Tuesday, 26 September 2017

ಬಣ್ಣದ ಚಿಟ್ಟೆ

ಹಾರುತ್ತಿದೆ ಬಣ್ಣದ ಕಾಮನಬಿಲ್ಲು ತನ್ನ ವೈಯಾರವ ಬಿಚ್ಚಿ
ತನ್ನದೇ ಏಕಾಂತ  ತನ್ನದೇ ಮೂಕ ಲೋಕದ  ಮಾಯಾ ಜಾಲ
ಮಗದೊಮ್ಮೆ ನೋಡಲೇ ಬೇಕೆನಿಸುವ ಸುಂದರ ಬಣ್ಣದ ತೇರು
ಯಾವ ಗಾಳಿಗೂ ಅಂಜದೆ ಹಾರುತ್ತಿರುವೆ ಮನಸೋ ಇಚ್ಛೆ

ಹಾರುತ್ತಿದೆ ಬಣ್ಣದ ಕಾಮನಬಿಲ್ಲು ತನ್ನ ವೈಯಾರವ ಬಿಚ್ಚಿ
ನಿನ್ನ ಬಣ್ಣಕ್ಕೆ ನಾ ಮನಸೋತೆ  ಪ್ರತಿ ದಿನವೂ  ಹಂಬಲಿಸಿದೆ
ನಿನ್ನ ಹಿಡಿಯಲು ನನ್ನ ಬಾಲ್ಯವ  ಪಣಕಿಟ್ಟೆ ಸಿಕ್ಕಿದ್ದು ಮಾತ್ರ
ನಿನ್ನ ಖುಷಿಯ ನೆನಪುಗಳ ಮೂಟೆ  ನನ್ನ ಜೀವನದಂಗಡಿಗೆ



Tuesday, 19 September 2017

ಮುಗಿಲ ಮೇಲೊಂದು ಸುಳ್ಳು ಬಾವುಟ

ಮುಗಿಲ ಮೇಲೊಂದು ಸುಳ್ಳು ಬಾವುಟ 
ಹಾರಿಸಿ ಬಿಟ್ಟೆ ಕಾಮನಬಿಲ್ಲನ್ನು ಬಾಡಿಗೆ ಪಡೆದು 
ದೀರ್ಘಕಾಲದ ಖುಷಿಗೋಸ್ಕರ ಮಗದೊಮ್ಮೆ 
ಕಣ್ಮುಚ್ಚಿ ನಿಂತೇ ಸೂಜಿ ಸುಳ್ಳಿನ ಮರವನು ಏರಿ 

Sunday, 17 September 2017

ಬದುಕ ಭಾರ

ನಡುಕ ತಡೆದು ನುಗ್ಗಿ ನಡೆದು ಜಯದ ಬಾಗಿಲ ತೆರೆಯಲೇ
ಬದುಕ ಭಾರ ಬದಿಗೆ ಒತ್ತಿ ಹೇಡಿಯಾಗಿ ಓಡಿ ಹೋಗಲೇ
ಸುಳ್ಳು ಖುಷಿಯ ಹಿಗ್ಗಿ ಮೆರೆದು ಬದುಕ ದೂರ ಮರೆಯಲೇ
ಕಾಲ ಚಕ್ರದ ದೂಳ ಅರಿಯದೆ ಬಿದ್ದು  ಕೊಚ್ಚಿ ಹೋಗಲೇ

ಮುತ್ತಿನ ಹನಿ

ಆಗದ ಹೋಗದ ಮುಗಿಯದ ಮನಸ್ಸಿನ ಭಾವಕ್ಕೆ
ಹರಿಯದ ಅಂಗಿಯ ತೊಡಿಸಿ ಹೊಸ ಬಟ್ಟೆಯು
ಬೇಕೆಂದರೆ ಮನದ ತಿಕ್ಕಲಾಟಕ್ಕೆ ಹೊಣೆ ಯಾರು
ಅಲೆಗಳ ಹುಡುಕಿ ಅಲೆದಾಡುವ ನಮಗೆ
ಕಣ್ಣಲ್ಲಿ ಬರುವ ಮುತ್ತಿನ ಹನಿಗೆ ಬೆಲೆಯಿಲ್ಲವೇ 

Wednesday, 13 September 2017

ನಿಶಬ್ದ

ಮಳೆಯ ಸೋಗಿಗೂ ಮಳೆಯ ಸೂರಿಗೂ ತನ್ನದೇ ಇಂಪಿದೆ
ಹಳೆಯ ಹಾಡಿಗೂ ಹಳೆಯ  ಸಾಹಿತ್ಯಕ್ಕೂ ತನ್ನದೇ ಕಂಪಿದೆ
ಕೋಗಿಲೆಯು ಕವಿಯಾಗುವುದು  ಅದರಭಿರುಚಿಯ ಮನಗಂಡಾಗ
ನಿಶಬ್ದವೆ ಮಂಟಪವಾಗುವುದು ಮೌನ ಸೆಳೆದಾಗ


Wednesday, 6 September 2017

ಕಗ್ಗತ್ತಲು

ಶೂನ್ಯ ಶೃಂಗಾರದ ನೈಜ ಶಕ್ತಿಯ ಅವಾಸ್ತವಕ್ಕೆ ಕೃತಕ ಅರಿವೇ ಕಾರಣ
ಉತ್ತಮ ಯೋಚನೆಯ ಅಡೆತಡೆಗೆ ಅಪ್ರಬುದ್ದತೆಯೇ  ಅಡ್ಡಿಗಾಲು
ದೃಢ ಕಾರ್ಯದ ಯಶಸ್ಸಿನ ಹಿನ್ನಡೆಗೆ ನಕಾರಾತ್ಮಕತೆಯೇ ಮೂಲ
ಸಾಧನೆಯ ಸಾವಿಗೆ ಮನಸ್ಸಿನ ದುರ್ಬಲತೆಯೇ ಗುರಿಯಿರದ  ಬಾಣ  


Monday, 4 September 2017

ಉತ್ತಮ ನಿರ್ದೇಶಕ

ವರ್ಣರಂಜಿತ ಬಾಳ ಪುಸ್ತಕದ ಮುನ್ನುಡಿಗೆ ಬೇಕು
ಬಣ್ಣದಲಂಕಾರದ   ಹೊಳಪನು ನೀಡುವ ದಿಕ್ಸೂಚಿ
ಬದುಕ ಬಾಣಲೆಯಲ್ಲಿ ತೇಲಾಡಿ ಹೊರಬರಲು ಬೇಕು
ಪರದೆಯ ಸರಿಸಿ ಉತ್ತಮ ನಿರ್ದೇಶನ ನೀಡುವ ನಿರ್ದೇಶಕ



ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...