Friday, 21 November 2014

" ಮನಸ್ಸಿನ ಪಾತ್ರ"

                                                 

ನನ್ನ ಮನಸ್ಸಿನ ಚಲನಚಿತ್ರದಲ್ಲಿ ಮೂಡಿ ಬಂದ ಪಾತ್ರಗಳಿಗೆ ನಾನೇ ಪ್ರೇಕ್ಷಕ ನಾನೇ ನಿರ್ದೇಶಕ ನಾನೇ ನಿರ್ಮಾಪಕ

ಪರದೆಯ ಸರಿಸಿದರು ಪರದೆಯ ಸರಿಸದಿದ್ದರು ಸದ್ದು ಮಾಡುವುದು ನನ್ನೊಬ್ಬನೇ ಮತ್ತಾರಿಗೂ ಜಾಗವಿಲ್ಲ

ವಿಚಿತ್ರವಾದ ಸನ್ನಿವೇಶಗಳು ಸಂಶೋದನೆಗಳು ತಳಮಳಗಳು ವೇದನೆಗಳು ಕುಶಿಗಳು ಆನಂದಿಸುವವನು ನನ್ನೊಬ್ಬನೇ

ಬಾವನೆಗಳಿಗೆ ಬಾವೋದ್ವೇಗಕ್ಕೆ ಮನಸಿನ ಮಾತುಗಳಿಗೆ ಕನಸಿನ ಕೂಗಿಗೆ ಮಿಡಿತ ತುಡಿತಗಳಿಗೆ ಪಾತ್ರದಾರಿ ನಾನೇ

ಪಾಸ್‌ವರ್ಡ್ ಇಲ್ಲದ ಮನಸ್ಸು ಜೀವನದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಉತ್ತರವಿಲ್ಲದ ಪ್ರಶೆಯ ಸೃಸ್ಟಿಸಿದೆ

ಉತ್ತರ ಹುಡುಕಲು ಉತ್ತರ ದಿಕ್ಕಿಗೆ ಹೊರಟೆ ಹೋಗುವ ರಬಸದಲ್ಲಿ ಪ್ರಶೆಯೆ ಮಿಂಚಿ ಮಾಯವಾಯಿತು

ಕೆಲವೊಮ್ಮೆ ಪಾತ್ರಗಳು ವಿಚಿತ್ರ ದಿಕ್ಕಿನಲ್ಲಿ ಸಾಗಿ ಮೂಕಬಿನಯವು ನನ್ನಲ್ಲೇದು ಕಾಣುತ್ತದೆ

ನಾ ಮಾಡುವ ಪಾತ್ರಗಳಿಗೆ ನಾನೇ ಹೊಣೆ ನಾನೇ ಪ್ರಾರಂಬ ಗೀತೆ ನಾನೇ ಮುಕ್ತಾಯ ಗೀತೆ 

Tuesday, 11 November 2014

"matte mungaru "




ಮತ್ತೆ ಮಿಡಿಯುತ್ತಿದೆ ಮಿಂಚಿನ ಗೀತೆ ನೀನೇ ಬೇಕೆಂದು
ನನಗನಿಸಿದನ್ನು ಹೆವುವ ತವಕ ನನ್ನೆದೆಯಲ್ಲಿ ಮೂಡುತ್ತಿದೆ
ನೀ ಕೇಳಿದರು ಕೇಳದಿದ್ದರೂ ನಾ ಹೇಳದೆ ತಿರೆನು
ನೀ ತೊರೆದರು ಜರಿದರೂ ಜರಿಯಂತೆ ಹಿಂದೆ ಸಾಗುವೆನು
ನಾ ಕಂಡ ಕನಸುಗಳು ಮರೀಚಿಕೆಯಾಗಿ ಮರುಬೂಮಿ ಸೇರಿವೆ
ಮತ್ತೆ ಬರುವೆಯೆಂದು ಕಾದು ಕುಳಿತಿರುವೆ ನಿಶ್ಚಿಂತನಾಗಿ.

Monday, 10 November 2014

"ಯಾರಿಲ್ಲದ ತೀರದಲ್ಲಿ"

                        
ಯಾರಿಲ್ಲದ ತೀರದಲ್ಲಿ ನೀನಿಲ್ಲದ ಊರಿನಲ್ಲಿ ಹೇಗಿರಲಿ ನಾನೊಬ್ಬನೇ
ಮಂಜಾಗಿರುವ ಹೃದಯದಲ್ಲಿ ತಿಳಿ ನೀರಾಗಿ ಬಂದು ಕಣ್ಣೀರೋರೆಸು
ಕಣ್ಣಂಚಿನ ಕಡು ಕೋಪ ಬಿಟ್ಟು ಕಣ್ಗಾವಲಾಗಿ ಬಾ ಗೆಳತಿ
ಹೊಸ ತರದ ವ್ಯಾಕ್ಯನಗಳನ್ನು ಸೃಸ್ತೀಕರಿಸಲಾಗದು ನಿನಗೆ ಹೇಳಲು
ಬಂದೆ ಬರುವೆ ಎಂದು ನೆನಪಿನ ಅಲೆಯಲಿ ಅರಳಿ ಕೂತಿರುವೆ
ಬಾಡಿ ಹೋಗುವ ಮುನ್ನ ಬಂದು ಬದುಕಿಸು ಇ ಬಡ ಜೀವವ.

Friday, 7 November 2014

" ಕಾಣದ ಕಂಬನಿ"

                         
ಕಣ್ಣೀರು ಬಾರದ ಕಣ್ಣಿಗೆ ಕಣ್ಣೀರು ಒರೆಸೋರು ಯಾರು
ಪ್ರೀತಿ ಅರಳದ ಹೃದಯದಲ್ಲಿ ಪ್ರೀತಿಯ ಚಿಲುಮೆ ಹುಟ್ಟಿಸೋರು ಯಾರು
ಕನಸನ್ನೇ ಕಾಣದ ಮನಸನ್ನು ಗೆಲ್ಲೋರು ಯಾರು
ಮನದ ನಿವೇದನೆಯ ಅಲೆಯಲ್ಲಿ ಇರುವವರಿಗೆ ಮನದಾಳಕ್ಕೆ ಇಳಿಯುವವರು ಯಾರು
ಮನದಾಳದ ಕಾಣದ ನೋವನ್ನು ಕಂಡಂತವರು ಯಾರು
ಯಾರು ಯಾರು ಯಾರು ನಾನ್ಯಾರು ಎನ್ನುವುದೇ ಮರೆಯಾಗಿದೆ ಯಾರಿಲ್ಲದೆ.

Tuesday, 28 October 2014

ಮುಸ್ಸಂಜೆ ಹೊತ್ತಲ್ಲಿ ನಾ ಕಂಡ ಕನಸು




ಮುಸ್ಸಂಜೆ ಹೊತ್ತಲ್ಲಿ ಉತ್ತರ ದಿಕ್ಕಲ್ಲಿ ಮುಖಮಾಡಿ ನಿಂತಾಗ
ನನ್ನ ಕನಸುಗಳ ಕೊಂಡಿ ಇಳಿ ಇಳಿಯಾಗಿ ಬಿಡಿಸಿ ಕೊಂಡಾಗ
ಸೂರ್ಯನ ಕೊನೆಯ ಕಿರಣಗಳು ನನ್ನನೆಬ್ಬಿಸುತ್ತಿದೆ ಈ ದಿನವೂ ತೆರೆಯಾಗುತ್ತಿದೆ ಎಂದು
ಪ್ರಪಂಚವೇ ಕೈಬಿಸಿ ಕರೆಯುತ್ತಿದೆ ಎಂದಂತನಿಸುತ್ತಿದೆ ನನ್ನೂರಿನ ಪ್ರಕೃತಿಯ ಸೊಬಗಿನಲಿ
ಆಗ ನನಗನಿಸಿತು ನಮ್ಮ ಊರೇ ಎಸ್ಟು ಚೆಂದ ಎಂದು ಆ ಮಹಾನಗರದಲ್ಲಿ ಏನಿದೆ ಎಂದು.

Saturday, 25 October 2014

ಮೌನ


ಮೌನ ಮುರಿದು ಮಾತಾಡು ಮೌನೇಶ್ವರಿ
ನಿನ್ನ ಮೌನ ಕೊಲ್ಲುತ್ತಿದೆ ನನ್ನ ಮಿಂಚಿನ ಬಾಣದಂತೆ
ಮರೆಯ ಬೇಡ ಗೆಳತಿ ಇ ನಿನ್ನ ಗೆಳೆಯನ ನೆನಪ
ಮೌನ ಮಾತನಾಡುವುದೆಂದು ಕಾದು ಕುಳಿತಿರುವೆ
ಸಾಕು ನಿಲ್ಲಿಸು ನಿನ್ನ ಮೌನ ಮತ್ತೆ ಮರುಕಳಿಸದಿರಲಿ ನಿನ್ನಲ್ಲಿ.

Friday, 10 October 2014

ನನ್ನ ಭಾಷೆ ನನ್ನ ಕೈಯಲ್ಲಿ

ಮೊನ್ನೆ ನನಗಾದ ಒಂದು ಚಿಕ್ಕ ಅನುಬವ ಹೇಳಿ ಕೊಳ್ಳೋಕೆ ಇಸ್ಟ ಪಡ್ತೀನಿ
ಸರಿ ಸುಮಾರು ರಾತ್ರಿ 9 ಗಂಟೆ ಆಗಿತ್ತು ಒಬ್ಬಾತ ಬಂದು ಟೈಮ್ ಅಂದ
ನಾನು ಮಾಮೂಲಿಯಾಗಿ ಕನ್ನಡದಲ್ಲಿ 9 ಗಂಟೆ 15 ನಿಮಿಷಗಗಳು 2-3 ಸೆಕೆಂಡುಗಳು ಅಂದೆ
ಆ ವ್ಯಕ್ತಿಗೆ ಯಾವ ತರ ಅನಿಸ್ತೊ ಗೊತಿಲ್ಲ ಸಕತ್ ಕುಶಿಯಾಗಿಬಿಟ್ಟ ಆಮೇಲೆ ನನಗೆ ಥ್ಯಾಂಕ್ಸ್ ಹೇಳಿ ಹ್ಯಾಂಡ್ ಶೇಕ್ ಕೊಟ್ಟ
ನಾನು ಕೇಳಿದೆ ಯಾಕ್ರೀ ಟೈಮ್ ಹೇಳಿದ್ರೆ ಹ್ಯಾಂಡ್ ಶೇಕ್ ಕೊಡ್ತೀರಾ ಅಂತ
ಆ ವೈಕ್ತಿ ಅಂದ ನಾನು ಮೈಸೂರು ಕಡೆಯವನು ನಿಮ್ಮ ತರಹ ಕನ್ನಡ ಮಾತಾಡೋರು ಸಿಕ್ಕು ಬಹಳ ದಿನ ಆಗಿತ್ತು ಅದಕ್ಕೇ ಹ್ಯಾಂಡ್ ಶೇಕ್ ಕೊಟ್ಟೆ ಅಂತ ಅವನ ಪರಿಚಯ ಮಾಡಿಕೊಳ್ತಾ ಈ ಮಹಾನಗದಲ್ಲಿ ಯಾರು ಕನ್ನಡದೋರೊಯಾರು ಪರ ಭಾಷಿಗರೊ ಅಂತ ಹೇಳಿ ಹೊರಟುಹೋದ
ಒಂದು ಮಾತು ಅಂತೂ ನಿಜ ನಾವು ಬೆಳಿದಿದ್ದು ಕನ್ನಡದಲ್ಲಿ ಉಸಿರಾಡ್ತಾ ಇರೋದು ಕನ್ನಡ ನಾಡಲ್ಲಿ ನಮ್ಮ ಅಪ್ಪ ಅಮ್ಮ ಸ್ನೇಹಿತರ ಪ್ರೀತಿ ಸಿಗುತ್ತಾ ಇರೋದು ಕನ್ನಡದಲ್ಲಿ ನಾವು ಬಾಲ್ಯದಲ್ಲಿ ಆಟ ಆಡಿದ್ದು ಜಗಳ ಮಾಡಿದ್ದು ಕನ್ನಡದಲ್ಲಿ ಅನ್ನೋದನ್ನೇ ಮರೆತು ಬಿಟ್ಟಿದೀವಿ.
ಎಲ್ಲಿಯವರೆಗೂ ನಾವು ನಮ್ಮ ತನವನ್ನ ತೋರಿಸಿಕೊಳ್ಳೋದಿಲ್ಲ ಅಲ್ಲಿಯ ವರೆಗೂ ನಾವು ಹೇಗೆ ಇರ್ತೀವಿ ಅನ್ನೋದಂತೂ ನಿಜ
ಬೇರೆ ಭಾಷಿಗರ ಜೊತೆ ನಾವು ಅವರವರ ಭಾಷೆಗೆ ಇಳಿದು ಮಾತಾಡ್ತಾ ಇರೋದೆ ಎಲ್ಲೋ ಒಂದು ಕಡೆ ಈ ಮಹಾನಗರದಲ್ಲಿ ಕನ್ನಡ ಕಡಿಮೆಯಾಗೋಕೆ ಕಾರಣವಾಗ್ತಾ ಇದೆ.
ನವೆಂಬರ್ ತಿಂಗಳು ಬಂದ್ರೆನೆ ನಾವು ಕನ್ನಡಿಗರು ಇಲ್ಲಾ ಬೆಳಗಾವಿದಲ್ಲಿ ಜಗಳ ಆದ್ರೇನೇ ಗೊತ್ತಾಗೋದು ನಾವು ಕನ್ನಡಿಗರು ಅಂತ ಅ ಸಮಯದಲ್ಲೇ ತೋರಿಸಿಕೊಳ್ಳೋದು ನಾವು ಕನ್ನಡಿಗರು ಅಂತ ನಾವು ಹುಟ್ಟುತ್ತಾನೆ ಕನ್ನಡಿಗರು ಅನ್ನೋದನ್ನ ಮರೆತು ಬಿಟ್ಟಿದೀವಿ. ಕರ್ನಾಟಕದಲ್ಲಿ ಕನ್ನಡ ಮಾತಾಡಿ ಅನ್ನೋ ತರ ಆಗಿ ಹೋಗಿದೆ ಅದು ಈ ಮಹಾನಗರದಲ್ಲಿ ಇರೋ ಜನರ ಹತ್ರ..
                                                                                                                            

                                                                                                                             ನಾನು ಕನ್ನಡಿಗ

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...