ಯಾವುದೇ ಷರತ್ತು
ನಂಬಿಕೆಯೊಂದೇ ಸಿಹಿ ಮುತ್ತು
ಬದುಕಿಗೆ ನೀನೊಬ್ಬಳೇ ಸ್ವತ್ತು

Friday, 15 June 2018

ಇಲ್ಲೇ ಎಲ್ಲದೂ ಅಡಗಿದೆ

ಇಲ್ಲೇ  ಎಲ್ಲದೂ ಅಡಗಿದೆ
ಮತ್ತೆಲ್ಲಿ ಹೋಗಲಿ ಹೊಸ
ಕದವ ತಟ್ಟಲು

ನನ್ನ ಕನಸಿನ ಗೂಡಿದು
ಮತ್ತೆಲ್ಲಿ ಹಾರಲಿ ಹೊಸ
ತೀರವ ಸೇರಲು

ಪ್ರೀತಿಯ ಪಾತ್ರೆಯ ಪಥದಲ್ಲಿ
ಪ್ರತಿಫಲಿಸುತ್ತಿರುವೆ ಪಾರದರ್ಶಕನಾಗಿ
ಇಲ್ಲೇ ಇರುವೆ

ನಾಳೆಯ ನೂಕು ನುಗ್ಗಲು
ಬೇಕಿಲ್ಲ ನನಗೆ ಇಂದಿನ
ನೆಮ್ಮದಿಯೇ  ಸಾಕು


Wednesday, 23 May 2018

ಅಳುಬುರುಕಿ

ಸುಮ್ಮನಿರೇ ನನ್ನ ಸುಕುಮಾರಿ
ಸುಖ ಸುಮ್ಮನೆ ಸೊರಗಬೇಡ
ನಿನ್ನ ಕಂಗಳಲಿ ಮಳೆಯೇ
ಸುರಿಯುತ್ತಿದೆ ಸಾಕು ಮಾಡು

ಕಾರಣವಿಲ್ಲದ  ಕಣ್ಣೀರು ನಿನಗೆ
ಸರಿ ಕಾಣುವುದೇ ನಿನ್ನ ಕಣ್ಣೀರು
ಒರೆಸುವಾತ ನಾನಿಲ್ಲವೆ ಸಾಕು
ಮಾಡು ನಿನ್ನ ಕಣ್ಣೀರ ನರ್ತನ

ಪ್ರತಿ ಹನಿಗೂ ಬೆಲೆಯುಂಟು
ಸುಖ ಸುಮ್ಮನೆ ಹಾಕಬೇಡ
ನಿನ್ನ ಕಣ್ಣೀರ ಮುತ್ತ ಹೆಕ್ಕಿ
ಇಡುವವನಿಗೆ ಮೀಸಲಿಡು

ನಿನ್ನ ಕಣ್ಣೀರ ಹನಿಗೆ
ನನ್ನೀ  ಮನಸ್ಸೇ ಹಾನಿ
ನಗು ಹನಿಯ ಸೃಷ್ಟಿಸು
ನಿನ್ನ ಹೃದಯದ ಕಡಲಿಂದ 


Friday, 18 May 2018

ಸುರ ಸುಂದರಿಯ ನೋಟ

ಸುರ ಸುಂದರಿಯ ನೋಟ 
ನನ್ನ ಮನಸ್ಸಿನೊಳಗೊಂದು ಕಾಟ   
ಅವಳ ಹಿಂದೆ ಬಿದ್ದವರಿಗೆಲ್ಲಾ 
ಯಾರಾದರೂ ಮಾಡಿಸಲಿ ಮಾಟ
ನನ್ನ ಹುಡುಗಿಯ ತಂಟೆಗೆ 
ಬಂದರೆ ಬಿಳತ್ತೆ ಬಗನಿ ಗೂಟ 
ಅವಳ ಅಪ್ಪ ಒಪ್ಪಿಕೊಂಡ ದಿನವೇ 
ಹಾಕಿಸುತ್ತೇನೆ ಮದುವೆ ಮನೆ ಊಟ

ಸಂಪ್ರೀತಿ

ಮುಖವ ನೋಡಿ ಮಾಡೋ  ಪ್ರೀತಿ
ಮುಖವಾಡ ಕಳೆದ ಮೇಲೆ  ಪಜೀತಿ
ಮನಸ ನೋಡೋ  ನನ್ನ ಸಂಗಾತಿ
ನಿನ್ನ ಮೇಲೊಂದೆ ನನಗೆ ಸಂಪ್ರೀತಿ


Sunday, 6 May 2018

ಕಥೆಯಾದವಳು

ಹೇಗಾಯಿತು ಶುರುವು
ಎಂದು ತಿಳಿಯೆ ನಾನು
ನನ್ನೆಲ್ಲ ಕನಸುಗಳಿಗೆ ಹೊಸ
ಪಾತ್ರ ತಂದವಳು ನೀನು

ನನ್ನ ಮನಸ್ಸಿನ ಹೊಸ
ಸಂಚಲನಕ್ಕೆ ಸೂಜಿ ದಾರ
ಕೊಟ್ಟು ಪ್ರೇರೇಪಿಸಿದವಳು
ನನಗೆ ಪ್ರಪಂಚವಾದವಳು

ನಿನ್ನ ಗುಂಗಿನ ಸ್ವಪ್ನಗಳೆಲ್ಲ
ನಿನ್ನಷ್ಟೇ ಸುಂದರಿವಾಗಿ
ದಿನದಿಂದ ದಿನಕ್ಕೆ ಹಸಿರಿನ
ಹೆಮ್ಮರವಾಗಿ ಬೆಳೆದು ನಿಂತಿವೆ

ನನ್ನವಳು ನೀನು ನನ್ನ
ಬದುಕಿಗೆ ಚಿನ್ಹೆ ಆದವಳು
ನನ್ನವಳು ನೀನು ನನ್ನ
ಬದುಕಿಗೆ ಕಥೆ ಆದವಳು

Wednesday, 2 May 2018

ನಗು ಚಿಲುಮೆ

ನುಡಿದ ಸಿರಿಗೆ ಸಾಗರ ಶುದ್ದಿ
ಅಂತರಂಗವ ಅರ್ಥೈಸಲು
ಅಂದು ಕೊಂಡಂತೆ ಆಗದು
ಖುಷಿಯ ಕೊಟ್ಟು ಖುಷಿಯ
ಪಡೆದು ಮುಂದಣ ಸಾಗುವುದು ಲೇಸು

ನಗುವ ನಯನ ನೂಕಿದೆ
ಜೀವ ಚಿಲುಮೆ ಅದುವೇ
ಬಾಳ ಪುಟದ ಸೂಕ್ಷ್ಮ ಬಿಂದು
ಕಳೆದು ಹೋಗೋ ನಗುವಲೊಂದು
ಪುಟ್ಟ ಕನಸು ಮರು ಜನ್ಮತಾಳಿದೆ




Monday, 30 April 2018

ಒಲುಮೆ

ಕಥೆಯೊಂದು ಶುರುವಾಗಿದೆ ಮೆಲ್ಲನೆ
ನನ್ನ  ಭಾವನೆಗಳ ಬೀಗ ಒಡೆದು
ಎದೆಯೊಳಗೆ ಮಲಗಿದ್ದ ಕನಸು 
ನಿನ್ನಿಂದ ಬೆಳಗಲು ಅಣಿಯಾಗಿದೆ

ನಿನ್ನಿಂದಲೇ ಈ ರೋಮಾಂಚನ
ನಿನ್ನಿಂದಲೇ ಈ ಪ್ರೇಮಾಯಣ
ನಿನ್ನಿಂದಲೇ ಈ ಬಾವನಲಹರಿ
ನಿನ್ನಿಂದಲೇ ಈ ಬಂದನಾ 

ನೀ ಮೌನವಾದರೆ ನಾ ಮೌನವಾಗುವೆ

ನೀ ಮೌನವಾದರೆ
ನಾ ಮೌನವಾಗುವೆ
ಕಚ್ಚಾಡೋ ಕಾದಾಡೋ
ಪ್ರೀತಿಯ ತೇರು ಹೊತ್ತ
ಬದುಕ ಹಕ್ಕಿಗಳು ನಾವು

ಸುಮ್ಮನಿದ್ದರೆ ಬೇಗ ಸಾವಂತೆ
ಪಟ ಪಟನೆ ಮಾತಾಡೋ ಮಾತಿನ
ಗೊಂಬೆ ಸುಮ್ಮನಿದ್ದರೆ ಏನು ಚೆಂದ
ಮೌನದ ಮರ್ಯಾದೆ ತಗಿಯೋ
ಕೆಲಸ ನಮ್ಮಿಂದ ತಾನೇ ಪೂರ್ಣ


Sunday, 29 April 2018

ಮತದಾನ

ಗೆಲ್ಲಿಸಿ ಬಿಡುವೆವು ಇನ್ನೊಮ್ಮೆ
ಕಾಣಲು ಸಿಗುವಿರಾ ಮತ್ತೊಮ್ಮೆ
ಮಲಗಿದ ಶೂರರು ಎದ್ದಿಹರು ಮಗದೊಮ್ಮೆ
ಓಟು ಕೊಡಿ ಎಂದು ಬೇಡುತಿದ್ದರೆ ಒಂದೊಮ್ಮೆ

ನಿಮ್ಮದೇ ಆಡಳಿತ ಮುಂದಿನ ಐದು ವರ್ಷ
ಪ್ರಜೆಗಳಿಗೆ ತರಲಿ ಒಂಚೂರು ನೆಮ್ಮದಿಯ ಹರ್ಷ
ಮತ್ತೆ ಹುಟ್ಟು ಹಾಕದಿರಿ ಜಾತಿಗಳ ನಡುವೆ ಸಂಘರ್ಷ
ಅಲ್ಪವಾದರೂ ಕೆಲಸ ಮಾಡಿ ಮುಂದಿನ ಐದು ವರ್ಷ

ನಮ್ಮೆಲ್ಲ ಕೆಲಸವ  ಬಿಟ್ಟು ಮಾಡುತ್ತಿದ್ದೇವೆ ಮತದಾನ
ಪ್ರತಿಯೊಬ್ಬರೂ ಮಾಡುತ್ತಿದ್ದರೆ ನಿಮಗೆ ಮಹಾದಾನ
ಸ್ವಲ್ಪವಾದರೂ ಉಳಿಸಿಕೊಳ್ಳಿ ನಿಮ್ಮ ನಂಬಿಕೆಯ ವರದಾನ
ಪ್ರತಿಯೊಬ್ಬರ ಹಕ್ಕು ತಪ್ಪದೆ ಮಾಡಿ ನಿಮ್ಮ ದಾನ ಮತದಾನ


ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...